ವಿದ್ಯಾರ್ಥಿಗಳಿಗೆ ಹೂ ನೀಡಿ ಶಾಲೆಗೆ ಬರ ಮಾಡಿಕೊಂಡ ಶಿಕ್ಷಕರು
Teachers welcomed students to school with flowers
ವಿದ್ಯಾರ್ಥಿಗಳಿಗೆ ಹೂ ನೀಡಿ ಶಾಲೆಗೆ ಬರ ಮಾಡಿಕೊಂಡ ಶಿಕ್ಷಕರು
ಇಂಡಿ 30; ತಾಲ್ಲೂಕಿನ ಝಳಕಿ ಸರಕಾರಿ ಪ್ರೌಢ ಶಾಲೆ ಝಳಕಿಯಲ್ಲಿ ಶಾಲಾ ಪ್ರಾರಂಬೋತ್ಸವದ ಸಂಭ್ರಮ ಸಡಗರ ಮನೆ ಮಾಡಿತ್ತುಎರಡು ತಿಂಗಳ ಬೇಸಿಗೆ ರಜೆ ಬಳಿಕ ವಿದ್ಯಾರ್ಥಿಗಳು ಮರಳಿ ಬಂದ ವಿದ್ಯಾರ್ಥಿಗಳನ್ನು ಶಿಕ್ಷಕರು ಪುಷ್ಪ ಮಳೆ ಮಾಡುವುದರ ಮೂಲಕ ಗುಲಾಬಿ ಹೂ ನೀಡಿ ಸ್ವಾಗತಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯ ಗುರುಗಳಾದ ಎಸ್ ಬಿ ನಾಗಣೆ ಅವರು ಮಾತನಾಡಿ ಸರಕಾರಿ ಶಾಲೆಗಳು ಉಚಿತ ಶಿಕ್ಷಣವನ್ನು ನೀಡುವುದರ ಜೊತೆಗೆ ಪಠ್ಯಪುಸ್ತಕ ಸಮವಸ್ತ್ರ ನುರಿತ ಶಿಕ್ಷಕವೃಂದ ಸುಸಜ್ಜಿತ ಪ್ರಯೋಗಾಲಯಗಳು ಕಂಪ್ಯೂಟರ್ ಲ್ಯಾಬ ವ್ಯವಸ್ಥೆ ಹೊಂದಿರುವ ಉತ್ತಮ ಕ್ರೀಡಾಂಗಣ ಸೌಲಭ್ಯ ಒದಗಿಸಿದೆ. ಸದೃಢ ದೇಹದಲ್ಲಿ ಸಧೃಢ ಮನಸ್ಸು ಎಂಬ ಧ್ಯೇಯ ವಾಕ್ಯದಂತೆ ಪೋಷಣ ಅಭಿಯಾನ ಕಾರ್ಯಕ್ರಮದ ಮೂಲಕ ಪೌಷ್ಟಿಕಾಂಶ ತುಂಬಿದ ಊಟದ ಜೊತೆ ಮೊಟ್ಟೆ ಹಾಲು ರಾಗಿ ಮಾಲ್ಟ ಕಬ್ಬಿಣಾಂಶದ ಮಾತ್ರೆ ನೀಡುವುದರ ಜೊತೆಗೆ ಆರೋಗ್ಯದ ಕಾಳಜಿ ತೆಗೆದುಕೊಳ್ಳಲಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಸಿಆರ್ ಪಿ ಬಾಲಗಾಂವ, ಕಾರ್ಯಕ್ರಮ ನಿರೂಪಿಸಿದ ಪ್ರಕಾಶ ಬನಗೊಂಡೆ, ರವಿ ಕಪಲಿ, ಶಿವಾನಂದ ಹಳಕಿ, ಜೀರಂಕಲಗಿ ಕಾತ್ರಳ ಮೇಡಂಎಸ್ ಡಿ ಎಂ ಸಿ ಅದ್ಯಕ್ಷರಾದ ಅಣ್ಣಪ್ಪ ತಳವಾರ ,ಸರಕಾರಿ ಗ್ಯಾರಂಟಿ ಯೋಜನೆ ನಿರ್ದೇಶಕರಾದ ಸಣ್ಣಪ್ಪ ತಳವಾರ ಸೇರಿದಂತೆ ಅನೇಕರು ಭಾಗವಹಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 