ತಂತ್ರಜ್ಞಾನಕ್ಕೆ ತಕ್ಕಂತೆ ಶಿಕ್ಷಕ ಬದಲಾಗಬೇಕು: ಪ್ರೊಫೆಸರ್ ಶಿವಪ್ರಸಾದ್

 ತಂತ್ರಜ್ಞಾನಕ್ಕೆ ತಕ್ಕಂತೆ ಶಿಕ್ಷಕ ಬದಲಾಗಬೇಕು:  ಪ್ರೊಫೆಸರ್ ಶಿವಪ್ರಸಾದ್  Teachers should change according to technology: Professor Shivaprasad

ಲೋಕದರ್ಶನ ವರದಿ 


ಕೊಪ್ಪಳ 18: ನಗರದ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಹಾಗ ವಿಕಾಸ ಅಕಾಡೆಮಿ ಕಲಬುರ್ಗಿ  ಇವರುಗಳ ಸಂಯುಕ್ತ ಆಶ್ರಯದಲ್ಲಿ,ಎಂಬ " ಹೊಸ ಯುಗಕ್ಕೆ ಹೊಸ ಶಿಕ್ಷಣ " ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಕೊಪ್ಪಳ ವಿಶ್ವವಿದ್ಯಾಲಯ ಅಂತರ್ ಕಾಲೇಜುಗಳ ಉಪನ್ಯಾಸಕರಿಗಾಗಿ ಆಯೋಜಿಸಲಾಗಿತ್ತು .  

 ಗ.ವಿ.ವಿ. ಟ್ರಸ್ಟಿನ ಕಾರ್ಯದರ್ಶಿಗಳಾದ ಡಾ. ಆರ್‌. ಮರೇಗೌಡ.  ಶೈಕ್ಷಣಿಕ ನಿರ್ದೇಶಕರಾದ ಪ್ರೊ. ಎಚ್‌. ಬಿ. ಆನಂದಹಳ್ಳಿ. ಕೊಪ್ಪಳ ಜಿಲ್ಲಾ ಸಂಚಾಲಕರಾದ ಶ್ರೀ ಶರಣಪ್ಪ ಸಿಂಧೋಗಿ. ಸ್ವಾಮಿ ವಿವೇಕಾನಂದ ಸೇನೆ ಹಾಗೂ ಗೋ ರಕ್ಷಣಾ ವೇದಿಕೆ ಸದಸ್ಯರಾದರು ಕರಿಂ ಪಾಷಾ. ಖ್ಯಾತ ಮಕ್ಕಳ ತಜ್ಞರಾದ ಡಾಕ್ಟರ್ ಕೆ .ಜಿ  ಕುಲಕರ್ಣಿ  ಅವರು  ಸಸಿಗೆ ನೀಡಿರುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.   

ತಂತ್ರಜ್ಞಾನದ ಬಳಕೆಯಿಂದಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಶಿಕ್ಷಕರು ತಮ್ಮ ಬೋಧನಾ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿಸಿಕೊಳ್ಳಲು ಇಂತಹ ಕಾರ್ಯಕ್ರಮ ಅಗತ್ಯ ವಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಗ.ವಿ.ವಿ. ಟ್ರಸ್ಟಿನ ಕಾರ್ಯದರ್ಶಿಗಳಾದ ಡಾ . ಆರ್‌. ಮರೇಗೌಡ ಉದ್ಘಾಟಕರಾಗಿ ಮಾತನಾಡಿದರು.   

ನ್ಯಾನೋ, ಬಯೋ ಹಾಗೂ ಕೃತಕ ಬುದ್ಧಿಶಕ್ತಿಯ ತಂತ್ರಜ್ಞಾನದ ಬಳಕೆಯಿಂದಾಗಿ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗುತ್ತಿವೆ ಈ ಬದಲಾವಣೆಗೆ ತಕ್ಕಂತೆ ಶಿಕ್ಷಕ ತನ್ನ ಬೋಧನೆಯಲ್ಲಿಯು ಬದಲಾವಣೆಯನ್ನು ತಂದುಕೊಳ್ಳುವುದು ಅವಶ್ಯವಾಗಿದೆ. ಬೋಧನೆಯಲ್ಲಿ ಮಾನವೀಯ ಮೌಲ್ಯಗಳನ್ನು ಬೆರೆಸಿಕೊಂಡು ಪರಿಣಾಮಕಾರಿಯಾಗಿ ಬೋಧಿಸುವುದು ಅವಶ್ಯವಾಗಿದೆ ಎಂದು ಧಾರವಾಡದ ಐಐಟಿ ಡೀನ್ ಅದ ಪ್ರೊಫೆಸರ್ ಶಿವಪ್ರಸಾದ್ ಎಸ್‌. ಎಂ.  ಮಾತನಾಡಿದರು .  

ಜಗತ್ತಿನಲ್ಲಿ ಅತಿ ಶ್ರೇಷ್ಠವಾದ ಹುದ್ದೆ ಶಿಕ್ಷಕ. ಶಿಕ್ಷಕರು ಎಲ್ಲಾ ಹುದ್ದೆಗಳಿಗೆ ಸಮರ್ಥ ವ್ಯಕ್ತಿಗಳನ್ನು ರೂಪಿಸುವುದು ಅವರ ಜವಾಬ್ದಾರಿಯಾಗಿದೆ. ಶಿಕ್ಷಕರಾದವರು ತಮ್ಮ ವಿಷಯದಲ್ಲಿ ಪ್ರಭುತ್ವ ಸಾಧಿಸಿ ಶಿಕ್ಷಕ ವೃತ್ತಿಯ ಗೌರವವನ್ನು ಹೆಚ್ಚಿಸಬೇಕೆಂದು -ಪ್ರೇರಕ ಭಾಷಣಕಾರ ಮತ್ತು  ಕಾರ​‍್ೊರೇಟ್ ತರಬೇತುದಾರರಾದ   ಪ್ರೊಫೆಸರ್ ಮಹೇಶ್ ಮಾಷಾಲ್ ಅವರು ಕರೆ ನೀಡಿದರು.