ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಕಲಿಸಿ : ಸಿದ್ದು ಕೊಣ್ಣೂರ
Teach children manners along with education: Siddu Konnur
ಲೋಕದರ್ಶನ ವರದಿ
ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಕಲಿಸಿ : ಸಿದ್ದು ಕೊಣ್ಣೂರ
ರಬಕವಿ-ಬನಹಟ್ಟಿ 03: ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪಾಠದೊಂದಿಗೆ ಕ್ರೀಡೆಗೂ ಮಹತ್ವ ನೀಡಬೇಕು.ಕ್ರೀಡೆಯಿಂದ ಮಕ್ಕಳ ದೇಹ ಸದೃಢ ವಾಗುತ್ತದೆ. ಬೇಕರಿ ಫುಡ್ ಬಿಟ್ಟು ಪ್ರೋಟಿನ್ ಆಹಾರ ನೀಡಬೇಕು ಎಂದು ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಅವರು ಹೇಳಿದರು.
ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಹಂಸವೇಣಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯ 12 ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಕ್ಕಳ ಕಲಿಕೆಯಲ್ಲಿ ಶಿಕ್ಷರರಷ್ಟೆ ಪಾಲಕರ ಜವಾಬ್ದಾರಿಯಿದೆ. ಟಿ.ವ್ಹಿ ಹಾಗೂ ಮೊಬೈಲನಿಂದ ಮಕ್ಕಳನ್ನು ದೂರವಿಟ್ಟು ರಾಮಾಯಣ, ಮಹಾಭಾರತ ಮತ್ತು ನೀತಿ ಕಥೆಗಳನ್ನು ಹೇಳುವ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಇಂದಿನ ದಿನಮಾನಗಳಲ್ಲಿ ಮೊದಲು ಮಕ್ಕಳಿಗೆ ಬೇಸಿಕ್ ಜ್ಞಾನ ನೀಡುವುದು ಮುಖ್ಯವಾಗಿದೆ ಎಂದರು.
ಉದ್ಯಮಿ ಸತೀಶ ಹಜಾರೆ ಕಾಯಕಯೋಗಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಶಾಲೆಯ ಬೆಳವಣಿಗೆಗೆ ಪಾಲಕರ ಪಾತ್ರ ಬಹುಮುಖ್ಯ. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಸಾಲದು ಅವರ ಶ್ರೇಯೋಭಿವೃದ್ಧಿಗೆ ಸ್ಪಲ್ಪ ಸಮಯ ಅವರಿಗಾಗಿ ಮಿಸಲಿಡಬೇಕು. ಹಂಸವೇಣಿ ಶಾಲೆ ನಮ್ಮ ಭಾಗದಲ್ಲಿ ಅತ್ಯುತ್ತಮ ಶಾಲೆಯಾಗಿದೆ. ಇದು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಡಾ.ಮಂಜುನಾಥ ಬೆಣ್ಣೂರ ಮಾತನಾಡಿ, ಕೇವಲ 4 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಸಂಸ್ಥೆ ಪ್ರಸ್ತುತ ಸಾಲಿನಲ್ಲಿ 400 ವಿದ್ಯಾರ್ಥಿಗಳನ್ನು ಹೊಂದಿದೆ ಎಂದರೆ ಇಲ್ಲಿರುವ ಶಿಕ್ಷಣದ ಗುಣಮಟ್ಟ, ಶಿಕ್ಷಕರ ಹಾಗೂ ಸಂಸ್ಥಾಪಕರ ಕಾರ್ಯವೈಖರಿ ಕಾರಣ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಲ್ಲಿನ ಮಕ್ಕಳು ಉನ್ನತ ದರ್ಜೆಯಲ್ಲಿ ಪಾಸಾಗಿ ಈ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ವಿದ್ಯಾಮಾತೆ ಹೆಸರು ಇರುವ ಈ ಶಾಲೆ ಉತ್ತರೊತ್ತರವಾಗಿ ಬೆಳೆಯಲಿ ಎಂದರು.
ರಬಕವಿ ಹೆಕ್ಸಾಮ್ ಅಧಿಕಾರಿ ಬ್ರಹ್ಮಾನಂದ ಮಾಸ್ತಿ ಅವರಿಗೆ ದಕ್ಷ ಅಧಿಕಾರಿ ಪ್ರಶಸ್ತಿಯನ್ನು ಶಿಕ್ಷಣ ಸಂಸ್ಥೆಯಿಂದ ನೀಡಲಾಯಿತು.
ವೇದಿಕೆ ಮೇಲಿನ ಗಣ್ಯ ಮಾನ್ಯರಿಂದ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಚೈತನ್ಯ ಮಹಾರಾಜರು ಹಾಗೂ ನಂದಗಾಂವದ ಮಹಾದೇವ ಮಹಾರಾಜರು ಸಾನಿಧ್ಯ ವಹಿಸಿದ್ದರು.
ಬಾಬಾಗೌಡ ಪಾಟೀಲ, ನಾಮದೇವ ಉಪ್ಪಾರ, ಅಶೋಕ ಗೊಬ್ಬಾಣಿ, ನಾಗಪ್ಪ ಕುಚನೂರ, ಕೃಷ್ಣಪ್ಪ ಉಪ್ಪಾರ, ವಿವೇಕಾನಂದ ಯಲಗುದ್ರಿ, ಮಹಾವೀರ ಬಿಲವಡಿ ,ಶ್ರೀಮಂತ ಖಾನಗೊಂಡ, ಪ್ರಕಾಶ ಕುಂಬಾರ, ಮಾಧವಾನಂದ ಕೊಪರ್ಡೆ, ಸಂಜಯ ತೆಗ್ಗಿ, ಪ್ರಕಾಶ ದೇಸಾಯಿ, ಬಸಗೊಂಡ ಮುಗ್ಗನ್ನವರ, ದಾದಾ ಹಿಪ್ಪರಗಿ, ಬಾಹುಬಲಿ ಸಿದ್ದಪ್ಪಗೋಳ, ರಾಮಪ್ಪ ಅಜ್ಜಪ್ಪಗೋಳ, ಮಹಾವೀರ ಶಿರಹಟ್ಟಿ, ಚಂದ್ರಕಾಂತ ಮುಗ್ಗನ್ನವರ, ಗೋಪಾಲ ಸರ್ವದೆ, ಆಕಾಶ ಕೋಪರ್ಡೆ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 