ಶಿಕ್ಷಕರ ಸೇವೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತದೆ

ಶಿಕ್ಷಕರ ಸೇವೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತದೆ  Teachers' service shapes the future of students

ಲೋಕದರ್ಶನ ವರದಿ 

ವಿಜಯಪುರ 01 :  ಶಿಕ್ಷಕರ ಸಮರಾ​‍್ಣ ಭಾವ, ನಿಸ್ವಾರ್ಥ ಸೇವೆ ಹಾಗೂ ಮೌಲ್ಯಾಧಾರಿತ ಶಿಕ್ಷಣವೇ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವರ್ಗಾವಣೆಗೊಂಡ ಪ್ರಾಧ್ಯಾಪಕ ಎಂ.ಎಸ್‌. ಘೋಡ್ನಾಪುರ ಹೇಳಿದರು.  

ನಗರದ ನವರಸಪುರದಲ್ಲಿ ಅತಿಥಿ ಉಪನ್ಯಾಸಕರ ಸಂಘ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ಶಿಕ್ಷಣವು ಕೇವಲ ಜ್ಞಾನ ನೀಡುವುದಲ್ಲ; ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಸಂಸ್ಕಾರ, ಸದಾಚಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದು ತಿಳಿಸಿದರು.  

ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಪ್ರೊ. ಸುರೇಶ್ ಡಬ್ಬಿ ಮಾತನಾಡಿ, ಎಂ.ಎಸ್‌. ಘೋಡ್ನಾಪುರ ಅವರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಆದರ್ಶ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಶಂಸಿಸಿದರು.  

ಈ ಸಂದರ್ಭದಲ್ಲಿ ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಬಸವನ ಬಾಗೇವಾಡಿಗೆ ವರ್ಗಾವಣೆಗೊಂಡ ಪ್ರೊ. ಎಂ.ಎಸ್‌. ಘೋಡ್ನಾಪುರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಕುಮಾರಸ್ವಾಮಿ, ಡಾ. ಆರ್‌.ಕೆ. ತೇಲಿ, ಪ್ರೊ. ಎಸ್‌.ಬಿ. ಹೆಬ್ಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.