ಶಿಕ್ಷಕರು ಪರಾರ್ಥಕ್ಕಾಗಿ ಶ್ರಮಿಸಬೇಕು : ಕೆ.ಎಸ್‌. ಉಪ್ಪಾರ

ಶಿಕ್ಷಕರು ಪರಾರ್ಥಕ್ಕಾಗಿ ಶ್ರಮಿಸಬೇಕು : ಕೆ.ಎಸ್‌. ಉಪ್ಪಾರ Teachers Should Strive for the Welfare of Others: K.S. Uppara

ಲೋಕದರ್ಶನ ವರದಿ 

ಸಿಂದಗಿ 16: ಶಿಕ್ಷಕ ವೃತ್ತಿ ಪವಿತ್ರವಾದುದು. ಶಿಕ್ಷಕರು ಸ್ವಾರ್ಥಕ್ಕಿಂತ ಪರಾರ್ಥಕ್ಕಾಗಿ ಶ್ರಮಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು ಎಂದು ಪಿಯು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎಸ್‌. ಉಪ್ಪಾರ ಹೇಳಿದರು.  

ಪಟ್ಟಣದ ಪಿಇಎಸ್ ಶಿಕ್ಷಣ ಸಂಸ್ಥೆ ಹಾಗೂ ಲಯನ್ಸ್‌ ಕ್ಲಬ್ ಸಿಂದಗಿ ಸಹಯೋಗದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಕರು ಮೊದಲು ಉತ್ತಮ ಆದರ್ಶ ಗುಣಗಳನ್ನು ಬೆಳೆಸಿಕೊಂಡು, ವಿದ್ಯಾರ್ಥಿಗಳಿಗೆ ಜ್ಞಾನವನ್ನು ಧಾರೆ ಎರೆಯುವ ಮೂಲಕ ಮಾದರಿ ಶಿಕ್ಷಕರಾಗಬೇಕು ಎಂದರು.  

ಲಯನ್ಸ್‌ ಕ್ಲಬ್ ಜಿಲ್ಲಾ ಗವರ್ನರ್ ರಾಜಶೇಖರ ಹಿರೇಮಠ, ವಿಜಯಪುರ ಅಂಜುಮನ್ ಪಿಯು ಕಾಲೇಜಿನ ಉಪನ್ಯಾಸಕ ಹಾಗೂ ಹಾಕಿ ಕೋಚ್ ಎಸ್‌.ಕೆ. ಇನಾಮದಾರ, ಉಪನ್ಯಾಸಕ ಎಂ.ಎನ್‌. ಅಜ್ಜಪ್ಪ ಮಾತನಾಡಿದರು.  ಈ ಸಂದರ್ಭದಲ್ಲಿ ವಿವಿಧ ತಾಲೂಕುಗಳಿಂದ ಆಯ್ಕೆಯಾದ 10ಕ್ಕೂ ಅಧಿಕ ಪ್ರೌಢಶಾಲಾ ಶಿಕ್ಷಕರಿಗೆ ‘ಆದರ್ಶ ಶಿಕ್ಷಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

ಲಯನ್ಸ್‌ ಕ್ಲಬ್ ಸಿಂದಗಿ ಅಧ್ಯಕ್ಷ ಎಂ.ಜೆ.ಎಫ್‌.ಎಲ್‌. ಅಂಬರೀಶ್ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಪಿಇಎಸ್ ಸಂಸ್ಥೆಯ ಕಾರ್ಯದರ್ಶಿ ಲಾ. ಬಿ.ಪಿ. ಕರ್ಜಗಿ, ಲಯನ್ಸ್‌ ಕ್ಲಬ್ ಕಾರ್ಯದರ್ಶಿಗಳಾದ ಲಾ. ಆರಿ​‍್ಬ. ಬಿರಾದಾರ, ಎಂ.ಜೆ.ಎಫ್‌.ಕೆ.ಎಚ್‌. ಸೋಮಾಪುರ, ಲಾ. ಎಸ್‌.ಎಸ್‌. ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಲಯನ್ಸ್‌ ಖಜಾಂಚಿ ಲಾ. ಆರ್‌.ಎಂ. ಪಾಟೀಲ ಕಾರ್ಯಕ್ರಮ ನಿರೂಪಿಸಿದರು.