ದಿ. ಡಾ. ಜೆ.ವಿ. ಗೌಡರ ಜನ್ಮದಿನಾಚರಣೆ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮ

ದಿ. ಡಾ. ಜೆ.ವಿ. ಗೌಡರ ಜನ್ಮದಿನಾಚರಣೆ ಸ್ಮರಣಾರ್ಥ  ಉಪನ್ಯಾಸ ಕಾರ್ಯಕ್ರಮ The. Dr. J.V. Gowda's birthday commemoration lecture program

ಲೋಕದರ್ಶನ ವರದಿ 

ಧಾರವಾಡ  02: ಕೃಷಿ ವಿಶ್ವವಿದ್ಯಾಲಯದ ಧಾರವಾಡದ ಮೊದಲ ಕುಲಪತಿಗಳಾದ ದಿ. ಡಾ. ಜೆ.ವಿ. ಗೌಡರ ಜನ್ಮದಿನಾಚರಣೆ ಸ್ಮರಣಾರ್ಥ ಏಪ್ರೀಲ್ 02, 2026 ರಂದು ಬೆಳಿಗ್ಗೆ 11.00 ಗಂಟೆಗೆ, ಸಮುದಾಯ ವಿಜ್ಞಾನ, ಮಹಾವಿದ್ಯಾಲಯದ ಸಭಾಂಗಣದಲ್ಲಿ ಡಾ. ಜೆ.ವಿ. ಗೌಡ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನದ ಸಂಸ್ಥಾಪನಾ ದಿನದ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವು ದೀಪ ಬೆಳಗಿಸಿ, ಡಾ. ಜೆ.ವಿ. ಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಪ್ರಾರಂಭವಾಯಿತು. ಡಾ. ಜೆ.ವಿ. ಗೌಡರು ಭಾರತದ ಪ್ರಸಿದ್ದ ಸೈಟೋಜಿನೆಟಿಸಿಸ್ಟ್‌ರಾಗಿದ್ದರು, ಸಾವಿರಾರು ವಿದ್ಯಾರ್ಥಿಗಳನ್ನು ಕೃಷಿ ಕ್ಷೇತ್ರದಲ್ಲಿ ಪ್ರೇರೇಪಿಸಿದ ಅತ್ಯುತ್ತಮ ಪ್ರಾಧ್ಯಾಪಕರು ಹಾಗೂ ಮಹಾನ್ ದೃಷ್ಟಿಕೋನವನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು.

ಮುಖ್ಯ ಅತಿಥಿಗಳಾಗಿ ಹಾಗೂ ಉಪನ್ಯಾಸಕರಾಗಿ ಆಗಮಿಸಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾರತೀಯ ಶೇಂಗಾ ಸಂಶೋಧನಾ ಸಂಸ್ಥೆ, ಜುನಾಗಡನ್ (ಋಂಖ-ಋಉಖ), ನಿರ್ದೇಶಕರಾದ ಡಾ. ಎಸ್‌. ಕೆ. ಬೇರಾರವರು “ಭಾರತದಲ್ಲಿ ಹೈ ಓಲಿಕ್ ಶೇಂಗಾ: ಲ್ಯಾಬ್ ಟು ಲ್ಯಾಂಡ್ ಯಶಸ್ವಿ ಪಯಣ ಮತ್ತು ಅದಕ್ಕೂ ಮೀರಿದ ಬೆಳವಣಿಗೆ” ಎಂಬ ವಿಷಯದ ಮೇಲೆ ಉಪನ್ಯಾಸವನ್ನು ನೀಡಿದರು. ಅವರು ಭಾರತದಲ್ಲಿನ ಶೇಂಗಾ ಬೆಳೆಯ ವಿಸ್ತೀರ್ಣ, ಉತ್ಪಾದನೆ, ಉತ್ಪಾದಕತೆ ಮತ್ತು ತಲಾ ವ್ಯಕ್ತಿಗೆ ಲಭ್ಯವಿರುವ ಎಣ್ಣೆ ಬಳಕೆಯ ಬಗ್ಗೆ ಸಮಗ್ರ ಚಿತ್ರಣವನ್ನು ನೀಡಿದರು.

ಶೇಂಗಾದಲ್ಲಿ ಸುಮಾರು 50ಅ ಎಣ್ಣೆ ಅಂಶವಿರುವುದರಿಂದ, ಇದರ ಬೆಳೆಯ ವಿಸ್ತೀರ್ಣವನ್ನು ಹೆಚ್ಚಿಸುವ ಮೂಲಕ ದೇಶದ ಖಾದ್ಯ ತೈಲದ ಅವಶ್ಯಕತೆಯನ್ನು ಬಹುಮಟ್ಟಿಗೆ ಪೂರೈಸಬಹುದು ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು. ಅವರು ಐಸಿಎಆರ್‌-ಋಉಖ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾದ ಹೈ ಓಲಿಕ್ ಆಮ್ಲ ಹಾಗೂ ಹೆಚ್ಚಿನ ಉತ್ಪಾದನಾ ಸಾಮರ್ಥ್ಯ ಹೊಂದಿರುವ ‘ಗಿರ್ನಾರ್‌-4’ ಮತ್ತು ‘ಗಿರ್ನಾರ್‌-5’ ಶೇಂಗಾ ತಳಿಗಳನ್ನು ಪರಿಚಯಿಸಿದರು. ಈ ತಳಿಗಳನ್ನು ಮಾನ್ಯ ಪ್ರಧಾನಮಂತ್ರಿಗಳು 17 ಬಯೋ-ಫೋರ್ಟಿಫೈಡ್ ಬೆಳೆಗಳೊಂದಿಗೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಶೇಂಗಾ ಬೆಳೆ ವಿಸ್ತೀರ್ಣ ಕುಗ್ಗುತ್ತಿರುವ ಹಿನ್ನೆಲೆಯಲ್ಲಿ, ಈ ಬೆಳೆಯ ಸಾಂಪ್ರದಾಯಿಕ ಪ್ರದೇಶಗಳಲ್ಲಿ ವಿಸ್ತೀರ್ಣ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಕರೆ ನೀಡಿದರು. ದಿ. ಡಾ. ಜೆ.ವಿ.ಗೌಡ ಅವರ ಧರ್ಮಪತ್ನಿ ಶ್ರೀಮತಿ ಸುಶೀಲಾ ಜೆ. ಗೌಡರವರು ಭಾಗವಹಿಸಿದ್ದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೃ.ವಿ.ವಿ., ಧಾರವಾಡದ ಕುಲಪತಿಗಳಾದ ಡಾ. ಪಿ.ಎಲ್‌. ಪಾಟೀಲ ರವರು ಬೆಳೆ ಅಭಿವೃದ್ಧಿಯ ಸಂಶೋಧನೆಯಲ್ಲಿ ನವೀನ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಉತ್ಪಾದಕತೆಯನ್ನು ಹೆಚ್ಚಿಸಬಹುದೆಂದು ಕರೆ ನೀಡಿದರು. ಡಾ. ಜೆ.ವಿ.ಗೌಡರವರ ಶೈಕ್ಷಣಿಕ ಮತ್ತು ಸಂಶೋಧನಾ ದೃಷ್ಟಿಕೋನಗಳನ್ನು ಮುಂದುವರೆಸುವುದಾಗಿ ಭರವಸೆ ನೀಡಿದರು. ಕೃಷಿ ವಿಶ್ವವಿದ್ಯಾಲಯ, ಧಾರವಾಡದ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳಾದ ಶ್ರೀಮತಿ ಪಾರ್ವತಿ ಎಸ್‌.ಕುರ್ಲೆ,      ಶ್ರೀ ವೀರನಗೌಡ ಪಿ. ಪೋಲಿಸಗೌಡರ್, ಶ್ರೀ ರವಿಕುಮಾರ ಮಾಳಿಗೇರ, ಶ್ರೀ ಬಸವರಾಜ ಕುಂದಗೋಳಮಠ ಹಾಗೂ ಶ್ರೀ ಮಾಲತೇಶ ಶ್ಯಾಗೋಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಶ್ರಾಂತ ಉಪಕುಲಪತಿಗಳು, ವಿಶ್ವವಿದ್ಯಾಲಯದ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಡಾ. ಜೆ.ವಿ. ಗೌಡ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನದ ಸದಸ್ಯರು ಭಾಗವಹಿಸಿದ್ದರು.  ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಹಾಗೂ ಸದಸ್ಯರನ್ನು ಕೃಷಿ ಮಹಾವಿದ್ಯಾಲಯ, ಧಾರವಾಡದ ವಿದ್ಯಾಧಿಕಾರಿ ಮತ್ತು ಪ್ರತಿಷ್ಠಾನದ ಉಪಾಧ್ಯಕ್ಷರಾದ ಡಾ. ಅಶೋಕ ಸಜ್ಜನ, ಸ್ವಾಗತಿಸಿದರು. ಡಾ. ಎಸ್‌. ಎ. ದೇಸಾಯಿ, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು (ಜಿಪಿಬಿ) ಮತ್ತು ಪ್ರತಿಷ್ಠಾನದ ಕಾರ್ಯದರ್ಶಿಗಳ ವಂದನಾರೆ​‍್ಣಗಳೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.