ಲೋಕದರ್ಶನ ವರದಿ
ತಾಂಬಾ 11: ಹಾಲುಮತ ಸಮಾಜ ಹಾಲಿನಷ್ಠೆ ಪವಿತ್ರವಾದ ಸಮಾಜ ಕೊಟ್ಟಮಾತಿನಂತೆ ನಡೆದುಕೊಳ್ಳುವ ಮುಗ್ದ ಜನರು ಹಾಲುಮತ ಸಮಾಜದ ಜನಾಂಗ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ವಾಡೆ ಗ್ರಾಮದ ಶ್ರೀ ಮಾಹಾಲಕ್ಷ್ಮೀ ದೇವಾಸ್ಧಾನದ ಉದ್ಘಾಟಣೆ ಹಾಗೂ ಕಳಸಾರೋಹಣದ ನಿಮಿತ್ಯ ಹಮ್ಮಿಕೊಂಡ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿ ಮನುಷ್ಯ ಎನನ್ನಾದರು ಸಾಧಿಸಬೇಕಾದರೆ. ನೀರಂತರ ಪ್ರಯತ್ನಬೇಕು, ಅಂದುಕೊಂಡದು ಸಾಧಿಸಬೇಕೆಂದರೆ ಪಣತೊಟ್ಟು ನಿಲ್ಲಬೇಕು ಅದಕ್ಕಾಗಿ ಹಾಲುಮತ ಸಮಾಜದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವದರ ಜೋತೆಗೆ ಮಾನವಿಯ ಮೌಲ್ಯಗಳನ್ನು ತಿಳಿಸಿದಾಗ ಮಾತ್ರ ನಿಮ್ಮ ಮಕ್ಕಳು ಇನ್ನುಳಿದ ಮಕ್ಕಳಂತೆ ಮುಂದೆ ಬರಲು ಸಾದ್ಯವಾಗುತ್ತದೆ ನನ್ನ ರಾಜಕಾರಣದಲ್ಲಿ ಹಾಲುಮತ ಸಮಾಜ ಕೈಹಿಡಿದು ಎತ್ತಿದೆ ಮುಂದೆ ಕೂಡಾ ನಿಮ್ಮಆಶೀರ್ವಾದ ನನ್ನ ಮೇಲೆ ಇರಲಿ ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿ ಭಗವಂತನ ಪ್ರೀತಿಗೆ ನಾವು ಪಾತ್ರರಾಗೋಣ ಎಂದರು.
ಶಿರಶ್ಯಾಡ ಮಠದ ಶ್ರೀಮುರಘೇಂದ್ರ ಶಿವಾಚರ್ಾರು ಮಾತನಾಡಿ ಎಲ್ಲರ ಅಂತರಂಗದಲ್ಲು ಪರಮಾತ್ಮನಿದ್ದಾನೆ ಆದರೆ ಜನರು ತಮ್ಮಲಿಯೆ ಹುದಗಿರುವ ಆತ್ಮ ಪರಮಾತ್ಮನನ್ನು ಬಿಟ್ಟು ಬೇರೆ ಎಲ್ಲೂ ದೇವರನ್ನು ಹೂಡುಕುವ ಹುಚ್ಚು ಸಾಹಾಸ ಮಾಡುತ್ತಿದ್ದಾರೆ, ದೇವರು ಹೊರಗಡೆ ಇಲ್ಲ ಎಲ್ಲರ ಒಳಗಡೆ ಇರುವ ದೇವರನ್ನು ಜ್ಞಾನಿಸಿ ಜಪಿಸಬೇಕು ಅಂದಾಗ ಬದುಕು ಸಾರ್ಥಕವಾಗುತ್ತದೆ ಪ್ರತಿಯೊಬ್ಬರು ಬದುಕು ಪಾವನಗೋಳಸಿಕೊಳ್ಳಲು ಇಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂಧನಾಳದ ಶ್ರೀ ವೃಷಭಲಿಂಗ ಮಾಹಾ ಶಿವಯೋಗಿಗಳ ಆಶರ್ಿವಚನ ಕೇಳಿ ಮನದ ಮೈಲಿಗೆ ತೋಳೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ವೃಷಭಲಿಂಗ ಮಾಹಾಶಿವಯೋಗಿಗಳು ಆಶರ್ಿವಚನ ನೀಡಿ ಮನುಷ್ಯ ತಾನು ಬದುಕಿ ಇತರರನ್ನು ಬದುಕಿಸುವುದೆ ನೀಜವಾದ ಜೀವನ ಬದುಕಿನ ಉದ್ದಕ್ಕೂ ಸತ್ಕಾರ ಮಾನವಿಯತೆ ಬಿತ್ತಬೇಕು ಬಂಥನಾಳದ ಶ್ರೀ ಸಂಗನ ಬಸವ ಮಾಹಾಶಿವಯೋಗಿಗಳು ಕಂಡ ಕನಸು ನನಸಾಗಬೇಕಾದರೆ ಸಮಾಜದ ಕಟ್ಟಕಡೆಯ ವೈಕ್ತಿ ಶಿಕ್ಷಣ ಪಡೆದು ಕೋಳ್ಳಬೇಕು ಎಂದರು ಹಾಲುಮತ ಸಮಾಜದ ಯುವ ನಾಯಕ ಮೂಹನ ಮೇಟಿ ಮಾತನಾಡಿ ದಾನ ಧರ್ಮ ಪರೂಪಕಾರ ಇವುಗಳು ನಮ್ಮ ಉಸಿರಾಗಬೇಕು ಮಠ ಮಾನ್ಯಗಳು ಮಾಡುತ್ತಿರುವ ಕಾರ್ಯಗಳು ನೀಜಕ್ಕೂ ಶ್ಲಾಘನಿಯ ಎಂದರು
ಮಕಣಾಪುರದ ಶ್ರೀ ಸೂಮೇಶ್ವರ ಮಾಹಾಸ್ವಾಮಿಗಳು ಸರಸ್ವತಿ ಮಾತನಾಡಿದರು. ಜಿಪಂ ಸದಸ್ಯ ಸುಭಾಸ ಕಲ್ಲೂರ, ಗ್ರಾಪಂ ಅಧ್ಯಕ್ಷ ಗುರುಸಂಗಪ್ಪಾ ಬಾಗಲಕೋಟ, ಅಣ್ಣಾರಾಯ ಅವಟಿ, ಷಣ್ಮಖ ಪೂಜಾರಿ, ಹಿರಗಪ್ಪಾ ನಾಯಕೊಡಿ ಬಸವರಾಜ ಭೈರೋಡಗಿ ಅಯ್ಯಪ್ಪಾ ಅಂಕಲಗಿ ಕುಲಪ್ಪಾ ಬಜಂತ್ರಿ ರಮಾನಂದ ಕುಲಕರ್ಣಿ ರಾಜುಗೌಡ ಪಾಟೀಲ, ರವಿ ಹತರಕಿ ಸೇರಿದಂತೆ ಮತ್ತಿತರರು ಉಪಸ್ಧಿತರಿದ್ದರು. ಸತೀಶ ಅಡವಿ ಸ್ವಾಗತ್ತಿಸಿದರು. ಕೆ.ಎನ್.ಪಾಟೀಲ ನಿರೂಪಿಸಿದರು.ಭಾಷಕರ ದೋಡಮನಿ ವಂದಿಸಿದರು.