ಮಾಸ್ಕೋ, ಜ. 28 ಬೊಕೊ ಹರಮ್ ದಾಳಿಯಲ್ಲಿ ಆರು ಮಂದಿ ಚಾಡಿಯನ್ ಸೈನಿಕರು ಸಾವನ್ನಪ್ಪಿದ್ದಾರೆ. ಮಾತ್ರವಲ್ಲ ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.ಸೋಮವಾರ ಮಧ್ಯಾಹ್ನ ಲೇಕ್ ಚಾಡ್ ಸುತ್ತಮುತ್ತಲ ಪ್ರದೇಶದಲ್ಲಿ ಉಗ್ರರು ಮತ್ತು ಚಾಡಿಯನ್ ಸೈನಿಕರ ನಡುವೆ ಘರ್ಷಣೆ ಸಂಭವಿಸಿದೆ ಎಂದು ಅಲ್ವಿದಾ ಸುದ್ದಿ ಪೋರ್ಟಲ್ ವರದಿ ಮಾಡಿದೆ. ಹಲವಾರು ವರ್ಷಗಳಿಂದ, ಬೊಕೊ ಹರಮ್ ಉಗ್ರಗಾಮಿ ಗುಂಪು ಭಯೋತ್ಪಾದಕ ದಾಳಿಯೊಂದಿಗೆ ಹಿಂಸಾತ್ಮಕ ಯುದ್ಧದಲ್ಲಿ ತೊಡಗಿದೆ. ನೆರೆಯ ನೈಜೀರಿಯಾ ಮತ್ತು ಇತರ ಆಫ್ರಿಕನ್ ದೇಶಗಳಲ್ಲಿ ಷರಿಯಾ ಕಾನೂನನ್ನು ಸ್ಥಾಪಿಸಲು ಈ ಗುಂಪು ಪ್ರಯತ್ನಿಸುತ್ತಿದೆ. 2015 ರಲ್ಲಿ ಈ ಗುಂಪು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಗೆ ಬೆಂಬಲದ ಪ್ರತಿಜ್ಞೆ ಮಾಡಿತು. ಕ್ಯಾಮರೂನ್, ಚಾಡ್, ನೈಜೀರಿಯಾ ಮತ್ತು ನೈಜರ್ ಸರ್ಕಾರಗಳು ಈ ಗುಂಪನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿವೆ.