ತೆಹ್ರಾನ್ ಯುದ್ಧ ಬಯಸುವುದಿಲ್ಲ, ಆತ್ಮರಕ್ಷಣೆಗಾಗಿ ಅಮೆರಿಕದ ನೆಲೆಗಳ ಮೇಲೆ ದಾಳಿ: ವಿದೇಶಾಂಗ ಸಚಿವ

ಮಾಸ್ಕೋ, ಜ 08 ಇರಾಕ್ನಲ್ಲಿ ಅಮೆರಿಕ ಮಿಲಿಟರಿ ನೆಲೆಗಳ ಮೇಲೆ ಆತ್ಮರಕ್ಷಣೆಗಾಗಿ ದಾಳಿ ನಡೆಸಲಾಗಿದೆಯೇ ಹೊರತು, ತೆಹ್ರಾನ್ ಯುದ್ಧ ಬಯಸುವುದಿಲ್ಲ ಎಂದು ಇರಾಕ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವದ್ ಝರೀಫ್ ಹೇಳಿದ್ದಾರೆ. "ಯಾವುದೇ ಆಕ್ರಮಣಶೀಲತೆಯ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತೇವೆ" ಎಂದು ಜರೀಫ್ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. ಇದಕ್ಕೂ ಮೊದಲು, ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ರ್ಸ (ಐಆಜರ್ಿಸಿ) ಇರಾಕ್ನಲ್ಲಿನ ಯುಎಸ್ ನೆಲೆಗಳ ಮೇಲೆ (ಎಬರ್ಿಲ್ ಮತ್ತು ಐನ್ ಅಲ್ ಅಸಾದ್ ಏಬರ್ೆಸ್ನಲ್ಲಿ) ಬುಧವಾರದ ಆರಂಭದಲ್ಲಿ ಕ್ಷಿಪಣಿ ದಾಳಿಯನ್ನು ಸೊಲೈಮಾನಿ ಹತ್ಯೆಗೆ ಪ್ರತೀಕಾರ ಕಾರ್ಯಾಚರಣೆ ಎಂದು ಘೋಷಿಸಿತು.