ಶಿಕ್ಷಕ ವೃತ್ತಿ ಎಲ್ಲಕ್ಕಿಂತ ಶ್ರೇಷ್ಠ : ಅರವಿಂದ ಮನಗೂಳಿ

ಶಿಕ್ಷಕ ವೃತ್ತಿ ಎಲ್ಲಕ್ಕಿಂತ ಶ್ರೇಷ್ಠ : ಅರವಿಂದ ಮನಗೂಳಿ Teaching profession is the best of all: Aravind Managuli

ದೇವರಹಿಪ್ಪರಗಿ 22: ಪ್ರಪಂಚದ ಎಲ್ಲಾ ವೃತ್ತಿಗಳಲ್ಲಿ ಶಿಕ್ಷಕರ ವೃತ್ತಿ ಪರಮ ಪವಿತ್ರ ವೃತ್ತಿಯಾಗಿದೆ. ವಿಜ್ಞಾನ ಹಾಗೂ ತಂತ್ರಜ್ಞಾನ ಇಂದು ಇಷ್ಟೊಂದು ವೇಗಗತಿಯಲ್ಲಿ ಸಾಗುತ್ತಿರುವುದಕ್ಕೆ ಅದಕ್ಕೆ ಮೂಲಕಾರಣ ಶಿಕ್ಷಕರು ಎಂದು ಸಿಂದಗಿಯ ಎಚ್‌.ಜಿ. ಕಾಲೇಜಿನ ಉಪನ್ಯಾಸಕರಾದ ಡಾ.ಅರವಿಂದ ಮ ಮನಗೂಳಿ ಅವರು ಹೇಳಿದರು.

ಪಟ್ಟಣದ ಕಲ್ಮೇಶ್ವರ ದೇವಸ್ಥಾನದಲ್ಲಿ ಶನಿವಾರದಂದು ನಡೆದ ನಿವೃತ್ತ ಶಿಕ್ಷಕರಾದ ಭೀಮನಗೌಡ ಗು ಪಾಟೀಲ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು.ಸರ್ಕಾರಿ ಶಾಲೆಗಳ ಶಿಕ್ಷಕರು ಪ್ರತಿಭಾವಂತರಾಗಿದ್ದು,ಸರ್ಕಾರಿ ಶಾಲೆಗಳ ಮತ್ತಷ್ಟು ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸಬೇಕಾಗಿದೆ. ಶಾಲು ಹಾಗೂ ಹಾರಕ್ಕಾಗಿ ಬಳಸುವ ಹಣವನ್ನು ರೈತರ ಹಾಗೂ ಸೈನಿಕರ ನಿಧಿಗೆ ನೀಡುವ ಮೂಲಕ ಶ್ರೇಷ್ಟತೆಯನ್ನು ಮೆರೆಯೋಣ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಸ್‌. ಬೇವನೂರ ಅವರು ಬಿ.ಜಿ.ಪಾಟೀಲ ಗುರುಗಳು ತಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ರೀತಿ ಹಾಗೂ ನೆರೆದಿದ್ದ ಅಪಾರ ಜನಸ್ತೋಮವೇ ಅವರ ವ್ಯಕ್ತಿತ್ವವನ್ನು ತಿಳಿಸುತ್ತದೆ ಎಂದು ಹೇಳಿದರು.  

 ದೇವರಹಿಪ್ಪರಗಿ ತಾಲ್ಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷ ಡಾ.ಆರ್‌. ಆರ್‌.ನಾಯಕ,ಮಡಿವಾಳ ಮಾಚಿದೇವರ ಪ್ರತಿಷ್ಟಾನದ ಅಧ್ಯಕ್ಷ ಬಿ.ಎಮ್‌. ಪಾಟೀಲ,ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಚ್‌. ವಾಲೀಕಾರ ಮಾತನಾಡಿದರು. ಸ್ಥಳೀಯ ಗದ್ದುಗೆಮಠದ ಷ.ಬ್ರ.ಮಡಿವಾಳೇಶ್ವರ ಮಹಾಸ್ವಾಮಿಗಳು ದಿವ್ಯಸಾನಿಧ್ಯವನ್ನು ವಹಿಸಿದ್ದರು.ಪರದೇಶಿಮಠದ ಸತೀಶ ಮಹಾಸ್ವಾಮಿಗಳು ಉಪಸ್ಥಿತರಿದ್ದರು.ಬಂಧುಗಳು, ಶಿಕ್ಷಕರು,ಶಿಷ್ಯರು,ಅಭಿಮಾನಿಗಳು ಅತ್ಯಂತ ಹೃದಯಸ್ಪರ್ಶಿಯಾಗಿ ನಿವೃತ್ತ ಶಿಕ್ಷಕರಿಗೆ ದಂಪತಿ ಸಮೇತವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಮ್‌. ಎಸ್‌. ಪಾಟೀಲ,ನಿವೃತ್ತ ಶಿಕ್ಷಕರಾದ ಆರಿ​‍್ಬ. ಪುಡಲಕಟ್ಟಿ,ಅರಳಿಮಟ್ಟಿ,ಎಮ್‌. ಎಸ್‌. ಪಾಟೀಲ,ಜೆ. ಆರ್‌. ಬಿರಾದಾರ,ಪಿ. ಎಸ್‌. ಮಿಂಚನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಿಕ್ಷಕ ಜಿ. ಪಿ. ಬಿರಾದಾರ ನಿರೂಪಿದರು.ಎಸ್‌. ವಿ. ಕೊಟೀನ ಸ್ವಾಗತಿಸಿದರು.ಪಿ. ಸಿ. ತಳಕೇರಿ ನಿವೃತ್ತರ ಪರಿಚಯವನ್ನು ಓದಿದರು. 1