ಹಳೆ ವಿದ್ಯಾರ್ಥಿಗಳ ಕುಟುಂಬಕ್ಕೆ ಆರೋಗ್ಯ, ಅಂತಸ್ತು, ಸಂತಸ ಲಭಿಸಲೆಂದು ಹಾರೈಸಿದ ಗುರುಗಳು

ಹಳೆ ವಿದ್ಯಾರ್ಥಿಗಳ ಕುಟುಂಬಕ್ಕೆ ಆರೋಗ್ಯ, ಅಂತಸ್ತು, ಸಂತಸ ಲಭಿಸಲೆಂದು ಹಾರೈಸಿದ ಗುರುಗಳು  Teachers wished the families of former students health, prosperity, and happiness

ಕಿತ್ತೂರು 18; ತಾಲೂಕಿನ ತಿಗಡೊಳ್ಳಿ ಗ್ರಾಮದ ಶ್ರೀ ಭರತೇಶ ಪ್ರೌಢ ಶಾಲೆಯ ಆವರಣದಲ್ಲಿ 2001-02 ಪ್ರಾಥಮಿಕ ಹಾಗೂ 2004-05ನೇ ಸಾಲಿನಲ್ಲಿ ಪ್ರೌಢ ಶಿಕ್ಷಣ ಮುಗಿಸಿರುವ ಹಳೆ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ವೇದಿಕೆಯಲ್ಲಿ ಸರ್ಕಾರಿ ಕಿರಿಯ, ಹಿರಿಯ ಹಾಗೂ ಶ್ರೀ ಭರತೇಶ ಪ್ರೌಢ ಶಾಲೆಯ ಸುಮಾರು 20 ಕ್ಕೂ ಹೆಚ್ಚು ಶಿಕ್ಷಕರನ್ನು ಸನ್ಮಾನಿಸಲಾಯಿತು.   

ಈ ಸಂದರ್ಭದಲ್ಲಿ ಶ್ರೀ ಭರತೇಶ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸಿ.ಎಂ. ಮುರಗೋಡ 2004-05ನೇ ಸಾಲಿನಲ್ಲಿ ತಮ್ಮ ಶಾಲೆಯಲ್ಲಿ ಕಲೆತ ವಿದ್ಯಾರ್ಥಿಗಳ ಹಾಜರಾತಿ ತೆಗೆದುಕೊಂಡು ’ನಮ್ಮ ಶಾಲೆಯ 34 ವರ್ಷದ ಇತಿಹಾಸದಲ್ಲಿ ಇದೇ ಮೊದಲು ಗುರುವಂದನಾ ಕಾರ್ಯಕ್ರಮ ನಡೆದಿದ್ದು ಖುಷಿ ಆಗಿದೆ. ನಾವೆಲ್ಲ ಸಹಪಾಠಿಗಳು ಬೇರೆ  ಬೇರೆ ಊರುಗಳಲ್ಲಿ ಇದ್ದೇವೆ.  ನಿಮ್ಮ ಈ ಪ್ರಯತ್ನದಿಂದ ಒಂದು ಕಡೆ ಸೇರಿದೆವು. ಇಂದು ಗುರುಗಳ ಮೇಲಿನ ಭಾವನೆ ಕಡಿಮೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಬೇರೆ ಬೇರೆ ಊರುಗಳಿಂದ ನಿವೆಲ್ಲಾ ಬಂದಿದ್ದು ತುಂಬಾ ಖುಷಿ ಇದೆ. ನಿಮ್ಮ ಕುಟುಂಬಕ್ಕೆ ಆರೋಗ್ಯ ಅಂತಸ್ತು, ಸಂತಸ ಎಲ್ಲವು ಸಿಗಲೆಂದು’ ಹರಿಸಿದರು.  

ನಂತರ 2001-02ನೇ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಿಗಡೊಳ್ಳಿಯಲ್ಲಿ ಪಾಠ ಮಾಡಿದ ಗುರುಗಳಾದ ಶ್ರೀ ಎ. ಎಫ್‌. ಅಂಕಲಗಿ ಮಾರನಾಡಿ, ’ಈ ಊರಿನ ಋಣದಲ್ಲಿ ಇದ್ದೇನೆ. ನಾನು ವೃತ್ತಿ ಪ್ರಾರಂಭಿಸಿದ ಮೋದಲ ಶಾಲೆಯ ವಿದ್ಯಾರ್ಥಿಗಳು ನಿವೆಲ್ಲ. ಅರು ವರ್ಷ ಈ ಊರಲ್ಲಿ ಕೆಲಸ ಮಾಡಿದ್ದೆ. ಈ ಊರಲ್ಲಿ ಮಾಡಿದ ಸೆವೆಯ ಖುಷಿ ಎಲ್ಲಿಯೂ ಸಿಕ್ಕಿಲ್ಲ. ಇದು ನನ್ನ ಉತ್ತಮ ಸೇವೆ ಎಂದು ಹೇಳಬಹುದು’ ಎಂದರು.   

ಮತ್ತೋರ್ವ ಶಿಕ್ಷಕ ಮಂಜುನಾಥ ಕಳಸಣ್ಣವರ ಮಾತನಾಡಿ, ’ನಾವೆಲ್ ಸೇರಿ ಬಹಳ ವರ್ಷ ಆಗಿತ್ತು. ನಾನು ಒಂದು ವರ್ಷ ಶ್ರೀ ಭರತೇಶ ಪ್ರೌಢ ಶಾಲೆಯಲ್ಲಿ ನಿಮಗೆ ಪಾಠ ಮಾಡಿದ್ದೆ. ನಿವೆಲ್ಲ ಮಕ್ಕಳು ನನಗೆ ಹಾರೈಸಿದ್ದು ಸರ್ಕಾರಿ ಕೆಲಸ ಪಡದೆ. ಯಾವಾಗಲೂ ಮಕ್ಕಳು ಗುರುಗಳಿಗೆ, ಗುರುಗಳು ಮಕ್ಕಳಿಗೆ ಒಳ್ಳೆಯದನ್ನು ಹಾರೈಸುತ್ತಾರೆ’ ಎಂದರು. ನಿವೃತ್ತಿ ಶಿಕ್ಷಕರಾದ ಕುಂಬಾರ ಗುರುಗಳು ’ನಾನು ಎಲ್ಲಿಯಾದರೂ ಸಿಕ್ಕಾಗ ಬಾಡಿಯಾ ಎಂದು ಬೈದಾಗ ನಿವೆಲ್ಲ ನನ್ನನ್ನು ಕುಂಬಾರ ಸರ್ ಎಂದು ಗುರುತಿಸುತ್ತಿದ್ದಿರಿ. ನಿವೆಲ್ಲ ಬಾಲಕರು ಇದ್ದಾಗ ಬೇಟಿ ಆಗಿದ್ವಿ ಈಗ ಪಾಲಕರು ಆಗಿದ್ದಿರಿ. ನಿಮ್ಮ ಭವಿಷ್ಯ ಚನ್ನಾಗಿ ಇರಲಿ ಎಂದು ಹಾರೈಸಿದರು.   

ಕಾರ್ಯಕ್ರಮದಲ್ಲಿ ಹಲವು ಹಳೆ ವಿದ್ಯಾರ್ಥಿಗಳು, ಶಿಕ್ಷಕರು ತಮ್ಮ ಅನುಭವ ಹಂಚಿಕೊಂಡರು. ಸುಂದರವಾಗಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭರತೇಶ ಪ್ರೌಢ ಶಾಲೆಯ ಅಧ್ಯಕ್ಷರಾದ ಉದಯ ಸಿಂಗಾಪುರ ವಹಿಸಿಕೊಂಡಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ದೇವೇಂದ್ರ ಮಂಡೆದ ನಿರೂಪಣೆ ಮಾಡಿದರು.