ಬದುಕಿಗೆ ದಿಕ್ಕು ತೋರುವವರು ಶಿಕ್ಷಕರು : ಶ್ರೀಕಾಂತ ದುಂಡಿಗೌಡ್ರ
Teachers are the ones who show the direction of life: Srikanth Dundigowdra
ಶಿಗ್ಗಾವಿ 02 : ಶಿಕ್ಷಕರೆಂದರೆ ಕೇವಲ ಪಾಠ ಹೇಳುವವರಲ್ಲ ಅವರು ಬದುಕಿಗೆ ದಿಕ್ಕು ತೋರುವವರು. ಅದಕ್ಕೆ ಉತ್ತಮ ಉದಾಹರಣೆ ನಮ್ಮ ಶ್ರೀಶೈಲ ಹುದ್ದಾರ ಗುರುಗಳು ಎಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ ಹೇಳಿದರು.
ಪಟ್ಟಣದ ಹನುಮಂತ ಗೌಡ್ರ ಕಲ್ಯಾಣ ಮಂಟಪದಲ್ಲಿ ಶ್ರೀಶೈಲ ಹುದ್ದಾರ ಅಭಿನಂದನ ಸಮಿತಿಯ ಆಶ್ರಯದಲ್ಲಿ ಜರುಗಿದ ಶಿಕ್ಷಕ ಶ್ರೀಶೈಲ ಹುದ್ದಾರವರ ಸೇವಾ ನಿವೃತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರೀಶೈಲ ಹುದ್ದಾರ ಗುರುಗಳು ಕಳೆದ 38 ವರ್ಷಗಳ ಕಾಲ ನಮ್ಮ ಕ್ಷೇತ್ರದ ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿ ಮತ್ತು ಸಾಮಾಜಿಕ ರಂಗದಲ್ಲಿಯೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡಿದ್ದಾರೆ. ಕೇವಲ ಅವರ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲದೆ ನಮ್ಮಂತ ಸಾಕಷ್ಟು ಜನರಿಗೆ ಮಾರ್ಗದರ್ಶನ ನೀಡಿ ಮಾದರಿ ಶಿಕ್ಷಕರಾಗಿ ತಮ್ಮ ಸೇವಾ ನಿವೃತ್ತಿ ಪಡೆಯುತ್ತಿದ್ದಾರೆ ಅವರ ನಿವೃತ್ತಿ ನಂತರದ ಜೀವನವು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಇನ್ನಷ್ಟು ಮುಂದುವರೆಯಲಿ ಎಂದರು.
ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಯಾಸೀರ ಅಹ್ಮದಖಾನ ಪಠಾಣ, ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಪ್ರೇಮಾ ಪಾಟೀಲ, ಶಿಕ್ಷಕ ಶ್ರೇಶೈಲ ಹುದ್ದಾರ, ರಾಘವೇಂದ್ರ ದೇಶಪಾಂಡೆ, ಮಂಜುನಾಥ ದುಬೆ, ಮಂಜುನಾಥ ಬ್ಯಾಹಟ್ಟಿ, ಗೂಳಪ್ಪ ಅರಳಿಕಟ್ಟಿ, ದೀರೇಂದ್ರ ಕುಂದಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 