ಎಸ್‌ಐಆರ್ ಕಾರ್ಯ ಪೂರ್ಣಗೊಳಿಸಿದ ಶಿಕ್ಷಕರಿಗೆ ಸನ್ಮಾನ
Teachers who completed SIR work honored
ಲೋಕದರ್ಶನ ವರದಿ
ಸಿಂದಗಿ 01: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವು ಅತ್ಯಂತ ಮಹತ್ವದ್ದಾಗಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆ ಮಟ್ಟದ ಅಧಿಕಾರಿಗಳು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿನ ಪ್ರತಿಯೊಂದು ಮನೆಗಳಿಗೆ ತೆರಳಿ ಪರಿಷ್ಕರಣೆ ಕಾರ್ಯವನ್ನು ಪೂರ್ಣಗೊಳಿಸಿದ್ದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದು ತಹಶೀಲ್ದಾರ ಕರೆಪ್ಪ ಬೆಳ್ಳಿ ಹೇಳಿದರು. ನಗರದ ತಹಶೀಲ್ದಾರ ಕಾರ್ಯಾಲಯದಲ್ಲಿ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ ಕಾರ್ಯವನ್ನು ಪೂರ್ಣಗೊಳಿಸಿದ ಹತ್ತು ಜನ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಓ) ಹಾಗೂ ಮೇಲ್ವಿಚಾರಕ ರಾಯಪ್ಪ ಇವಣಗಿ ರವರಿಗೆ ಗೌರವಿಸಿ ಸನ್ಮಾನಿಸಿ ಮಾತನಾಡಿದರು.
ಹಿಕ್ಕಣಗುತ್ತಿ ಗ್ರಾಮದ ಮತಗಟ್ಟೆ 132 ಹಾಗೂ 133, ಚಾಂದಕವಠೆ ಗ್ರಾಮದ ಮತಗಟ್ಟೆ 139, 140, 141, 142, 143, 144 ಮತ್ತು ಹಚ್ಯಾಳ ಗ್ರಾಮದ 148 ಹಾಗೂ 149 ಮತಗಟ್ಟೆಗಳ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರೀಷ್ಕರಣೆ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳಾದ ಎಮ್ ಬಿ ಗೊಟಗೊಣಕಿ, ಎಚ್ ಡಿ ಹಲಸಂಗಿ, ಬಿ ಪಿ ಮಲಘಾಣ, ಡಿ ಎಮ್ ಹಾಳಕೇರಿ, ಸುನಿಲ ಹದರಿ, ಎ ಬಿ ಉತ್ನಾಳ, ವಾಯ್ ಎಮ್ ಪಾಟೀಲ, ಜೆ ಎಚ್ ಕೆಂಭಾವಿ, ಆರ್ ಪಿ ಬೋಗಾರ ಮತ್ತು ಎಸ್ ಎಮ್ ಗಡೇದ ರವರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿಗಳಾದ ಪರಶುರಾಮ ಹುಡೇದ, ಕುಮಾರಿ ಎಸ್ ಆರ್ ಮೋರೆ, ಬಿಎಲ್‌ಓ ಮೇಲ್ವಿಚಾರಕರಾದ ಎಸ್ ಬಿ ಕರಾಬಿ, ಪ್ರವೀಣ ಬಿರಾದಾರ, ಶಿಕ್ಷಕರಾದ ಎಸ್ ಎಮ್ ಮಸಳಿ, ಎಮ್ ಬಿ ಮಾಕೊಂಡ, ಆರ್ ಐ ಹೂಗಾರ ಮುಂತಾದವರು ಉಪಸ್ಥಿತರಿದ್ದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 