ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡುವ ಶಿಕ್ಷಕ ವೃತ್ತಿ ಪವಿತ್ರ: ನಾವದಗಿ
Teaching is a sacred profession that imparts knowledge to students: Navadagi
ಮುದ್ದೇಬಿಹಾಳ 17: ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡುವ ಪವಿತ್ರ ವೃತ್ತಿಯೆ ಶಿಕ್ಷಕ ವೃತ್ತಿ. ಶಿಕ್ಷಕರಾದವರು ನಿವೃತ್ತಿ ಹೊಂದಿದರೂ ಅವರು ಶಿಕ್ಷಕರೆ. ನಿವೃತ್ತಿಯ ನಂತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಪ್ರವೃತ್ತಿ ಬೆಳೆಸಿಕೊಂಡು ನೆಮ್ಮದಿಯ ಜೀವನ ಸಾಗಿಸಬೇಕು ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ, ಹಿರಿಯ ವಕೀಲ ಎಂ.ಎಸ್.ನಾವದಗಿ ಹೇಳಿದರು.
ಪಟ್ಟಣದ ವಿಬಿಸಿ.ಪ್ರೌಢಶಾಲೆಯಲ್ಲಿ ನಿವೃತ್ತಿ ಹೊಂದಿದ ಹೊಕ್ರಾಣಿ ಮತ್ತು ಬಾಗವಾನ ದಂಪತಿಗಳನ್ನು ಸತ್ಕರಿಸಿ ಶನಿವಾರ ಮಾತನಾಡಿದರು.
ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿಗೊಂಡರೂ, ಸಂಸ್ಥೆ ಮತ್ತು ಇತರೆ ಶಿಕ್ಷಕರ ಜತೆ ಸಂಪರ್ಕ ಇಟ್ಟುಕೊಂಡು ಮಾರ್ಗದರ್ಶನ ನೀಡುವಂತೆ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಹುಕ್ಕೇರಿ ಎಸ್.ಎಸ್.ಎನ್.ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ ಮಾತನಾಡಿ, ಪಠ್ಯದ ಜತೆಗೆ ವಿದ್ಯಾರರ್ಥಿಗಳಿಗೆ ಪ್ರಚಲಿತ ಕಾಲಮಾನ ಘಟ್ಟದ ವಿಷಯ ತಿಳಿಸಿ, ಮಾರ್ಗದರ್ಶನ ಮಾಡಿ ಪ್ರಬುದ್ಧ ನಾಗರಿಕರನ್ನಾಗಿ ಮಾಡಲು ಹೇಳಿದರು. ಶಿಕ್ಷಕರು ಸಮಾಜದ ಅತ್ಯುನ್ನತ ಮೌಲ್ಯ (ವಿದ್ಯಾರ್ಥಿಗಳನ್ನು) ಕಾಪಾಡುವ ರಕ್ಷಕರು ಎಂದರು.
ನಿವೃತ್ತ ಶಿಕ್ಷಕರ ಕುರಿತು ವೀರಣ್ಣ ಚಳಗೇರಿ ಮತ್ತು ಜಿ.ಡಿ.ಮುಲ್ಲಾ, ಶಿಲ್ಪಾ ಜೋಶಿ ಹಾಗು ಜ್ಯೋತಿ ಹನಗಂಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸತ್ಕಾರ ಸ್ವೀಕರಿಸಿ ಎಂ.ಜಿ. ಹೊಕ್ರಾಣಿ ಮತ್ತು ಎಚ್.ಆರ್..ಬಾಗವಾನ ಮಾತನಾಡಿದರು.
ಸತ್ಕಾರ: ಸಂಸ್ಥೆಯ ವತಿಯಿಂದ .ಹೊಕ್ರಾಣಿ ಮತ್ತು ಬಾಗವಾನ ದಂಪತಿಗಳನ್ನು ಸತ್ಕರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ನಿರ್ದೇಶಕರಾದ ರುದ್ರಗೌಡ ಪಾಟೀಲ್, ಮುರಗೆಪ್ಪ ಮೋಟಗಿ, ಪ್ರವೀಣ ನಾಗಠಾಣ, ಅಪ್ಪು ಸಿದ್ಧಾಪುರ, ಸಂಗನಬಸವ ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಬಿ.ಆರ್.ನಾವದಗಿ, ಕಾರ್ಯದರ್ಶಿ ಮಲ್ಲಣ್ಣ ಮೋಟಗಿ, ಮುಖ್ಯ ಶಿಕ್ಷಕರಾದ ರಾಮಚಂದ್ರ, ನಾಯಕ ಮತ್ತು ಜೆ.ಡಿ.ಮುಲ್ಲಾ, ಶಿಕ್ಷಕರು, ನೂರಾರು ವಿದ್ಯಾರ್ಥಿಗಳು ಇದ್ದರು.
ಶಿಕ್ಷಕ ಜೆ.ಡಿ.ಮುಲ್ಲಾ ಸ್ವಾಗತಿಸಿದರು ಶಿಕ್ಷಕಿ ಶೋಭಾ ಹನಗಂಡಿ ನಿರೂಪಿಸಿದರು. ಶಿಕ್ಷಕಿ ಸುಪ್ರಿತಾ ಮಟ್ಟಿಹಾಳ ವಂದಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 