ಹಂಪಿ ಜಾತ್ರೆ ಪ್ರಯುಕ್ತ ಯಶಸ್ವಿಯಾಗಿ ಜರುಗಿದ 30ನೇ ವರ್ಷದ ಭಕ್ತಿ ಭಾವನ ಕಾರ್ಯಕ್ರಮ
The 30th annual Bhakti Bhavana program was successfully held on the occasion of Hampi Fair
ಲೋಕದರ್ಶನ ವರದಿ
ವಿಜಯನಗರ 03 : ಹಂಪಿ ಜಾತ್ರೆಯ ಪ್ರಯುಕ್ತ ಕಡ್ಡಿರಾಂಪುರ ಹಂಪಿಯ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದವು ವಿರುಪಾಕ್ಷೇಶ್ವರ ದೇವಸ್ಥಾನದ ಸಹಯೋಗದೊಂದಿಗೆ 30ನೇ ವರ್ಷದ ಭಕ್ತಿ ಭಾವನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ ಹಂಪಿ ವಿದ್ಯಾರಣ್ಯ ಪೀಠಾಧಿಪತಿಗಳಾದ ಶಂಕರಾಚಾರ್ಯ ವಿದ್ಯಾರಣ್ಯ ಭಾರತೀ ಸ್ವಾಮೀಜಿಗಳು ಆರ್ಶಿವಚನ ನೀಡಿ ಮಾತನಾಡಿದ ಶ್ರೀಗಳು ನಮ್ಮ ಸನಾತನ ಧಾರ್ಮಿಕ ಸಂಸ್ಕೃತಿಗಳನ್ನು ನಮ್ಮ ಯುವ ಸಮೂಹ ರೂಡಿಸಿಕೊಳ್ಳಬೇಕು. ನಮ್ಮದು ಸರ್ವೆಜನೋ ಸುಖಿನೋಭವಂತು ಎನ್ನುವ ಸಂಸ್ಕೃತಿ ಎಲ್ಲರನ್ನು ಪ್ರೀತಿಸುವ ಧರ್ಮ ನಮ್ಮದು ಗುರುಹಿರಿಯರಲ್ಲಿ ಗೌರವ, ದೇವರಲ್ಲಿನ ಭಕ್ತಿ ಸಂಗೀತ ಭಕ್ತಿ ಮಾರ್ಗಕ್ಕೆ ನಮ್ಮನ್ನು ಕರೆದೊಯ್ಯುವ ಸಾಧನ ನಮ್ಮ ಯುವಕರು ವಿದೇಶ ಸಂಸ್ಕೃತಿಗೆ ಮಾರುಹೋಗದೆ ನಮ್ಮ ದೇಶಿಯ ಕಲೆಗಳನ್ನು ರೂಢಿಸಿಕೊಳ್ಳಬೇಕೆಂದರು. ಹಾಗೆಯೇ ಹಂಪಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಗಂಗಾಧರ ಮಾತನಾಡಿ ಮರಿದೇವ ಸಂಗೀತ ಕಲಾವೃಂದವು ಸತತ ಹಂಪಿ ಕ್ಷೇತ್ರದಲ್ಲಿ 30 ವರ್ಷಗಳಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿರುವುದು ಇಲ್ಲಿ ಬಂದಂತಹ ಭಕ್ತಾದಿಗಳಿಗೆ ದೇಶ ವಿದೇಶ ಪ್ರವಾಸಿಗರಿಗೆ ನಮ್ಮ ಸಾಂಸ್ಕೃತಿಕ ಮನೋರಂಜನೆ ನೀಡುತ್ತಿರುವುದು ಎಲ್ಲರಿಗೂ ಸಂತೋಷದ ವಿಷಯ ಎಂದರು. ಕಾರ್ಯಕ್ರಮದಲ್ಲಿ ಹಂಪಿ ಗ್ರಾ.ಪಂ. ಮಾಜಿ ಸದಸ್ಯರುಗಳಾದ ಕೆ.ಗೋಪಾಲ್, ಕೆ.ಷಣ್ಮುಖಗೌಡ, ಹಾಗೂ ಕಲಾವೃಂದದ ಸಂಸ್ಥಾಪಕ ಅಧ್ಯಕ್ಷ ಅಂಗಡಿ ವಾಮದೇವ, ವಿಶ್ವನಾಥ ಹಿಟ್ನಾಳ್, ಹೆಚ್.ಕೆ.ತರುಣಕುಮಾರ, ಇತರ ಮುಖಂಡರುಗಳು ಭಾಗವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಮಲ್ಲಿಕಾರ್ಜುನ ತುರುವನೂರು ಅವರಿಂದ ಹಿಂದೂಸ್ಥಾನಿ ಸಂಗೀತ, ಸುಮಾ ಕಾಳಘಟ್ಟರವರಿಂದ ಸುಗಮ ಸಂಗೀತ, ಅಂಗಡಿ ಸಮರ್ಥ, ಸ್ಪೂರ್ತಿ ಭಟ್ ಹುಲಿಗಿ, ಜಮೂನರಾಣಿ ಹಿರೇಮಠ, ಶ್ರೀರಕ್ಷ ಪಾಟೀಲ್‌ರವರಿಂದ ಭಕ್ತಿಗೀತೆಗಳು, ಗಂಗಾವತಿ ವೈಷ್ಣವಿ ತಂಡದಿಂದ ಭರತನಾಟ್ಯ, ಕಂಪ್ಲಿ ಭರತನಾಟ್ಯ ಕಲಾವಿದರಿಂದ ಸಮೂಹ ನೃತ್ಯ, ಪ್ರದರ್ಶನ ಹಾಗೂ ವಿವಿಧ ಕಲಾವಿದರಿಂದ ಕಾರ್ಯಕ್ರಮಗಳು ರಾತ್ರಿ 12:00ಗಂಟೆಗಳ ವರೆಗೆ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತ್ತು. ಕಾರ್ಯಕ್ರಮದ ನಿರೂಪಣೆಯನ್ನು ಎ.ದೊಡ್ಡಬಸಪ್ಪ, ಕೆ.ಪಂಪನ ಗೌಡ ನೆರವೇರಿಸಿದರು. ಸದ್ರಿ ವರದಿಯನ್ನು ತಮ್ಮ ಘನ ಪತ್ರಿಕೆ ಮತ್ತು ಮಾಧ್ಯಮದಲ್ಲಿ ಪ್ರಕಟಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 