ಭ್ರಷ್ಟಾಚಾರ ಮುಕ್ತ ವೃತ್ತಿ ಶಿಕ್ಷಕ ವೃತ್ತಿ: ಜಯಶ್ರೀ ಅಕ್ಕನವರು
Teaching is a corruption-free profession: Jayashree Akka
ಯರಗಟ್ಟಿ 06 : ಶಿಕ್ಷಕ ವೃತ್ತಿಯು ವಿದ್ಯಾರ್ಥಿಗಳಿಗೆ ಅಕ್ಷರ, ಸಂಖ್ಯಾ ಜ್ಞಾನ, ಕಲೆ, ವೃತ್ತಿಪರ ತರಬೇತಿ ಮತ್ತು ಜೀವನ ಕೌಶಲ್ಯಗಳನ್ನು ಬೋಧಿಸುವುದನ್ನು ಒಳಗೊಂಡಿದೆ. ಪಾಠಗಳನ್ನು ಸಿದ್ಧಪಡಿಸುವುದು, ಬೋಧಿಸುವುದು ಮತ್ತು ವಿದ್ಯಾರ್ಥಿಗಳ ಪ್ರಗತಿಯನ್ನು ನಿರ್ಣಯಿಸುವುದು ಈ ವೃತ್ತಿಯ ಮುಖ್ಯ ಜವಾಬ್ದಾರಿಗಳಾಗಿವೆ.
ಇದರೊಂದಿಗೆ, ಶಿಕ್ಷಕರು ಅಧ್ಯಯನ ಪ್ರವಾಸಗಳಿಗೆ ಮಾರ್ಗದರ್ಶನ ನೀಡುವುದು, ಶಾಲಾ ಕಾರ್ಯಕ್ರಮಗಳನ್ನು ಸಂಘಟಿಸುವುದು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಮುಂತಾದ ಹೆಚ್ಚುವರಿ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ ಹಾಗೂ ಎಲ್ಲಾ ವರ್ಗದ ಮಕ್ಕಳಿಗೆ ಭ್ರಷ್ಟಾಚಾರ ಮುಕ್ತ ಶಿಕ್ಷಣ ನೀಡುವ ವೃತ್ತಿ ಶಿಕ್ಷಕ ವೃತ್ತಿ ಎಂದು ರಾಜಯೋಗಿಸಿ ಜಯಶ್ರೀ ಅಕ್ಕನವರು ಹೇಳಿದರು.ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ ಅವರು ಜಯಂತಿಯನ್ನು ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಈಶ್ವರೀಯ ವಿಶ್ವದ್ಯಾಲಯದ ಪರವಾಗಿ 50 ಕ್ಕೂ ಹೆಚ್ಚು ಶಿಕ್ಷರನ್ನು ಸನ್ಮಾನಿಸಲಾಯಿತು.ಸನ್ಮಾನಿತರ ಪರವಾಗಿ ಮಾತನಾಡಿದ ಸಿ.ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಅವರು, ಶಿಕ್ಷಕ ವೃತ್ತಿಯು ಕೇವಲ ಪಠ್ಯ ಬೋಧನೆಗೆ ಸೀಮಿತವಾಗದೆ ಮೌಲ್ಯಾಧಾರಿತ ಜೀವನವನ್ನು ಅಳವಡಿಸಿಕೊಳ್ಳುವುದರೊಂದಿಗೆ ಮೌಲ್ಯಯುತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಸಿ.ಆರ್.ಪಿ.ಮಲಕಣ್ಣವರ ಮಾತನಾಡಿದರು.ಈ ವೇಳೆ ಶಿಕ್ಷಕ ಸಂಘದ ಸದಸ್ಯ ವ್ಹಿ. ಎಂ. ಮೆಳವಂಕಿ, ಸಿ.ಆರ್.ಪಿ ಎಂ. ಎಂ. ಮಲಕನ್ನವರ, ಎ. ಎ. ಮಕ್ತುಮನ್ನವರ, ಎಸ್. ಬಿ. ತೋರಗಲ್ಲ, ಎಸ್. ಬಿ. ಜಂಬಗಿ, ವ್ಹಿ. ಎಂ. ಮರಡಿ, ಬಿ. ಎಂ. ಬಾವಾಖಾನ, ಎ. ಎಸ್. ಕಡಕೋಳ, ಎಲ್. ಎಂ. ಕುಮಕಾಗೋಳ, ಆರ್. ಎನ್. ಗುದಗೊಪ್ಪನ್ನವರ, ವಿ. ವಿ. ತಲ್ಲೂರು, ಎಂ. ಎ. ಕೋಟಗಿ, ಎಸ್. ಎಸ್. ಚಿಲಕಂಡಿ, ಎಂ. ಎಂ. ಮುಲ್ಲಾ, ಹೊಸಮನಿ, ಎ. ಕೆ. ನದಾಫ, ಬಿ. ಕೆ. ಪಾಟೀಲ, ಭಾಗೀರಥಿ ಹಳಗಲಿ, ವಿಜಯಲಕ್ಷ್ಮಿ ಲಿಂಗದಳ್ಳಿ ಸೇರಿದಂತೆ ಅನೇಕರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 