ಶಿಕ್ಷಕರು ಉತ್ತಮ ಸಮಾಜದ ನಿರ್ಮಾಪಕರು: ಸಾಹಿತಿ ಪತ್ತಾರ
Teachers are the builders of a better society: Sahithi Pattara
ತಾಳಿಕೋಟಿ 13: ಒಂದು ಆರೋಗ್ಯಪೂರ್ಣ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ. ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಅವರು ತಮ್ಮನ್ನು ಜ್ಞಾನದಿಂದ ಗುರುತಿಸಿಕೊಳ್ಳುವವರಾಗಬೇಕು ಎಂದು ಜೆ ಎಸ್ ಜಿ ಪದವಿಪೂರ್ವ ಕಾಲೇಜ್ ಕಾರ್ಯದರ್ಶಿ, ಸಾಹಿತಿ ಶ್ರೀಕಾಂತ ಪತ್ತಾರ ಹೇಳಿದರು.ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಎಸ್‌ಕೆ ಶಿಕ್ಷಣ ಮಹಾವಿದ್ಯಾಲಯದಿಂದ ಆಯೋಜಿಸಿದ ಏಳು ದಿನಗಳ ಎನ್‌ಎಸ್‌ಎಸ್ ವಿಶೇಷ ಶಿರದಲ್ಲಿ ಪ್ರಸ್ತುತ ಸಮಾಜದಲ್ಲಿ ಶಿಕ್ಷಕರ ಪಾತ್ರ ಎಂಬ ವಿಷಯದ ಮೇಲೆ ಅವರು ಶನಿವಾರ ಮಾತನಾಡಿದರು. ಈ ವಿಶೇಷ ಶಿಬಿರದ ಅಂಗವಾಗಿ ಮುಂಜಾನೆ ಎನ್.ಎಸ್.ಎಸ್ ಗೀತೆಯ ಗಾಯನ ಹಾಗೂ ಯೋಗಾಭ್ಯಾಸ ನಡೆಸಲಾಯಿತು. ಬಳಿಕ ವಿದ್ಯಾರ್ಥಿಗಳು ನಗರದ ಆಶ್ರಯ ಕಾಲೋನಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನದಲ್ಲಿ ತೊಡಗಿಸಿಕೊಂಡರು. ವಿವಿ ಸಂಘದ ನಿರ್ದೇಶಕ
ಮಾತನಾಡಿ ಶಿಕ್ಷಕರಾದವರು ಉತ್ತಮ ತಯಾರಿಯೊಂದಿಗೆ ಪಾಠಗಳಲ್ಲಿ ಮುಂದುವರೆಯಬೇಕು ಎಂದು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಮಾರ್ಗದರ್ಶಕರಾದ ನವೀನ್ ಅವರು, ಶಿಕ್ಷಕ ವಿದ್ಯಾರ್ಥಿಗಳ ನಡುವೆ ಉತ್ತಮ ಗೌರವಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕರಾದ ಯು.ಎನ್.ಮಂಗೊಂಡ ಅವರು ಮಾತನಾಡಿ, ಶಿಕ್ಷಕರು ಹಣಕ್ಕಾಗಿ ದುಡಿಯದೆ ಮಕ್ಕಳ ಹಿತಕ್ಕಾಗಿ ದುಡಿಯವರಾಗಿದ್ದು ಅವರು ನಿಸ್ವಾರ್ಥ ಸಮಾಜ ಸೇವಕರಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಎ.ಐ. ಜಾಲವಾದಿ ಚೇರ್ಮನ್ನರು ಎಸ್. ಕೆ ಉಚಿತ ಪ್ರಸಾದ ನಿಲಯ ತಾಳಿಕೋಟಿ, ಎಸ್.ಎಸ್. ಸರೂರ ನಿರ್ದೇಶಕರು ವೀ.ವಿ ಸಂಘ ತಾಳೆಕೋಟಿ ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಹಮ್ಮಿಕೊಳ್ಳಲಾಯಿತು. ಪಾರ್ವತಿ ಮತ್ತು ತಂಡ ಪ್ರಾರ್ಥನೆ ನೆರವೇರಿಸಿದರು. ಮಲ್ಲಿಕಾ ಹಾಗೂ ತಂಡ ಎನ್.ಎಸ್.ಎಸ್ ಗೀತೆಯನ್ನು ಹಾಡಿದರು. ಮಹಾಲಿಂಗ ಸ್ವಾಗತಿಸಿ ಪರಿಚಯಿಸಿದರು. ಉಮಾಶ್ರೀ ಪುಷ್ಾರೆ್ಪಣ ನೆರವೇರಿಸಿದರು. ಸಿದ್ದಪ್ಪ ಮುರಾಳ ವಂದನಾರೆ್ಣ ಸಲ್ಲಿಸಿದರು. ದೀಪಿಕಾ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಎ.ಎ. ಗಂಗನಗೌಡರ, ಕಾರ್ಯದರ್ಶಿ ರೇಷ್ಮಾ ಚಲವಾದಿ, ಒಕ್ಕೂಟ ಪ್ರತಿನಿಧಿ ಶಿವರಾಜ ಹಾಗೂ ಪಾರ್ವತಿ ಹಾಗೂ ಎನ್.ಎಸ್.ಎಸ್ ಶಿಬಿರಾರ್ಥಿಗಳು ಮತ್ತು ಮಹಾವಿದ್ಯಾಲಯದ ಸರ್ವ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 