ಶಿಕ್ಷಕರ ದಿನಾಚರಣೆ ಶಿಕ್ಷಕರ ಸೇವೆ ಸ್ಮರಿಸುವ ದಿನ
Teachers' Day is a day to commemorate the service of teachers
ತಾಳಿಕೋಟಿ 07: ಸಮಾಜವನ್ನು ರೂಪಿಸುವಲ್ಲಿ ಮತ್ತು ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನ ನೀಡುವಲ್ಲಿ ಶಿಕ್ಷಕರ ಪಾತ್ರವನ್ನು ಗೌರವಿಸಲು ಶಿಕ್ಷಕರ ದಿನಾಚರಣೆಯ ದಿನವನ್ನು ಮೀಸಲಿಡಲಾಗಿದೆ ಎಂದು ಎಸ್ ಕೆ ಕೆ ಪಿ ಎಂ ಜಿ ಸಿ ಎಂ ಬಾಲಕಿಯರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಡಾ.ಎ.ಬಿ.ಇರಾಜ ಹೇಳಿದರು.
ಸ್ಥಳೀಯ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಹಾಗೂ ಸಂಸ್ಕೃತಿಕ ವಿಭಾಗದ ಅಡಿಯಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿ ನಾನು ಶಿಕ್ಷಕನಾಗಲು ನನ್ನ ಹಿಂದಿ ಶಿಕ್ಷಕರ ಪ್ರಭಾವ ನನ್ನ ಮೇಲೆ ಬಹಳಷ್ಟಿದೆ, ಅವರ ಪ್ರೇರಣೆ ಆಶೀರ್ವಾದದಿಂದ ನಾನು 32 ವರ್ಷಗಳ ಕಾಲ ಶಿಕ್ಷಕನಾಗಿ ಸೇವೆಯನ್ನು ಸಲ್ಲಿಸುತ್ತಿದ್ದೇನೆ. ನಾವೆಲ್ಲರೂ ಶಿಕ್ಷಕರಾಗಿದ್ದಕ್ಕೆ ಹೆಮ್ಮೆ ಪಡಬೇಕು ಎಂದ ಅವರುಭಾರತವು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರನ್ನು ಸ್ಮರಿಸುವ, ಆಚರಿಸುವ ದಿನ. ಆದರೆ ಮೂಲತಃ ಇಂದು ಶಿಕ್ಷಕರ ದಿನವಾಗಿ ಆಚರಿಸಲು ಕಾರಣ ಬೇರೆಯೇ ಇದೆ. ಭಾರತದಲ್ಲಿ ಶಿಕ್ಷಕರ ದಿನವನ್ನು ಈ ದಿನದಂದು ಆಚರಿಸುವ ಮೂಲಕ ದೇಶದ ಎಲ್ಲ ಪ್ರಜೆಗಳು ಸಹ ತಮಗೆ ಬುದ್ಧಿವಾದ ಹೇಳಿ, ತಪ್ಪನ್ನು ತಿದ್ದಿ, ಪಾಠ ಹೇಳಿಕೊಟ್ಟ, ಅಕ್ಷರ ಕಲಿಸಿಕೊಟ್ಟ, ಜೀವನಕ್ಕೆ ಮಾರ್ಗದರ್ಶನ ನೀಡುವ ತಮ್ಮೆಲ್ಲ ಶಿಕ್ಷಕರನ್ನು ನೆನಪಿಸಿ ಅವರಿಗೆ ಧನ್ಯವಾದಗಳನ್ನು ಹೇಳುವ ದಿನ. ಅವರ ಕೊಡುಗೆಗಳನ್ನು ಸ್ಮರಿಸುವ ದಿನ. ತಮ್ಮ ಜೀವಿತಾವಧಿಯಲ್ಲಿ ಎಲ್ಲರನ್ನು ಒಂದೊಂದು ಮಹತ್ತರ ಸಾಧನೆಗೆ ಪ್ರೇರೇಪಿಸಿ, ಅವರ ಯಶಸ್ಸಿಗೆ ಕಾರಣರಾಗಿ, ಆದರೆ ತಾವು ಮಾತ್ರ ಹಾಗೆಯೇ ಉಳಿಯುವ - ಅದೇ ಸೇವೆಯಲ್ಲಿಯೇ ಉಳಿಯುವವರೆಂದರೆ ಅದೇ ಶಿಕ್ಷಕರು ಎಂದು ಹೇಳಿದರು.ಅಧ್ಯಕ್ಷೀಯ ನುಡಿಗಳನ್ನಾಡಿದ ಮಾನ್ಯ ಪ್ರಾಚಾರ್ಯರು ಡಾ. ಆರ್.ಎಂ ಬಂಟನೂರು ಒಳ್ಳೆಯ ಮನುಷ್ಯರಾಗಿ, ನಮ್ಮ ಸಮಾಜದ ಉತ್ತಮ ಸದಸ್ಯರಾಗಲು ಮತ್ತು ದೇಶದ ಆದರ್ಶ ನಾಗರಿಕರಾಗಲು ಅವರು ನಮ್ಮನ್ನು ಮೃದುವಾಗಿ ಒತ್ತಾಯಿಸುತ್ತಾರೆ. ಶಿಕ್ಷಕರ ದಿನವು ವಾಸ್ತವವಾಗಿ ನಮ್ಮ ಜೀವನದಲ್ಲಿ ಶಿಕ್ಷಕರು ವಹಿಸುವ ಕಷ್ಟ, ಸವಾಲುಗಳು ಮತ್ತು ಅಪ್ರತಿಮ ಪಾತ್ರವನ್ನು ಒಪ್ಪಿಕೊಳ್ಳುವ ಆಚರಣೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಿಗೆ ಪ್ರಾಚಾರ್ಯರಿಗೆ ಹಾಗೂ ಎಲ್ಲಾ ಉಪನ್ಯಾಸಕ ಸಿಬ್ಬಂದಿ ವರ್ಗಕ್ಕೆ ವಿದ್ಯಾರ್ಥಿಗಳು ಆತ್ಮೀಯವಾಗಿ ಸನ್ಮಾನಿಸಿ ನೆನಪಿನ ಕಾಣಿಕೆಯನ್ನ ನೀಡಿದರು ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಸಿಬ್ಬಂದಿ ವರ್ಗ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಐಶ್ವರ್ಯ ಚೌವ್ಹಾಣ್ ಪ್ರಾರ್ಥಿಸಿದರು. ಭಾಗ್ಯಶ್ರೀ ಬಿರಾದಾರ್ ಸ್ವಾಗತಿಸಿ ಪರಿಚಯಿಸಿದರು. ಸಂಗೀತ ಯರಗಲ್ ವಂದಿಸಿದರು. ಅಮೀರಅಬಿ ಜಮೀನ್ದಾರ್ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 