ತಾಲೂಕಾ ಮಟ್ಟದ “ಪ್ರಾಚ್ಯ ಪ್ರಜ್ಞೆ ಅರಿವು”
Taluka level “Oriental Consciousness Awareness”
ಧಾರವಾಡ 16: ಪ್ರಾಚೀನ ಪರಂಪರೆ ಸಾರುವ ವಸ್ತುಗಳು ಮಾನವನ ವ್ಯಕ್ತಿತ್ವ ವಿಕಸನಕ್ಕೆ ಸಾಕ್ಷಿಯಾಗಿವೆ, ಅವು ಮುಂದಿನ ಪೀಳಿಗೆಗೂ ಉಳಿಯಬೇಕು ಎಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ತಿಳಿಸಿದರು.
ಅವರು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಧಾರವಾಡ ಗ್ರಾಮೀಣದ ಬಿಆರಸಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ ಪ್ರಾಚ್ಯ ಪ್ರಜ್ಞೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಾಜ್ಯವು ಹಲವಾರು ಪ್ರಾಚೀನ ರಾಜಮನೆತನಗಳ ಆಳ್ವಿಕೆಗಳಿಗೆ ಒಳಪಟ್ಟಿದ್ದು, ಈ ರಾಜಮನೆತನಗಳು ತಮ್ಮ ಆಡಳಿತಾವಧಿಯಲ್ಲಿ ಹಲವಾರು ಪಳೆಯುಳಿಕೆಗಳನ್ನು ಸ್ಮಾರಕಗಳ ರೂಪದಲ್ಲಿ ಬಿಟ್ಟುಹೋಗಿವೆ. ಇಂತಹ ಪ್ರಾಚೀನ ಸ್ಮಾರಕಗಳು, ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ವಾಸ್ತುಶಿಲ್ಪ ಶೈಲಿಗಳನ್ನು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಲುವಾಗಿ ಪ್ರಾಚ್ಯಪ್ರಜ್ಞೆ ಎಂಬ ನೂತನ ಕಾರ್ಯಕ್ರಮವನ್ನು ಪ್ರತಿ ತಾಲ್ಲೂಕಿನಲ್ಲಿರುವ ಪ್ರೌಢ ಶಾಲೆಗಳಲ್ಲಿ ಪ್ರಾಚೀನ ಇತಿಹಾಸ ಸ್ಮಾರಕ, ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ವಾಸ್ತುಶಿಲ್ಪಗಳ ಬಗ್ಗೆ ಹಾಗೂ ಇತಿಹಾಸ ಪರಂಪರೆ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವುದಾಗಿದೆ ಎಂದರು.
ಕೇತ್ರ ಸಮನ್ವಯಾಧಿಕಾರಿ ಕುಮಾರ ಕೆ. ಎಫ್ ಮಾತನಾಡುತ್ತಾ ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ವರ್ಷ ಇತಿಹಾಸವುಳ್ಳ ದೇವಸ್ಥಾನಗಳು, ಬಸದಿಗಳು, ಶಿಲಾಶಾಸನಗಳು, ಇದ್ದು, ನಮ್ಮ ಪ್ರಾಚೀನ ಪರಂಪರೆಯನ್ನು ಅನಾವರಣಗೊಳಿಸುವ ಪ್ರತೀಕಗಳಾಗಿವೆ. ಇಂದಿನ ಯುವಜನತೆಗೆ ಅವುಗಳ ಪರಂಪರೆಯೇ ಗೊತ್ತು ಮಾಡುವ ಅವಶ್ಯಕತೆ ಇದೆ ಎಂದರು.
ಬಿಆರ್‌ಪಿ ನರಸಿಂಹಮೂರ್ತಿ ರಾಜೂರ್, ಪ್ರಸ್ಥಾವಿಕವಾಗಿ ಮಾತನಾಡುತ್ತಾ ಪ್ರಾಚೀನಪರಂಪರೆ ಕುರಿತು ಜಾಗೃತಿ ಮೂಡಲಿ ಎನ್ನುವ ಉದ್ದೇಶದಿಂದ ತಾಲೂಕ ಮಟ್ಟದ ಪ್ರಾಚ್ಯ ಪ್ರಜ್ಞೆ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಜೊತೆಗೆ ಪರಂಪರೆ ಬಗ್ಗೆ ಅಭಿಮಾನ ಮೂಡುವಂತೆ ಮಾಡಲು ವಿದ್ಯಾರ್ಥಿಗಳಿಗೆ ಕರ್ನಾಟಕದ ಪರಂಪರೆ ಕುರಿತು ಪ್ರಬಂಧ, ರಸಪ್ರಶ್ನೆ, ಭಾಷಣ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಏರಿ್ಡಸಲಾಗಿದೆ ಎಂದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ, ತಾಲೂಕಿನ ಕೀರ್ತಿತರಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಕೇತ್ರ ಸಮನ್ವಯಾಧಿಕಾರಿ ಕುಮಾರ ಕೆ. ಎಫ್. ಶಿಕ್ಷಣ ಸಂಯೋಜಕರಾದ ಶ್ರೀಕಾಂತ್ ಗೌಡ್ರ, ಸಿ ಎಮ ಲಾಳನವರ, ಬಿಆರ್‌ಪಿ ಎಸ್ ವಿ ಸಂತಿ, ನರಸಿಂಹಮೂರ್ತಿ ರಾಜೂರ್, ಪ್ರಾಥಮಿಕ ಶಿಕ್ಷಣ ಸಂಯೋಜಕರಾದ ಎ ಎಚ್ ನದಾಫ, ಸುಭಾಸ ತಿಗಡೋಳ್ಳಿ, ತಾಲೂಕಿನಿಂದ ಆಗಮಿಸಿದ ವಿವಿಧ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ನಿರ್ಣಾಯಕರು ಉಪಸ್ಥಿತರಿದ್ದರು.
ಮೊದಲಿಗೆ ಸುಭಾಸ ತಿಗಡೋಳ್ಳಿ ಸ್ವಾಗತಿಸಿದರೆ, ಎ ಎಚ್ ನದಾಫ ನಿರೂಪಿಸಿದರು, ಕೊನೆಯಲ್ಲಿ ಶ್ರೀಕಾಂತ್ ಗೌಡ್ರ ವಂದಿಸಿದರು.
ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಮಾತನಾಡುತ್ತಿರುವುದು.ಅಂತಿಮ ಹಂತದ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಲ್ಲಿನರಾಗಿರುವುದು. ವಿಜೇತರೊಂದಿಗೆ ಭಾವಚಿತ್ರ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 