ಹುಬ್ಬಳ್ಳಿಯಲ್ಲಿ ತೇರಾಪಂಥ ಹಸ್ತಕಲಾ ಉತ್ಸವ
Terapantha Handicraft Festival in Hubli
ಹುಬ್ಬಳ್ಳಿ 29: ತೇರಾಪಂಥ ಧರ್ಮ ಸಂಘದ ಇತಿಹಾಸದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ತೇರಾಪಂಥ ಹಸ್ತಕಲಾ ಉತ್ಸವವನ್ನು ನಗರದ ಕೇಶ್ವಾಪುರದ ನೂತನ ವಾಸುಪೂಜ್ಯ ಭವನದಲ್ಲಿ ಆಯೋಜಿಸಲಾಗಿತ್ತು.
ಪ್ರದರ್ಶನದ ಉದ್ಘಾಟನೆಯನ್ನು ಮುಖ್ಯ ಅತಿಥಿಯಾಗಿ ಸಂಸ್ಕಾರ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಮಾಜ ಸೇವಕ ಮಹೇಂದ್ರ ಸಿಂಘಿ ಅವರು ನೆರವೇರಿಸಿ ಮಾತನಾಡಿ, ಇಂತಹ ವಿಶಿಷ್ಟ ಪ್ರದರ್ಶನ ನೋಡುವುದು ನನ್ನ ಭಾಗ್ಯ. ಪೂಜ್ಯ ಮುನಿ ವೀನೀತ್ ಕುಮಾರ್ ಅವರ ಸಾನ್ನಿಧ್ಯದಲ್ಲಿ ಆಯೋಜಿಸಲಾದ ಪ್ರದರ್ಶನವು ಜೈನ ಸಮಾಜದ ಕಲೆ, ಸಾಧನೆ ಮತ್ತು ಸಂಸ್ಕೃತಿಯನ್ನು ಹತ್ತಿರದಿಂದ ತಿಳಿಯುವ ಅವಕಾಶ ನೀಡಿದೆ ಎಂದರು.
ಮುನಿ ವೀನೀತ್ ಕುಮಾರ್ ಅವರು ಮಾತನಾಡಿ, ತೇರಾಪಂಥ ಹಸ್ತಕಲಾ ಪ್ರದರ್ಶನವು ಒಂದು ವಿಶಿಷ್ಟ ಪ್ರಯತ್ನ. ಇದರಲ್ಲಿ ಸಾಧು-ಸಾಧ್ವಿಗಳು ನಿರ್ಮಿಸಿದ ಹಸ್ತಕಲೆ ಮತ್ತು ಚಿತ್ರಕಲೆಯ ಅದ್ಭುತ ಕೃತಿಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಹೇಳಿದರು.ಪ್ರದರ್ಶನದಲ್ಲಿ ಅನೇಕ ಆಕರ್ಷಕ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟವು. ಸಮಾರಂಭದಲ್ಲಿ ಪಾಲ್ಗೊಂಡ ಸಮಾಜ ಬಾಂಧವರು ಕಲೆ, ಆಧ್ಯಾತ್ಮ ಮತ್ತು ಪರಂಪರೆಯ ಸುಂದರ ಸಂಗಮಕ್ಕೆ ಸಾಕ್ಷಿಯಾದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 