ಶರಣರ ನಾಡು ತಾರಾಪುರ: ಸಂತೋಷ್ ಕ್ಷತ್ರಿ

ಶರಣರ  ನಾಡು  ತಾರಾಪುರ: ಸಂತೋಷ್ ಕ್ಷತ್ರಿ Tarapur, the land of refuge: Santosh Kshatriya

ಆಲಮೇಲ 09:  ತಾಲ್ಲೂಕಿನ  ಭೀಮಾ ನದಿಯ ದಂಡಿಯಲ್ಲಿರುವ ಪವಿತ್ರ ಪುಣ್ಯ ಕ್ಷೇತ್ರವಾದ ಸುಕ್ಷೇತ್ರ ತಾರಾಪೂರ ಗ್ರಾಮದಲ್ಲಿ ಶ್ರೀ ತಾರಕೇಶ್ವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಷ ಬ್ರ ಮುರುಘರಾಜೇಂದ್ರ ಶಿವಾಚಾರ್ಯರ ಪುಣ್ಯಸ್ಮರಣೋತ್ಸವದ. ನಿಮಿತ್ಯವಾಗಿ5 ದಿನಗಳ ಕಾಲ ಸಾಗಿ ಬಂದ ಮಾಹಾ ದಾಸೋಹಿ ಶ್ರೀ ಕಲಬುರ್ಗಿ  ಶ್ರೀ ಶರಣಬಸವೇಶ್ವರ ಮಾಹಾ ಪುರಾಣದ ಕಾರ್ಯಕ್ರಮದ ನಿಮಿತ್ಯವಾಗಿದಿನಾಂಕ 6/4/2026  ರಂದು ಶ್ರೀ ಶರಣಬಸವೇಶ್ವರ ಮದುವೆಯ ಸಮಾರಂಭವನ್ನು ಆತಿ ವೈಭವದಿಂದ ಜರಿಗಿತ್ತುಈ ಮದುವೆಯ ಕಾರ್ಯಕ್ರಮಕ್ಕೆ ಗಂಡಿನವರಾಗಿ ಶ್ರೀ ಭೀಮಾ ಶಂಕರ  ಈರ​‍್ಪ  ಬಿರಾದಾರ . ವಹಿಸಿಕೊಂಡರೆ ಹೆಣ್ಣಿನವರಾಗಿ ನಾಗರಾಜ್ ಹನುಮಂತ್ರಾಯ ಮಳ್ಳಿ ವಹಿಸಿಕೊಂಡರುಶ್ರೀ  ಶರಣಬಸವೇಶ್ವರ ಪುರಾಣದ ಮದುವೆಯ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಷ ಬ್ರ ಗುರುಲಿಂಗ ಶಿವಾಚಾರ್ಯರು ಗುರು ಸಂಸ್ಥಾನ ಹಿರೇಮಠ ತಾರಾಪೂರ ವಹಿಸಿಕೊಂಡರುಪ್ರವಚನಕಾರಾದ ಡಾ ಪಂಡೀತ ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಪಂಡೀತರತ್ನ ಶ್ರೀ ವೇದಮೂರ್ತಿ ವೀರಭದ್ರಯ್ಯ ಹಿರೇಮಠ ಯಂಕಂಚಿ ಇವರ ಅಮೃತವಾಣಿಯಿಂದಸಂಗೀತ ಸೇವೆಯನ್ನು ಖಾತ್ಯ ಗಾನಕೋಗಿಲೆ ಸಿದ್ದು ಕುಳೆಕುಮಟಗಿ ತಬಲಾ ಚತುರ ಶ್ರೀ ಕಲ್ಲಯ್ಯ ಹಿರೇಮಠ ಕಾಚಾಪುರ ಇವರು ನಡೆಸಿಕೊಟ್ಟರು ಮಲ್ಲಣ್ಣ ಸಾಹುಕಾರ ಜೇರಟಗಿ ಮಾತನಾಡಿ ಪುರಾಣದಲ್ಲಿ ಬರುವಂತ ಘಟನೆಗಳನ್ನು ನಾವು ಮನದಲ್ಲಿ ಅರಿತುಕೊಂಡು ಯಾಕಂದರೆ ಒಳ್ಳೆಯದು ಕೆಟ್ಟದು ಇರುತ್ತದೆ.

ನಾವು ಒಳ್ಳೆಯದನ್ನು ಆರಿಸಿಕೊಂಡು ಮುಂದೆ ಆಗುವ ನಮ್ಮ ನಡೆ ನುಡಿಗಳನ್ನು ಅರಿತುಕೊಳ್ಳಬೇಕು.ಪುರಾಣವನು ನಾನು ಯಾಕೆ ಹಚ್ಚಬೇಕು ಎಂದರೆ ಅಜ್ಞಾನದ ಕತ್ತಲಿಂದ ಸುಜ್ಞಾನದ ಬೆಳಕಿನ ಕಡೆ ಒಯ್ಯುವದೆ ಇಂಥ ಮಹಾತ್ಮರ ಪುರಾಣ ಪ್ರವಚನ ಕೇಳುವುದರಿಂದ ನಾವು ಪಾವನರಾಗುತ್ತೇವೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸಂತೋಷ  ಕ್ಷತ್ರಿ ಮಾತನಾಡಿ  ತಾರಾಪೂರ ಗ್ರಾಮ ಎಂದರೆ ಶರಣರ ನಾಡು ಭಕ್ತಿಯ ಬಿಡು ಇಂದು 5ನೇ ದಿನದ ಪುರಾಣ ಪ್ರವಚನಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಸೇರಿರುವುದು ನೋಡಿದರೆ ಶ್ರೀ ತಾರಕೇಶ್ವರ ದೇವರ ಮೇಲೆ  ನಿಮಗಿರುವ ಅಪಾರವಾದ ಭಕ್ತಿ ಎಂತದು. ಎಂದು ಅನ್ನಿಸುತ್ತದೆ . ಕೇವಲ ಕಿವಿಗೆ ಕೇಳುವ ಕಥೆಯಲ್ಲ ಅದು ನಮ್ಮ ಆತ್ಮಕ್ಕೆ ನೀಡುವ ಸಂಸ್ಕಾರ ಇಂದಿನ ಯಾತ್ರಕರ ಜೀವನದಲ್ಲಿ ಮನುಷ್ಯನಿಗೆ ಶಾಂತಿ ಬೇಕಾದರೆ ಅಧ್ಯಾತ್ಮದ ಹಾದಿ ಅನಿವಾರ್ಯ ಈ ಪುರಾಣ ಪ್ರವಚನಗಳು ನಿಮ್ಮಲ್ಲಿನ ಕೆಟ್ಟ ವಿಚಾರಗಳನ್ನು ತೆಗೆದುಹಾಕಿ ಸ್ವರ್ಗದಲ್ಲಿ ನಡೆಯಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು  ಶ್ರೀ ಮಾಂತುಗೌಡ ಸಿದ್ದನಗೌಡ ಬಿರಾದಾರ ಇವರು ಅಚ್ಚುಕಟ್ಟಾಗಿ ಪ್ರಸಾದದ ವ್ಯವಸ್ಥೆ ಮಾಡಿದರುಕಾರ್ಯಕ್ರಮದ ಅಧ್ಯಕ್ಷರಾಗಿ.ಶ್ರೀ ಕೇದಾರನಾಥ ಕತ್ತಿ ಪಿ ಕೆ ಪಿ ಎಸ್ ಅಧ್ಯಕ್ಷರು ಕಡಣಿಮುಖ್ಯ ಅತಿಥಿಗಳಾಗಿ ಶ್ರೀ ಶರಣಗೌಡ ವಿ ಪಾಟೀಲ ಪಿಕೆಪಿಎಸ್ ನಿರ್ದೇಶಕರು ಕಡಣಿ. ಶ್ರೀ ಮಲ್ಲಣ್ಣ ಸಾಹುಕಾರ ಜೇರಟಗಿ. ಬಸವರಾಜ ತಾವರಗೇರಿ ಮಾಜಿ ಗ್ರಾಮ ಪಂಚಾಯಿತಿ  ಅಧ್ಯಕ್ಷರು ಕಡಣಿಅಣವೀರ ಸಾಹುಕಾರ ಕತ್ತಿ ಕಿರಾಣಿ ವ್ಯಾಪರಿಸ್ತರು ಕಡಣಿ. ಡಾ. ಮಲ್ಲು ಪ್ಯಾಟಿ ಗ್ಯಾರೆಂಟಿ ಅನುಷ್ಠಾನ ಸಮಿತಿ ಸದಸ್ಯರು ಕಡಣಿ. ಚನ್ನಮಲ್ಲ ತೇಲಿ ಪಿಕೆಪಿಎಸ್ ಕಡಣಿ. ಗುರುಲಿಂಗಪ್ಪಗೌಡ ಪಾಟೀಲ ಶಿಕ್ಷಕರು ಕಡಣಿ. ಶಿವರಾಯ ಸುರಗಳ್ಳಿ ಹಾಗೂ ಸುತ್ತಮುತ್ತಲಿ ಗ್ರಾಮಸ್ಥರು ಊರಿನ ಹಿರಿಯರು ಮಹಿಳೆಯರು ಯುವಕರು ಭಾಗವಹಿಸಿದರುನಿರೂಪಣೆ ಸಾತನಗೌಡ ಬಿರಾದಾರ ಸ್ವಾಗತ ಕೃಷ್ಣಕುಮಾರ ಗೌಂಡಿ ನಡೆಸಿಕೊಟ್ಟರು