ಶಿಕ್ಷಕಿ ಸಲ್ಮಾ ಜಹಾನ್ ರವರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ

ಶಿಕ್ಷಕಿ ಸಲ್ಮಾ ಜಹಾನ್ ರವರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ Teacher Salma Jahan has rendered excellent service in the field of education

                      ಕೊಪ್ಪಳ 13: ನಗರದ  ನಿವಾಸಿ ಸಹ ಶಿಕ್ಷಕಿ ಸಲ್ಮಾ ಜಹಾನ್ ರವರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ ಎಂದು ನಿವೃತ್ತ ಸಹ ಶಿಕ್ಷಕಿ ಹಾಗೂ ಉರ್ದು ಸಾಹಿತಿ ಶಮೀಮುನ್ನಿಸಾ ಬೇಗಮ್ ಹುನಗುಂದ್ ರವರು ಬಣ್ಣಿಸಿದ್ದಾರೆ, ಅವರು ಶನಿವಾರದಂದು ನಗರದ ಖಾಸಗಿ ಹೋಟೆಲ್, ಸಭಾಭವನದಲ್ಲಿ ಸಹ ಶಿಕ್ಷಕಿ ಸಲ್ಮಾ ಜಹಾನ್ ರವರ ವಯೋ ನಿವೃತ್ತಿ ಪ್ರಯುಕ್ತ ಅವರ ಕುಟುಂಬ ವರ್ಗ ಮತ್ತು ಸ್ನೇಹಿತರ ಬಳಗ ಏರಿ​‍್ಡಸಿದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಸಲ್ಮಾ ಜಹಾನ್ ರವರು ಮೂಲತಃ ಉರ್ದು ಅಭ್ಯಾಸ ಮಾಡಿದರು ಸಹ ಉರ್ದು ಶಾಲೆಯಲ್ಲಿ ಮತ್ತು ಕನ್ನಡ ಶಾಲೆಗಳಲ್ಲಿ ಪ್ರೌಢಶಾಲೆಗಳಲ್ಲಿ ಉತ್ತಮ ಸೇವೆ ಮಾಡಿ ಶೈಕ್ಷಣಿಕ ರಂಗದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಕ್ಕಳ ಭವಿಷ್ಯ ಉಜ್ವಲ ಗೊಳಿಸುವ ನಿಟ್ಟಿನಲ್ಲಿ ಶ್ರಮಿಸಿ ಯಶಸ್ಸು ಹೊಂದಿದ್ದಾರೆ

                  ಅವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿರುವ ಅವರ ಸಹಪಾಠಿ ಶಿಕ್ಷಕರ ಬಳಗ ಮತ್ತು ಅವರ ವಿದ್ಯಾರ್ಥಿ ಬಳಗ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿರೋದೇ ಜೀವಂತ ಸಾಕ್ಷಿಯಾಗಿದೆ ಅವರ ಅಭಿವೃದ್ಧಿ ಶಿಕ್ಷಣ ಪರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶಮೀಮುನ್ನಿಸಾ ಬೇಗಂ ಹುನಗುಂದ ರವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು, ಸಮಾರಂಭದಲ್ಲಿ ಅವರ ತಂದೆ ನಗರದ ಹಿರಿಯ ಸಮಾಜ ಸೇವಕರಾದ ಅಬ್ದುಲ್ ವಹಾಬ್ ಸಿದ್ದಿಕಿ, ಉರ್ದು ಸಾಹಿತಿ ನಿವೃತ್ತ ಪ್ರಾಧ್ಯಾಪಕ ಅನ್ವರ ಹುಸೇನ್ , ಸಮಾಜ ಸೇವಕರಾದ ಎಂ ಎ ಮಾಜಿದ್ ಸಿದ್ದಿಕಿ ಹಿರಿಯ ಪತ್ರಕರ್ತ ಎಂ ಸಾಧಿಕ ಅಲಿ ಸಲೀಮುದ್ದೀನ್, ಮುನವರ್ ಹುಸೇನ್, ಸಲ್ಮಾ ಜಹಾನ್ ರವರ ಪತಿ ಸೈಯದ್ ಇಲಿಯಾಸ್ ಸೇರಿದಂತೆ ಅವರ ಕುಟುಂಬ ವರ್ಗದವರು ಸ್ನೇಹಿತರ ಬಳಗದವರು ಕೊಪ್ಪಳ, ಇರ್ಕಲ್ಗಡ ಮಂಗಳೂರು ಮತ್ತು ಕನಕಗಿರಿ ಭಾಗದ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಅವರಿಗೆ ಸನ್ಮಾನಿಸಿ ಶುಭ ಕೋರಿದರು, ಕೊಪ್ಪಳ ನಗರದ ವಾಗ್ಮಿ ಸಾಹಿತಿ ಎಂ ಬದಿಯುದ್ದೀನ್ ಅಹಮದ್ ನವೀದ ರವರು ಆರಂಭದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಹೊಂದಿಸಿದರು,