ಭಾರತೀಯ ಸಂಸ್ಕೃತಿ ಉಳಿವಿಗೆ ದೇವಸ್ಥಾನಗಳು ಅವಶ್ಯಕ: ಶೇಖರ ಅಂಗಡಿ
Temples are essential for the survival of Indian culture: Shekhar Angadi
ಲೋಕದರ್ಶನ ವರದಿ
ಭಾರತೀಯ ಸಂಸ್ಕೃತಿ ಉಳಿವಿಗೆ ದೇವಸ್ಥಾನಗಳು ಅವಶ್ಯಕ: ಶೇಖರ ಅಂಗಡಿ
ಮಹಾಲಿಂಗಪುರ 21: ಪ್ರತಿಯೊಂದು ಊರು,ಗ್ರಾಮಗಳಲ್ಲಿರುವ ದೇವಸ್ಥಾನಗಳು ಹೆಚ್ಚು ಹೆಚ್ಚು ಬೆಳೆಯುತ್ತಿರಬೇಕು ಅಂದಾಗ ಮಾತ್ರ ನಮ್ಮ ಭಾರತೀಯ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಪುರಸಭೆ ಸದಸ್ಯ ಶೇಖರ ಅಂಗಡಿ ಹೇಳಿದರು.
ಕೆಂಗೇರಿಮಡ್ಡಿಯ ವಾರ್ಡ ನಂ 13 ರ ದುರ್ಗಮುರಿಗೇವ್ವ ದೇವಸ್ತಾನದಲ್ಲಿ ಪುರಸಭೆ 15 ನೇ ಹಣಕಾಸು ಅನುದಾನ ಅಂದಾಜು 3 ಲಕ್ಷ ವೇಚ್ಚದಲ್ಲಿ ನೂತನವಾಗಿ ನಿರ್ಮಾಣಗೋಳ್ಳಲಿರುವ ಕಂಪೌಂಡ ಗೋಡೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ದೇವಸ್ಥಾನಗಳಲ್ಲಿ ದೇವರ ನಾಮಸ್ಮರಣೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸೌಹಾರ್ಧತೆ ಬೆಳೆಯುತ್ತದೆ. ಅಲ್ಲದೆ ಇಂದಿನ ಯುವಕರು ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಗಾಳಿಗೆ ತೂರಿ ಮನ ಬಂದಂತೆ ನಡೆದುಕೊಳ್ಳುತ್ತಿದ್ದಾರೆ ಇದೆಲ್ಲ ನಿಲ್ಲಬೇಕಾದರೆ ದೇವಸ್ಥಾನಗಳು ಅಭಿವೃದ್ಧಿ ಹೊಂದಬೇಕು, ದೇವಸ್ಥಾನಗಳಿಗೆ ಜನರು ಬರುವುದರಿಂದ ಭಕ್ತಿ ಭಾವ ಬೆಳೆಯುತ್ತದೆ, ದೇವರಲ್ಲಿರುವ ನಂಬಿಕೆ ಹೆಚ್ಚಾದಾಗ ಮಾತ್ರ ನಮ್ಮ ಹಬ್ಬಹರಿದಿನಗಳು, ಸಂಪ್ರದಾಯ ಉಳಿಯಲು ಸಾಧ್ಯ. ಆದ್ದರಿಂದ ಪ್ರತಿಯೊಂದು ಗಲ್ಲಿ ಗಲ್ಲಿಗಳಲ್ಲಿ ದೇವಸ್ಥಾನಗಳು ಇರಬೇಕು, ಅಲ್ಲದೆ ಸರ್ಕಾರ ಜನರ ಒಳಿತಿಗಾಗಿ ಮಾಡಿರುವ ಇಂಥ ಯೋಜನೆಗಳ ಲಾಭವನ್ನು ಎಲ್ಲರೂ ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ದುರ್ಗಮುರಿಗೇವ್ವ ದೇವಸ್ಥಾನದ ಪೂಜಾರಿ ನಾಗಪ್ಪ ಕೋಳಿ ಮಾತನಾಡಿ ಈ ದೇವಸ್ಥಾನಕ್ಕೆ ನಿತ್ಯ ನೂರಾರು ಜನರು ಬಂದು ತಾಯಿ ಆರ್ಶಿವಾದ ಪಡೆದುಕೊಳ್ಳುತ್ತಾರೆ. ಅಲ್ಲದೆ ಬಂದ ಭಕ್ತರ ಇಷ್ಟಾರ್ಥಗಳನ್ನು ತಾಯಿ ಈಡೇರಿಸುತ್ತಾಳೆ ಎಂಬ ನಂಬಿಕೆ ಜನರಲ್ಲಿದೆ. ಕಾರಣ ಇಂಥ ದೇವಸ್ಥಾನಗಳಲ್ಲಿ ಪ್ರತಿವರ್ಷ ಸಾಕಷ್ಟು ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಇಂಥ ದೇವಸ್ಥಾನಗಳಿಗೆ ಸರ್ಕಾರದ ನೆರವು ಅವಶ್ಯವಾಗಿದೆ. ಸರ್ಕಾರ, ಮತ್ತು ಭಕ್ತರ ನೆರವಿನಿಂದ ಮಾತ್ರ ಇಂಥ ದೇವಸ್ಥಾನಗಳ ಅಭಿವೃದ್ಧಿ ಸಾಧ್ಯ ಎಂದರು.
ವಾರ್ಡಿನ ಮುಖಂಡರಾದ ಮಹಾದೇವ ಸಾವಂತ, ಗಂಗಪ್ಪ ದಿನ್ನಿಮನಿ, ಮಾನಿಂಗ ಶಿವಣಗಿ, ಮಹಾಂತೇಶ ಅವಟಗಿ, ಪರಸು ಅಮರಾವತಿ, ರಮೇಶ ಕೋಳಿ, ನಾಗೇಶ ಬಜಂತ್ರಿ, ಪ್ರಶಾಂತ ಮುಖ್ಯನ್ನವರ ಸೇರಿದಂತೆ ಹಲವರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 