ಭೀಕರ ವಿಮಾನ ದುರಂತಕ್ಕೆ ಶಿಕ್ಷಕರ ಬಳಗದಿಂದ ಕಂಬನಿ
Teachers' union expresses condolences over plane crash
ದೇವರಹಿಪ್ಪರಗಿ 13: ಗುಜರಾತ್ ರಾಜ್ಯದ ಅಹಮದಾಬಾದ್ ನಗರದಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಮಡಿದ ಅತ್ಯಮೂಲ್ಯ ಆತ್ಮಗಳ ದಿವ್ಯಚೇತನಕ್ಕೆ ಸೃಷ್ಟಿಕರ್ತನು ಶಾಂತಿಯನ್ನು ಒದಗಿಸಲೆಂದು ದೇವರಹಿಪ್ಪರಗಿಯ ಶಿಕ್ಷಕರ ಬಳಗದಿಂದ ಕಂಬನಿ. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಗುರುವಾರದಂದು ಮೌನಾಚರಣೆಯನ್ನು ಮಾಡುವ ಮೂಲಕ ಗೌರವ ನಮನಗಳನ್ನು ಸಲ್ಲಿಸಲಾಯಿತು. ಶಿಕ್ಷಕರ ಸಂಘದ ಅಧ್ಯಕ್ಷ ಎ. ಎಚ್. ವಾಲೀಕಾರ, ಕಸಾಪ ಅಧ್ಯಕ್ಷ ಜಿ.ಪಿ. ಬಿರಾದಾರ, ಕಸಾಪ ಕೋಶಾಧ್ಯಕ್ಷ ಸಂಗನಗೌಡ ಬಿರಾದಾರ ಅವರು ಮಾತನಾಡಿ, ಮತ್ತೊಮ್ಮೆ ಇಂತಹ ಭೀಕರ ದುರಂತಗಳು ಮರುಕಳಿಸದಿರಲೆಂದು ಘಟನೆಯ ಕುರಿತು ಮಾತನಾಡಿ,
ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸಲಾಯಿತು. ಇದೇ ಸಂದರ್ಭದಲ್ಲಿ ಪಿ.ಎಸ್. ಮಿಂಚನಾಳ,ಪಿ.ಸಿ.ತಳಕೇರಿ, ಎಮ್.ಎಚ್.ಪಟೇಲ,ಎಸ್.ಜಿ. ತಾವರಖೇಡ,ಎಸ್.ವಿ. ಕೊಟೀನ,ಮಲಕು ಸುರಗಿಹಳ್ಳಿ, ಗೊಲ್ಲಾಳ ಬಿರಾದಾರ, ಸಂಗನಬಸು ನಂದ್ಯಾಳ,ಕೆ. ಎಮ್. ನಂದಿ,ನಾಗಯ್ಯ ಹಿರೇಮಠ, ವೀರಣ್ಣ ದಸ್ತರೆಡ್ಡಿ, ಬಿ.ಜಿ.ಪಾಟೀಲ,ಕೆ.ಡಿ. ಪಾಟೀಲ, ಬಿ.ವಾಯ್. ಬಾವೂರ, ರವಿ ಕೊಟೀನ, ಅಣ್ಣು ಭಜಂತ್ರಿ,ವಾಯ್.ಜಿ. ತಾವರಖೇಡ,ಟಕ್ಕಳಕಿ ಸರ್,ಜವಳಿ ಸರ್,ಸದಾಶಿವ ಗುಡಿಮನಿ,ಚನ್ನು ಹದರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 