ಲೋಕದರ್ಶನ ವರದಿ
ತಾಳಿಕೋಟೆ 12: ಪಟ್ಟಣದ ಪುರಸಭೆ ಚುನಾವಣೆಯು ಘೋಷಣೆಯಾದ ಖುಷಿ ಸ್ಪರ್ಧೆ ಆಕಾಂಕ್ಷೀಗಳಿಗೆ ಸಕ್ಕರೆ ಕುಡಿದಂತಾದರೆ ಇನ್ನೊಂದೆಡೆ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಲು ಅಗತ್ಯ ಬೇ ಭಾಕಿ ಪ್ರಮಾಣ ಪತ್ರ ಪಡೆಯಲು ತಮ್ಮ ಆಸ್ತಿಕರದ ಜೊತೆಗೆ ಸೂಚಕರ ಆಸ್ತಿ ಕರ ಪಾವತಿಯಿಂದ ಪುರಸಭೆ ಬೊಕ್ಕಸಕ್ಕೆ 12 ಲಕ್ಷಕ್ಕೂ ಅಧಿಕ ಕರ ಭಾಕಿ ಪಾವತಿಯಾಗಿದೆ.
ಪುರಸಭೆಯಿಂದ ಪ್ರತಿ ವರ್ಷ ಕರಭಾಕಿ ತುಂಬಲು ಏಷ್ಟೇ ಶಂಕನಾದ ಮೋಳಗಿಸಿದರೂ ತಮ್ಮದೇ ತಾಚಾರದಲ್ಲಿ ಮುನ್ನಡೆದಿದ್ದ ಕೆಲವರು ಚುನಾವಣೆ ಉಮೇದುವಾರಿಕೆ ಸಲ್ಲಿಸಲು ಮುಂದಾಗಿದ್ದಾರೆ ತಮ್ಮ ಆಸ್ತಿ ಮತ್ತು ನೀರಿನ ಕರ ಅಲ್ಲದೇ ಇನ್ನೀತರವಾಗಿ ಪುರಸಭೆಗೆ ಕಟ್ಟಬೇಕಾದ ಕರಭಾಕಿಯ ಜೊತೆಗೆ 4 ಜನರ ಸೂಚಕರ ಕರ ಭಾಕಿಯನ್ನು ಪಾವತಿಸುವ ಹೊಣೆ ಹೊತ್ತುಕೊಳ್ಳುವದು ಸ್ಪದರ್ಾ ಆಕಾಂಕ್ಷೀಗಳಿಗೆ ಅನಿವಾರ್ಯವಾಗಿಬಿಟ್ಟಿದೆ. ಇದರಿಂದ ಸೂಚಕರಾಗುವ ಪ್ರತಿಯೊಬ್ಬರಿಗೂ ಲಕ್ಕಿ ಆಫರ್ ಸಿಕ್ಕಂತಾಗಿದೆ.
ಪುರಸಭೆಗೆ ಆಸ್ತಿಕರ, ನೀರಿನ ಕರ ಒಳಗೊಂಡಂತೆ ಇನ್ನಿತರಾಗಿ ಪುರಸಭೆಗೆ ಕಟ್ಟಬೇಕಾದ ಕರವನ್ನು ಪ್ರತಿವರ್ಷ ತುಂಬವರಕ್ಕಿಂತ ಭಾಕಿ ಉಳಿಸಿಕೊಂಡವರೇ ಹೆಚ್ಚಾಗಿದ್ದಾರೆ ಪುರಸಭೆಯ 23 ವಾಡರ್ುಗಳ ಪೈಕಿ ಪ್ರತಿವಾಡರ್ಿಗೆ 8 ರಿಂದ 10 ಜನರು ಸ್ಪರ್ಧೆ ಆಕಾಂಕ್ಷೀಗಳು ಹುಟ್ಟುಕೊಂಡಿದ್ದಾರೆ ಕೆಲವರು ರಾಜಕೀಯ ಪಕ್ಷಗಳ ಮೇಲೆ ಸ್ಪರ್ಧೆಗೆ ಇಚ್ಚೆಪಟ್ಟರೇ ಇನ್ನೂ ಕೆಲವರು ಪಕ್ಷೇತರವಾಗಿ ಸ್ಪರ್ಧೆಗೆ ಇಚ್ಚೆಪಟ್ಟಿದ್ದಾರೆ ಪಕ್ಷದಿಂದ ಸ್ಪದರ್ಿಸುವವರು ಕೇವಲ ಒಬ್ಬ ಸೂಚಕನನ್ನು ಕೊಟ್ಟರೆ ಸಾಕು ಆದರೆ ಪಕ್ಷೇತರವಾಗಿ ಸ್ಪದರ್ಿಸುವವರು 4 ಜನ ಸೂಕರ ಅಗತ್ಯವಿದೆ ಈ ಎಲ್ಲ ಸೂಚಕರ ಕರಭಾಕಿ ಸಂಪೂರ್ಣವಾಗಿ ತುಂಬಿ ಬೇಬಾಕಿ ಪ್ರಮಾಣ ಪತ್ರ ಸಲ್ಲಿಸಿದ್ದರೆ ಸ್ಪದರ್ಾ ಆಕಾಂಕ್ಷೀ ಸಲ್ಲಿಸಿದ ಉಮೇದುವಾರಿಕೆಗೆ ತೊಂದರೆಯಾಗುವದಿಲ್ಲಾ ಚುನಾವಣಾ ಆಯೋಗ ಅಗತ್ಯ ದಾಖಲೆ ಸೂಚಿಸಿದ್ದರಲ್ಲಿ ಬೇಭಾಕಿ ಪ್ರಮಾಣ ಪತ್ರ ಕಡ್ಡಾಯಗೊಳಿಸಿದೆ ಈ ಪ್ರಮಾಣ ಪತ್ರ ಇಲ್ಲದಿದ್ದರೆ ಉಮೇದುವಾರಿಕೆ ತಿರಸ್ಕಾರಗೊಳ್ಳುವ ಸೂಚನೆಯನ್ನು ಚುನಾವಣಾಧಿಕಾರಿಗಳು ಪುರಸಭೆಯ ಮುಂದುಗಡೆ ಇಟ್ಟಿರುವ ಸೂಚನಾ ಫಲಕದಲ್ಲಿ ಅಳವಡಿಸಿದ್ದಾರೆ.
ಹತ್ತುವರ್ಷಗಳಿಂದ ಕರ ಬಾಕಿ
ಸಾಮಾನ್ಯವಾಗಿ ಪಟ್ಟಣದ ಭಹುತೇಕರು ಆಸ್ತಿಕರ ಅಲ್ಲದೇ ನೀರಿನ ಮತ್ತು ಇನ್ನಿತರ ಕರವನ್ನು ಸುಮಾರು ಹತ್ತಕ್ಕೂ ಹೆಚ್ಚು ವರ್ಷಗಳಿಂದ ಭಾಕಿ ಉಳಿಸಿಕೊಂಡಿದ್ದಾರೆ ಪುರಸಭೆಯಿಂದ ಸಾಕಷ್ಟು ಭಾರಿ ಕರಭಾಕಿಗೆ ರೀಯಾಯಿತಿಯನ್ನು ಕೂಡಾ ಕೋರಿ ಬಿತ್ತಿಪತ್ರ ಅಲ್ಲದೇ ತಿಂಗಳಾನುಗಟ್ಟಲೇ ಶಂಕನಾದವನ್ನು ಮೊಳಗಿಸಿದರೂ ಯಾವುದೇ ಪ್ರಯೋಜನೆಗೆ ಬಂದಿದ್ದಿಲ್ಲಾ ಆದರೆ ಈ ಭಾರಿಯ ಪುರಸಭೆ ಚುನಾವಣೆ ಪ್ರತಿವಾಡರ್ಿನಲ್ಲಿ ಸುಮಾರು 10 ಕ್ಕೂ ಹೆಚ್ಚು ಜನರು ತಮ್ಮ ಪ್ರತಿಷ್ಠೇಯನ್ನು ಹೆಚ್ಚಿಸಿಕೊಳ್ಳಲು ಸ್ಪದರ್ಾ ಆಕಾಂಕ್ಷೀಗಳಾಗಿದ್ದಾರೆ ಹೀಗಾಗಿ ಸುಮಾರು ವರ್ಷಗಳಿಂದ ಭಾಕಿ ಉಳಿದುಕೊಂಡಿದ್ದ ತಮ್ಮ ಆಸ್ತಿ ಕರದ ಜೊತೆಗೆ ಸೂಚಕರ ಕರಪಾವತಿಯನ್ನು ತಾವೇ ಮಾಡುತ್ತಿರುವದು ಮೇಲ್ನೋಟಕ್ಕೆ ಕಾಣತೊಡಗಿದೆ ಇದರಿಂದ ಚುನಾವಣೆ ಅಧಿಸೂಚನೆ ಘೋಷಣೆಯಾದ ಎರಡೇ ದಿನದಲ್ಲಿ 12 ಲಕ್ಷಕ್ಕೂ ಅಧಿಕ ಕರಭಾಕಿ ಪುರಸಭೆ ಭೋಕ್ಕಸ ಸೇರಿದೆ.
15 ಕ್ಕೆ ಬಿಫಾರ್ಮ ಘೋಷಣೆಯಾಗುವ ಸಾಧ್ಯತೆ
ಪಕ್ಷದ ಚಿನ್ಹೆಯಡಿ ಸ್ಪದರ್ೆ ಬಯಿಸಿ ಈಗಾಗಲೇ ಕೇಲವು ವಾರ್ಡಗಳಿಂದ ಟಿಕೇಟ್ ಆಕಾಂಕ್ಷೀಗಳು ಆಯಾ ಪಕ್ಷದ ಅಧ್ಯಕ್ಷರ ಬಳಿ ಟಿಕೇಟ್ಗಾಗಿ ಅಜರ್ಿಸಲ್ಲಿಸಿದ್ದಾರೆ. ಬಿಜೆಪಿ ಪಕ್ಷದಿಂದ ಸ್ಪರ್ಧೆ ಬಯಿಸಿ 15ವಾರ್ಡಗಳಿಂದ 32 ಜನರು ಅಜರ್ಿಸಲ್ಲಿಸಿದ್ದಾರೆ. ಅದೇ ರೀತಿಯಾಗಿ ಕಾಂಗ್ರೇಸ್ ಪಕ್ಷದಿಂದ ಸ್ಪದರ್ೆಬಯಿಸಿ 8 ವಾರ್ಡಗಳಿಂದ 14 ಜನರು ಟಿಕೆಟ್ ಬಯಿಸಿ ಅಜರ್ಿಸಲ್ಲಿಸಿದ್ದಾರೆ. ಇನ್ನೂ ಕೆಲವು ವಾರ್ಡಗಳಲ್ಲಿ ಉಮೇದುವಾರಿಕೆ ಸಲ್ಲಿಸುವ ಎದುರಾಳಿಅಭ್ಯರ್ಥಿಗಳ ಸಂಖ್ಯೆಗನುಗುಣವಾಗಿ ತಮ್ಮ ಲಾಭ ನಷ್ಟವನ್ನು ಅನುಸರಿಸಿ ಪಕ್ಷವೋ ಅಥವಾ ಪಕ್ಷೇತರವೋ ಎಂಬ ನಿರ್ಧಾರಕ್ಕೆ ಕಾದು ನೋಡುತ್ತಿದ್ದಾರೆ. ಪಕ್ಷದ ಬಿಫಾರ್ಮ ಬಯಿಸಿ ಟಿಕೇಟ್ಗಾಗಿ ಅರ್ಜಿ ಸಲ್ಲಿಸಿದವರಲ್ಲಿ ಯಾರಿಗೆ ಟಿಕೇಟ್ ನೀಡಬೇಕೆಂಬುದು ಬರಲಿರುವ ದಿ. 15 ಬುಧವಾರರಂದು ನಿರ್ಧರಿಸಿ ಅಂತಿಮಗೊಳಿಸಲಾಗುವದೆಂದು ಎರಡೂ ಪಕ್ಷದ ಮುಖಂಡರು ಪತ್ರಿಕೆ ಮಾಹಿತಿ ನೀಡಿದ್ದಾರೆ.
ಬೇಭಾಕಿ ಪ್ರಮಾಣ ಪತ್ರಬಯಿಸಿ ಎರಡು ದಿನದಲ್ಲಿ 95 ಜನರು ಅಜರ್ಿಸಲ್ಲಿಸಿದ್ದಾರೆ ಈಗಾಗಲೇ 84 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಈಗಾಗಲೇ 12 ಲಕ್ಷಕ್ಕೂ ಅಧಿಕ ಕರಭಾಕಿ ಜಮೆಯಾಗಿದೆ ಚುನಾವಣೆ ಹೊತ್ತಿಗೆ ಸುಮಾರು 30 ಲಕ್ಷರೂ ಜಮೆಯಾಗುವ ನಿರೀಕ್ಷೆ ಇದೆ.