ಮಕ್ಕಳ ಬದುಕಿನಲ್ಲಿ ಅರಿವಿನ ಬೆಳಕು ಮೂಡಿಸುವವರು ಶಿಕ್ಷಕರು: ಶಿವಕುಮಾರ ಶ್ರೀಗಳು

ಮಕ್ಕಳ ಬದುಕಿನಲ್ಲಿ ಅರಿವಿನ ಬೆಳಕು ಮೂಡಿಸುವವರು ಶಿಕ್ಷಕರು: ಶಿವಕುಮಾರ ಶ್ರೀಗಳು Teachers are the ones who bring light to children's lives: Shivakumar Sri

ಕೊಪ್ಪಳ 08:  ತಾಲೂಕಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕುಸ್ಮಾ) ಇದರ 20ನೇ ವರ್ಷದ ಸಂಭ್ರಮಚರಣೆ ಹಾಗೂ ಶಿಕ್ಷಕರ ದಿನಾಚರಣೆಜೊತೆಗೆಉತ್ತಮ ಶಿಕ್ಷಕ ಶಿಕ್ಷಕಿ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡುತ್ತಿದ್ದರು. ಜ್ಞಾನವೇದೊಡ್ಡ ಶಕ್ತಿ. ಮಕ್ಕಳ ಬದುಕಿನಲ್ಲಿಅರಿವಿನ ಬೆಳಕು ಬಿತ್ತುವವರು ಶಿಕ್ಷಕರು, ರಾಜಕಾರಣಿಗಳು ದೇಶವನ್ನುಕಟ್ಟುತ್ತೇವೆಅನ್ನಬಹುದುಆದರೆ ನಿಜವಾಗಿದೇಶವನ್ನುಕಟ್ಟುವವರು ಗುರುಗಳು. ರಾಜಕಾರಣಿಗಳು ಆಡಳಿತ ಮಾಡಬಹುದು ಅಷ್ಟೇ ಆದರೆ ನಿಜವಾಗಿದೇಶಕಟ್ಟುವ ಕೆಲಸ ಮಾಡುವವರು ಶಿಕ್ಷಕರು. ಶಿಕ್ಷಕರಿಗೆ ತಮ್ಮ ವೃತ್ತಿಯ ಬಗ್ಗೆ ಗೌರವಅಭಿಮಾನಇರಲಿ ಮಕ್ಕಳಿಗೆ ವಿದ್ಯೆ ಕಲಿಸುವುದು ಸರಳವಲ್ಲ ಅದುಒಂದುದೊಡ್ಡತಪಸ್ಸು. ಶಿಕ್ಷಕರಿಗೆ ಭಾಷೆಯ ಮೇಲೆ ಪ್ರಭುತ್ವ ಬರಲು ವ್ಯಾಕರಣಕಲಿಯಬೇಕು ಮತ್ತು ಮಕ್ಕಳಿಗೆ ವ್ಯಾಕರಣವನ್ನು ಕಲಿಸಬೇಕು ವಿದ್ಯೆಯಿಂದ ಬಂದ ಸೌಂದರ್ಯಅಪೂರ್ವದದ್ದುಇನ್ನೊಬ್ಬರಕಣ್ಣೀರುಒರೆಸುವ ಸದ್ವಿತೆಯನ್ನು ಕಲಿಸಬೇಕು ಹಿಂದಿನ ದಿನಮಾನಗಳಲ್ಲಿ ಕಣ್ಣೀರುಒರೆಸುವಅಗತ್ಯ ಬಹಳ ಇದೆ. ವಿದ್ಯೆಗೆ ಗುಪ್ತ ಧನಎನ್ನುತ್ತಾರೆ. ಮಕ್ಕಳಿಗೆ ಅಕ್ಷರ ಕಲಿಸಿ ಆ ಅಕ್ಷರದ ಬೆಳಕಿನ ಮೂಲಕವಾಗಿ ಅರಿವಿನ  ಬೆಳಕನ್ನು ನಾವು ಮಕ್ಕಳಿಗೆ ತಂದುಕೊಡುವದಾದರೆಅದಕ್ಕಿಂತ ಹೆಚ್ಚಿನ ಸಾರ್ಥಕತೆ ಏನು ಇಲ್ಲಎಂದು ಹೇಳಿದರು.   

ಸರ್ವಪಲ್ಲಿರಾಧಾಕೃಷ್ಣನ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ್  ಕಲ್ಯಾಣಕರ್ನಾಟಕದಲ್ಲಿ ಶಿಕ್ಷಣಕ್ಕಾಗಿ ಹೆಚ್ಚು ಅನುದಾನಖರ್ಚು ಮಾಡಲಾಗುತ್ತಿದೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದಕ್ಕಾಗಿ ಸತತ ಪ್ರಯತ್ನ ಮಾಡುತ್ತಿದ್ದೇವೆಆದರೂ ಸಹ ನಮ್ಮಜಿಲ್ಲೆಯ ಫಲಿತಾಂಶ ನೋಡಿದರೆದುಃಖಕರ ಸಂಗತಿಆಗಿದೆ.  ಇವತ್ತು ಸರ್ಕಾರಿ ಶಾಲೆಗಳನ್ನು ಮುಚ್ಚುವಂತ ಪರಿಸ್ಥಿತಿ ಬಂದಿದೆ.  ಸರ್ಕಾರಿ ಶಾಲೆಯಲ್ಲಿಓದುತ್ತಿರುವ ಹೈಸ್ಕೂಲ್ ಮಕ್ಕಳಿಗೆ ಓದಲು  ಬರುತ್ತಿಲ್ಲಎನ್ನುವುದು ವಿಪರ್ಯಾಸದ ಸಂಗತಿ.  ಸರ್ಕಾರಿ ಶಾಲೆಗಳ ಗುಣಮಟ್ಟಕಡಿಮೆಯಾಗುತ್ತಿದೆ.ಪ್ರತಿಯೊಬ್ಬತಂದೆತಾಯಿ ಮಕ್ಕಳು ಉತ್ತಮವಾದ ವಿದ್ಯೆಯನ್ನು ಪಡೆಯಲಿ ಮಾರ್ಕ್ಸ ಗಳಿಸಲಿ ಎಂದು ಬಯಸುತ್ತಾರೆ.  ಖಾಸಗಿ ಶಾಲೆಯಲ್ಲಿ ನೀಡುವಉತ್ತಮಶಿಕ್ಷಣಕ್ಕೆ  ಪಾಲಕರುತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸುತ್ತಿದ್ದಾರೆ.  ಈಶ್ವರಿ ಬ್ರಹ್ಮಕುಮಾರಿಯಯೋಗಿನಿ ಅಕ್ಕ ಹಾಗೂ ಜಬೀವುಲ್ಲಾಜಾವೇದ್ ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿಉತ್ತಮ ಶಿಕ್ಷಕ ಹಾಗೂ ಶಿಕ್ಷಕಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.ವಿಶೇಷ ಸಾಧನೆಗೈದಆಕ್ಸಫರ್ಡ ಶಾಲೆಯ ಸುಮನ್ ಹಾಗೂ ಜ್ಞಾನಗಂಗೋತ್ರಿ ಶಾಲೆಯ ಶಾಲೆಯ ಶರಣಪ್ಪ ಮಾಮನಿವರಿಗೆಆತ್ಮೀಯವಾಗಿ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ  ನಗರಾಭಿವೃದ್ಧಿ ಪ್ರಾಧಿಕಾರದಅಧ್ಯಕ್ಷ ಶ್ರೀನಿವಾಸ್ ಗುಪ್ತ ,ನಗರಸಭೆಅಧ್ಯಕ್ಷಅಮ್ಜದ್ ಪಟೇಲ್ರೇಣುಕಾಏಜೆನ್ಸಿಯ ಪ್ರವೀಣ, ಮಾಜಿಅಧ್ಯಕ್ಷಅಲೀಮುದ್ದಿನ್, ಆಕ್ಸಪರ್ಡ ಸಂಸ್ಥೆಯ ಸುಮನ್, ತಾಲೂಕ ಕಾರ್ಯದರ್ಶಿ ನಾಗರಾಜ್,   ಸೇರಿದಂತೆಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಅಧ್ಯಕ್ಷತೆಯನ್ನು  ,ಕಾರ್ಯಕ್ರಮದಅಧ್ಯಕ್ಷತೆಯನ್ನುಕುಸ್ಮಾಗೌರವಾಧ್ಯಕ್ಷರಾಘವೇಂದ್ರ ಪಾನಘಂಟಿ ವಹಿಸಿದ್ದರು. ತಾಲೂಕಅಧ್ಯಕ್ಷ ಶಾಹಿದ್ ತಹಸಿಲ್ದಾರ್  ಉಪಸ್ತಿತರಿದ್ದರು.  ಸುರೇಶಕುಂಬಾರ್, ಮುಲ್ಲಾರ್‌ಕಾರ್ಯಕ್ರಮ ನಿರೂಪಿಸಿದರು.