ಮಹಾನ್ ಕ್ರಾಂತಿಕಾರಿ ಭಗತ್‌ಸಿಂಗ್ ರವರ 119ನೇ ಜನ್ಮದಿನ ವಿವಿಧೆಡೆ ಆಚರಣೆ
The 119th birth anniversary of the great revolutionary Bhagat Singh is being celebrated in various p
ಧಾರವಾಡ 28 : ಭಗತ್‌ಸಿಂಗ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಇಂದು ಧಾರವಾಡದ ಕೆಸಿಡಿ ಮೈದಾನ, ಆರ್ ಎನ್ ಶೆಟ್ಟಿ ಮೈದಾನ, ಕೆಸಿ ಪಾರ್ಕ ಮೈದಾನದ ಸೇರಿದಂತೆ ಹಲವಾರುಹಳ್ಳಿ, ಕೊಳಗೇರಿಯ ವಿದ್ಯಾರ್ಥಿಗಳ ನಡುವೆ ಭಗತ್‌ಸಿಂಗ್ ಅವರ ಜನ್ಮದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಭಗತ್‌ಸಿಂಗ್ ಅವರ ವಿಚಾರಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಭಗತ್‌ಸಿಂಗ್, ಕ್ರಾಂತಿ ಮತ್ತು ಸ್ವಾತಂತ್ರ್ಯದ ಬಗೆಗಿನ ತಮ್ಮ ವಿಚಾರವನ್ನು ಎಷ್ಟು ಪ್ರಬಲವಾಗಿ ಹರಡಿದ್ದರೆಂದರೆ ಸಾವಿರಾರು ಜನ ಭಗತ್‌ಸಿಂಗ್ ಅವರ ಆಶಯವನ್ನು ಈಡೇರಿಸಲು ಪ್ರಾಣತ್ಯಾಗಕ್ಕೆಸಿದ್ಧರಾಗಿ ಬೀದಿಗಿಳಿದರು. ಭಗತ್‌ಸಿಂಗ್ ಅವರ ಪ್ರಕಾರ ಸ್ವಾತಂತ್ರ್ಯದ ಪರಿಕಲ್ಪನೆ ಹೀಗಿತ್ತು “ಕೇವಲ ಸ್ವಾತಂತ್ರ್ಯ ಪಡೆಯುವುದುನಮ್ಮ ಉದ್ದೇಶವಲ್ಲ. ಬ್ರಿಟೀಷರಿಂದ ಪಡೆದ ಸ್ವಾತಂತ್ರ್ಯ ನಮ್ಮ ದೇಶದ ಕೆಲವೇ ಕೆಲವು ಶ್ರೀಮಂತ ವರ್ಗಕ್ಕೆ ವರ್ಗಾವಣೆಯಾದರೆ, ಅದು ನಿಜವಾದ ಸ್ವಾತಂತ್ರ್ಯವಾದೀತೆ? ಹೀಗೆ ಸಿಗುವಸ್ವಾತಂತ್ರ ್ಯನಮ ್ಮದೇಶದ ಸಾಮಾನ್ಯ ಜನರಬದುಕಿನಲ್ಲಿ ಏನಾದರೂ ಬದಲಾವಣೆಯನ್ನು ತರಲುಸಾಧ್ಯವೇ? ದೇಶದ ರೈತರ, ಬಡ ಕೂಲಿ-ಕಾರ್ಮಿಕರ ಜೀವನ ಉತ್ತಮವಾಗುವುದೇ? ಸ್ವಾತಂತ್ರ್ಯ ಪಡೆಯುವುದು ಮಾತ್ರವೇ ನಮ್ಮ ಉದ್ದೇಶವಲ್ಲ, ಅದು ಮೊದಲ ಹೆಜ್ಜೆಮಾತ್ರ! ನಮ್ಮ ಗುರಿಯಿರುವುದು ಒಂದು ಉನ್ನತವಾದ ರಾಷ್ಟ್ರವನ್ನು ನಿರ್ಮಾಣ ಮಾಡುವುದು. ಯಾವ ರಾಷ್ಟ್ರತನ್ನೆಲ್ಲ ಜನರಿಗೆ ಸಮಾನವಾಗಿ ಬದುಕುವ ಹಕ್ಕನ್ನು ನೀಡುತ್ತದೆಯೋ, ಯಾವ ರಾಷ್ಟ್ರಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವುದಿಲ್ಲವೋ, ಯಾವ ರಾಷ್ಟ್ರ ಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ಕೊನೆಗಾಣಿಸುವುದೋ ಅಂತಹ ರಾಷ್ಟ್ರ".*
ಭಗತ್‌ಸಿಂಗ್ ಮಾನವನ ಜೀವನವನ್ನು ಪ್ರೀತಿಸಿದರು ಮತ್ತು ಮಾನವನ ಘನತೆಯನ್ನು ಎತ್ತಿಹಿಡಿದರು. ಇಂದಿಗೂ ಕೂಡ ದಿನ ನಿತ್ಯಮಾನವರ ಘನತೆಯ ಹರಣವಾಗುತ್ತಿದೆ. ಯಾವುದೇ ವಯಸ್ಸಿನಮಿತಿ ಇಲ್ಲದೆ ಹೆಣ್ಣುಮಕ್ಕಳಮೇಲೆ ಅವ್ಯಾಹತವಾಗಿ ದೌರ್ಜನ್ಯ ನಡೆಯುತ್ತಿದೆ. ಹಸಿವು, ಬಡತನ, ನಿರುದ್ಯೋಗ ಮುಂತಾದ ಸಮಸ್ಯೆಗಳು ಸಮಾಜದಲ್ಲಿ ತಾಂಡವವಾಡುತ್ತಿದೆ. ಬೆರಳೆಣಿಕೆಯ ಕಾರ್ೊರೇಟ್ ಮನೆತನಗಳ ಹಿಡಿತದಲ್ಲಿರುವ ದೇಶದ ಬಂಡವಾಳ ಶಾಹಿವ್ಯವಸ್ಥೆಯು ಅವಿಶ್ರಾಂತವಾಗಿ ದುಡಿಯುವ ರೈತ ಕಾರ್ಮಿಕರು ಹಾಗೂ ಜನಸಾಮಾನ್ಯರ ಬದುಕನ್ನು ಅಸಹನೀಯ ಗೊಳಿಸಿದೆ. ಕೆಲವು ಜನರ ಸಂಪತ್ತು ಸಹಸ್ರ ಕೋಟಿಗಳಲ್ಲಿ ಹೆಚ್ಚುತ್ತಿದ್ದರೆ ಬಹುಪಾಲು ಜನರು ತೀವ್ರಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ. ಕಾಂಗ್ರೆಸ್ -ಬಿಜೆಪಿಸೇರಿದಂತೆ ದೇಶದ ಎಲ್ಲಾ ಬಂಡವಾಳ ಶಾಹಿಪಕ್ಷಗಳು ಭಗತ್‌ಸಿಂಗ್ ಸೇರದಂತೆ ಸ್ವಾತಂತ್ರ್ಯಸಂಗ್ರಾಮದ ಕ್ರಾಂತಿಕಾರಿಗಳು ಹಾಗೂ ಎಲ್ಲಾಹೋರಾಟಗಾರರ ಕನಸುಗಳಿಗೆ ದ್ರೋಹ ಎಸಗಿವೆ. ತೀವ್ರ ಅಸಮಾನತೆಯು ತುಂಬಿರುವ ಪ್ರಸಕ್ತಸಾಮಾಜಿಕ ವ್ಯವಸ್ಥೆಯವಿರುದ್ಧ ದೇಶದವಿದ್ಯಾರ್ಥಿ, ಯುವಕರುಸಂಘಟಿತರಾಗಿ ಹೋರಾಡುವುದನ್ನು ತಡೆಯಲು ಜಾತಿ ಧರ್ಮಭಾಷೆ ಮುಂತಾದ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದುಸಮಾಜವನ್ನು ಒಡೆಯಲಾಗುತ್ತಿದೆ. ಆಳುವವರ ಷಡ್ಯಂತರವನ್ನು ಸೋಲಿಸಿನಾವು ಇಂದುಭಗತ್‌ಸಿಂಗರ ಚಿಂತನೆಗಳನ್ನು ಅರಿತು ಕೊಳ್ಳಬೇಕಿದೆ. ಕ್ರಾಂತಿಯೆಂದರೆ ಪ್ರಸಕ್ತ ಸಾಮಾಜಿಕವ್ಯವಸ್ಥೆಯನ್ನು ಸಂಪೂರ್ಣವಾಗಿ ಕಿತ್ತೊಗೆದುಸಮಾಜವಾದಿ ವ್ಯವಸ್ಥೆಯಸ್ಥಾಪನೆ. ಕೋಮುವಾದವು ಜನಗಳ ಆರ್ಥಿಕ ಪರಿಸ್ಥಿತಿಯೊಂದಿಗೆ ಸಂಬಂಧಹೊಂದಿದೆ ಎಂಬುದನ್ನುಭಗತ್‌ಸಿಂಗ್ ಗಮನಿಸಿದರು ಮತ್ತು ಧರ್ಮವನ್ನು ರಾಜಕೀಯದಿಂದ ಹೊರಗಿಡಬೇಕು ಎಂದರು. ತಾವು ಎದುರಿಸುತ್ತಿರುವಸಮಸ್ಯೆಗಳ ವಿರುದ್ಧವಿದ್ಯಾರ್ಥಿ ಯುವಜನರು ಬೀದಿಗಿಳಿಯುತ್ತಿರುವುದು ಸ್ಪೂರ್ತಿದಾಯಕವಿಷಯವಾಗಿದೆ. ಮೊನ್ನೆ ತಾನೆ ಧಾರವಾಡದಲ್ಲಿನಿರುದ್ಯೋಗದ ಸಮಸ್ಯೆವಿರುದ್ಧ ಯುವಜನರು ಬೃಹತ್‌ಹೋರಾಟ ನಡೆಸಿದ್ದಾರೆ. ಎರಡು ತಿಂಗಳುಗಳಿಂದ ಕಾಲೇಜಿಗೆಬಂದು ಪಾಠಗಳಿಂದ ವಂಚಿತರಾಗಿರುವ ಸರ್ಕಾರಿ ಪದವಿವಿದ್ಯಾರ್ಥಿಗಳು ರಾಜ್ಯವಾಪಿ ತರಗತಿ ಬಹಿಷ್ಕಾರನಡೆಸಿ ಹೋರಾಟ ಮಾಡಿದ್ದಾರೆ.
ಶಿಕ್ಷಣದ ವ್ಯಾಪಾರಿಕರಣ, ನಿರುದ್ಯೋಗ, ಹಸಿವು, ಬಡತನ, ಹೆಣ್ಣುಮಕ್ಕಳಮೇಲಿನ ದೌರ್ಜನ್ಯ ಮುಂತಾದಸಮಸ್ಯೆಗಳನ್ನು ತಡೆಯಲು ಹಾಗೂ ಶಿಕ್ಷಣ-ಮಾನವತೆ-ಸಂಸ್ಕೃತಿ ಉಳಿಸಲು ,ಅನ್ಯಾಯದವಿರುದ್ಧ ಧ್ವನಿ ಎತ್ತಲು ಭಗತ್‌ಸಿಂಗ್ ಅವರವಿಚಾರಗಳಿಂದ ಸ್ಫೂರ್ತಿಪಡೆದು ಸಾರ್ವಜನಿಕ ಶಿಕ್ಷಣವನ್ನು ಉಳಿಸಲು ಮುಂಬನ್ನಿ ಎಂದು ವಿದ್ಯಾರ್ಥಿಗಳಿಗೆ ಕರೆನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದಸಿಂಧು ಕೌದಿ, ಜಿಲ್ಲಾ ಕಾರ್ಯದರ್ಶಿ ಶಶಿಕಲಾಮೇಟಿ, ಕಚೇರಿ ಕಾರ್ಯದರ್ಶಿಸ್ಪೂರ್ತಿ, ಜಿಲ್ಲಾಸಂಘಟನಕಾರ ಸಿದ್ದು ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 