ಸುಭದ್ರ ರಾಷ್ಟ್ರ ನಿಮರ್ಾಣಕ್ಕೆ ಶಿಕ್ಷಕರ ಪಾತ್ರ ಪ್ರಮುಖ : ಸಚಿವ ಅಹ್ಮದಖಾನ್

ಹಾವೇರಿ:05:ಸಮಾಜ ನಿಮರ್ಾಣಕ್ಕೆ ರೈತರು ಎಷ್ಟು ಮುಖ್ಯವೋ ಶಿಕ್ಷಕರು ಅಷ್ಟೇ ಮುಖ್ಯವಾಗಿದ್ದಾರೆ. ಶಿಕ್ಷಣವಿಲ್ಲವೆಂದರೆ ಏನನ್ನೂ ಉಳಿಹಿಸಿಕೊಳ್ಳಲು ಸಾಧ್ಯವಿಲ್ಲ. ಸುಭದ್ರ ರಾಷ್ಟ್ರ ನಿಮರ್ಾಣದಲ್ಲಿ ಶಿಕ್ಷಕರ ಗುರುತರ ಜವಾಬ್ದಾರಿ ಅಧಿಕವಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ಖಾನ್ ಅವರು ಹೇಳಿದರು.

ಬುಧವಾರ ನಗರದ ಜಿಲ್ಲಾ ಗುರುಭವನದಲ್ಲಿ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ರವರ 130ನೇ ಜನ್ಮ ದಿನೋತ್ಸವದ ಅಂಗವಾಗಿ ಜರುಗಿದ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕ ವೃತ್ತಿಯನ್ನು ಅಪಾರವಾಗಿ ಗೌರವಿಸುತ್ತಿದ್ದರು. ಆದಕಾರಣ ಅವರ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯನ್ನು ಆಚರಿಸವಂತೆ ಹೇಳುವ ಮೂಲಕ ಶಿಕ್ಷಕ ವೃತ್ತಿಗೆ ಮೆರಗು ನೀಡಿದ್ದಾರೆ. ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ವಿಶೇಷವಾಗಿ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ನಮ್ಮೆಲ್ಲರಿಗೂ ಅಭಿಮಾನ ತರುವ ಸಂಗತಿಯಾಗಿದೆ ಎಂದು ಹೇಳಿದರು.

ನನಗೆ ಶಿಕ್ಷಕರ ಬಗ್ಗೆ ಅಪಾರ ಗೌರವವಿದೆ. ನನ್ನನ್ನು ತಿದ್ದಿತೀಡಿದ್ದು ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕಿಯಾದ ಗೌರಮ್ಮ ಎಂಬುವರು. ನನ್ನ ತಾಯಿಗಿಂತ ಮಿಗಿಲಾಗಿ ನನ್ನು ಪ್ರೀತಿಯಿಂದ ತಪ್ಪುಗಳನ್ನು ತಿದ್ದಿ ಅಕ್ಷರಗಳನ್ನು ಕಲಿಸಿದ್ದಾರೆ. ತಾಯಿಗಿಂತ ಶಿಕ್ಷಕರು ದೇವರಷ್ಟೇ ಸಮಾನರು. ನಾವು ಎಷ್ಟೆ ಉನ್ನತ ಹುದ್ದೆ ಹೊಂದಿದರೂ ಅದಕ್ಕೆ ಕಾರಣ ಶಿಕ್ಷಕರು.  ಶಿಕ್ಷಕರನ್ನು ಎಲ್ಲರೂ ಗೌರವಿಸೋಣ ಎಂದು ಹೇಳಿದರು.

   ಶಿಕ್ಷಕರ ಸಮಸ್ಯೆ ನನ್ನ ಸಮಸ್ಯೆ ಇದ್ದಹಾಗೆ. ಇದು ನನ್ನ ಜಿಲ್ಲೆ ನಾನು ಆಯ್ಕೆಯಾಗಿದ್ದು ಚಾಮರಾಜಪೇಟೆಯಿಂದ ಆದರೆ ನನ್ನನ್ನು ಸಕರ್ಾರ ಹಾವೇರಿ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ನೇಮಕ ಮಾಡಿದೆ. ಈ ಕಾರಣದಿಂದ ಚಾಮರಾಜಪೇಟೆ ನನ್ನ ಮೊದಲ ಮನೆಯಾದರೆ ನನ್ನ ಎರಡನೆಯ ಮನೆ ಹಾವೇರಿ. ನಾನು ಉಸ್ತುವಾರಿ ವಹಿಸಿಕೊಂಡಿರುವ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವುದು ನನ್ನ ಜವಾಬ್ದಾರಿಯಾಗಿದೆ. ಯಾವತ್ತಿಗೂ ನಿಮ್ಮೊಂದಿಗೆ ನಾನಿದ್ದೇನೆ. ನಿಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳೊಂದಿಗೆ ಚಚರ್ಿಸಿ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು. 

ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ನೆಹರು ಓಲೇಕಾರ ಅವರು ಮಾತನಾಡಿ, ರಾಧಾಕೃಷ್ಣನ್ ಅವರು ಅಗಾಧಸೇವೆಯಿಂದ ಅಪಾರ ಗೌರವ ಸಂಪಾದಿಸಿದ್ದರು. ಶಿಕ್ಷಕರ ಜವಾಬ್ದಾರಿ ಬಹಳ ಮಹತ್ವದ್ದಾಗಿದೆ. ಡಾಕ್ಟರ್ಸ್, ಇಂಜನೀಯರ್ಸ್, ವಿಜ್ಞಾನಿ, ಅಧಿಕಾರಿಗಳು ಹಾಗೂ ನಾಯಕರನ್ನು ನಿಮರ್ಾಣ ಮಾಡುವ ಕುಶಲಕಮರ್ಿಗಳಾಗಿದ್ದಾರೆ. ಈ ಎಲ್ಲ ಪದವಿ ಹೊಂದಲೂ ಶಿಕ್ಷಕರೇ ಕಾರಣ. ನಮ್ಮಲ್ಲಿ ಅತ್ಯುತ್ತಮ ಶಿಕ್ಷಕರಿದ್ದಾರೆ ನಿಸ್ವಾರ್ಥತೆಯಿಂದ ದುಡಿಯುವ ಶಿಕ್ಷಕರಿದ್ದಾರೆ. ಉತ್ತಮ ಶಿಕ್ಷಕರನ್ನು ಬೆನ್ನುತಟ್ಟುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿರುವುದು ಹೆಮ್ಮೆಯ ಸಂಗತಿ.  ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪಧರ್ೆಗೆ ವಿದ್ಯಾಥರ್ಿಗಳನ್ನು ಶಿಕ್ಷಕರು  ತಯಾರಿಸಬೇಕು ಎಂದು ಹೇಳಿದರು.  

   ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೊಟ್ರೇಶಪ್ಪ ಬಸೇಗಣ್ಣಿ ಅವರು ಮಾತನಾಡಿ, ಜಿಲ್ಲೆಯ ಶಿಕ್ಷಣದ ಗುಣಮಟ್ಟದ ಕುರಿತು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು.  ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ರಾಜ್ಯಕ್ಕೆ 27ನೇ ಸ್ಥಾನದಲ್ಲಿತ್ತು. ಈ ವರ್ಷ 22 ನೇ ಸ್ಥಾನದಲ್ಲಿದ್ದ ಶಿಕ್ಷಣದ ಪ್ರಗತಿಯಾಗಿದೆ, ಶಿಕ್ಷಕರಿಗೆ ಪ್ರತಿ ಮಾಹೆ 5ನೇ ತಾರೀಖಿನೊಳಗೆ ಸಂಬಳ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 60-70 ವರ್ಷ ಹಳೆಯ ಪ್ರಾಥಮಿಕ ಶಾಲಾ ಕೊಠಡಿಗಳು ಶೀಥಿಲಾವಸ್ಥೆಯಲ್ಲಿರುವ ಬಗ್ಗೆ ದೂರುಗಳು ಬಂದಿದ್ದು, ಈಗಾಗಲೇ ಮುಖ್ಯಮಂತ್ರಿಗಳು ಶಾಲಾ ಕೊಠಡಿ ದುರಸ್ತಿಗೆ ರೂ.500 ಕೋಟಿ ಮಂಜೂರು ಮಾಡಿದ್ದಾರೆ.  ಜಿಲ್ಲೆಯ 120 ಕೊಠಡಿಗಳ ದುರಸ್ತಿ ಕಾರ್ಯಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯಾಗದಂತೆ ಡಿ.ಡಿ.ಪಿ.ಐ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮಗಳನ್ನು ಕೈಗೊಂಡಿದ್ದಾರೆ.  ಜಿಲ್ಲೆಯ ಶಿಕ್ಷಕರು ಮಕ್ಕಳಿಗೆ ಉತ್ತಮ ರೀತಿಯಲ್ಲಿ ಪಾಠ ಮಾಡುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸಬೇಕು ಎಂದು ಹೇಳಿದರು.

   ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಮಾತನಾಡಿ, ಶಿಕ್ಷಕನಿಲ್ಲದ ಶಿಕ್ಷಣ ಸಫಲವಾಗದು. ವಿದ್ಯಾಥರ್ಿಗಳಿಗೆ ಒಳ್ಳೆಯ ಮಾರ್ಗದರ್ಶನ ನೀಡಿ, ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಸ್ವಾಸ್ಥ್ಯ ಸಮಾಜ ನಿಮರ್ಾಣ ಬಹಳ ಮುಖ್ಯವಾಗಿದೆ.  ನಮ್ಮ ಪರಂಪರೆ ಶಿಕ್ಷಕರಿಗೆ ದೈವತ್ವ ಸ್ಥಾನ ನೀಡಿದೆ. ದೇಶದ ಅಭಿವೃದ್ಧಿಗೆ  ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ದೇಶದಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಹಬ್ಬದ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಮಕ್ಕಳನ್ನು ಮುಂದೆ ಏನು ಆಗುತ್ತಿರಿ ಎಂದು ಕೇಳಿದಾಗ ಶಿಕ್ಷಕನಾಗುತ್ತೇನೆ ಎಂಬ  ಸಮಾಜ ನಿಮರ್ಾಣವಾಗಬೇಕು ಎಂದರು.

ಶಿಕ್ಷಣದ ಅಭಿವೃದ್ಧಿಗೆ ಸಕರ್ಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ.  ಗ್ರಾಮ ಮಟ್ಟದಲ್ಲಿ  ಶಿಕ್ಷಣ ಸುಧಾರಿಸುವ ಕೆಲಸವಾಗಬೇಕು.  ಜಿಲ್ಲೆಯಲ್ಲಿ ಶಾಲೆಯಿಂದ ಹೊರಗಳಿದ ಮಕ್ಕಳ ಸಂಖ್ಯೆ ತುಂಬಾ ಕಡಿಮೆ ಇದೆ. 21ನೇ ಶತಮಾನ ಸ್ಪಧರ್ಾತ್ಮಕ ಜಗತ್ತು.  ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪಧರ್ಿಸಲು ಮಕ್ಕಳಿಗೆ ಆತ್ಮವಿಶ್ವಾಸ ತುಂಬಬೇಕು ಎಂದು ಹೇಳಿದರು.

   ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕರಾದ ಅಂದಾನೆಪ್ಪ ವಡಗೇರಿ ಅವರು ಪ್ರಾಸ್ತಾಕವಾಗಿ ಮಾತನಾಡಿದರು.

ಸಚಿವರಿಂದ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಧನ ಸಹಾಯ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ಎಸ್.ಎಸ್.ಎಲ್.ಸಿ. ವಿದ್ಯಾಥರ್ಿಗಳಿಗೆ ಲ್ಯಾಪಟಾಪ್ ವಿತರಿಸಿದ ಸಚಿವರು, ವಯಕ್ತಿಕವಾಗಿ ಆರು ವಿದ್ಯಾಥರ್ಿಗಳಿಗೆ ತಲಾ 10 ಸಾವಿರ ರೂ.  ಹಾಗೂ ಸಚಿನ ಹೊಳಲ ಎಂಬ  ಎಸ್.ಎಸ್.ಎಲ್.ಸಿ. ಜಿಲ್ಲಾ ಟಾಪರ್ ವಿದ್ಯಾಥರ್ಿ ವಿದ್ಯಾಭ್ಯಾಸಕ್ಕೆ ರೂ. ಒಂದು ಲಕ್ಷ ಪ್ರೋತ್ಸಾಹಧನ ನೀಡಿದರು.

ಸನ್ಮಾನ: ಜಿಲ್ಲಾ ಮತ್ತು ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕರು, ನಿವೃತ್ತ ಶಿಕ್ಷಕರನ್ನು  ಸಚಿವರು, ಶಾಸಕರು ಸನ್ಮಾನಿಸಿ ಪ್ರಶಸ್ತಿಪತ್ರಗಳನ್ನು ವಿತರಿಸಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ದೀಪಾ ಅತ್ತಿಗೇರಿ, ತಾಲೂಕು ಪಂಚಾಯತಿ ಅಧ್ಯಕ್ಷ ಕರಿಯಪ್ಪ ಮಲ್ಲಪ್ಪ ಉಂಡಿ, ತಾಲೂಕು ಪಂಚಾಯತಿ ಉಪಾಧ್ಯಕ್ಷೆ ಶ್ರೀಮತಿ ಕಮಲವ್ವ ಪಾಟೀಲ, ಜಿ.ಪಂ.ಸದಸ್ಯರಾದ ಸಿದ್ದರಾಜ ಕಲಕೋಟಿ, ಅಬ್ದುಲ್ ಮುನಾಫ್ ಎಲಿಗಾರ, ಜಿ.ಪಂ.ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಶ್ರೀಮತಿ ಶಿಲ್ಪಾ ನಾಗ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಣ್ಣ, ಕನರ್ಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘದ  ಜಿಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.