ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ


ಲೋಕದರ್ಶನ ವರದಿ

ಹೊಸಪೇಟೆ 12: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ,  ಮುಖ್ಯೋಪಾಧ್ಯಾಯರ ಸಂಘ, ಕನರ್ಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಹಾಗೂ ಕನ್ನಡ ಭಾಷಾ ಶಿಕ್ಷಕರ ವೇದಿಕೆಯ ಸಹಯೋಗದಲ್ಲಿ ಹೊಸಪೇಟೆ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಕಾಯರ್ಾಗಾರ  ಕಾರ್ಯಕ್ರಮವನ್ನು ಪಿ.ಬಿ.ಎಸ್. ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಲ್.ಡಿ.ಜೋಶಿ ಯವರು ಶಿಕ್ಷಕರ ಕಾರ್ಯಕ್ಷಮತೆ ಮತ್ತು ಹೊಸ ರೂಪದ ಕಲಿಕೆ ಪರಿಣಾಮವಾಗಿ 57 ವಿದ್ಯಾಥರ್ಿಗಳು 125 ಅಂಕಗಳಿಗೆ 125 ಅಂಕಗಳನ್ನು ಪಡೆದು  ತಾಲೂಕಿಗೆ ಕೀತರ್ಿ ತಂದಿದ್ದಾರೆ. ಮುಂದಿನ ಕಲಿಕೆ ಸೃಜನಾತ್ಮಕವಾಗಿರಲೆಂದು ಹಾರೈಸಿದರು. 

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಲಯ ಅರಣ್ಯಾಧಿಕಾರಿಗಳಾದ ಎಂ.ನಾಗರಾಜ ಅವರು ಮಾತನಾಡಿ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಸಸಿ ಉಡುಗೊರೆಯಾಗಿ ನೀಡಿ ಮರಗಳು ಬೆಳೆದು ನೆರಳು ನೀಡುವಂತೆ  ನಿಮ್ಮ ತಂದೆ ತಾಯಿಗಳಿಗೆ ನೀವು ನೆರಳಾಗಿರಿ ಎಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಣ್ಣ ಈರಪ್ಪ ವಹಿಸಿದ್ದರು, ಪ್ರಭುರಾಜ್ ಪಾಟೀಲ್, ರೇವಣ ಸಿದ್ದಪ್ಪ, ಕೆ.ಮಲ್ಲೇಶಪ್ಪ, ವಿದ್ಯಾಧರ, ಯಮನೂರಪ್ಪ, ಡಾ|| ಅಕ್ಕಮಹಾದೇವಿ, ಧನರಾಜ್, ಕುಮಾರಸ್ವಾಮಿ, ಲೀಲಾಮೂತರ್ಿ, ಟಿ.ಎಂ.ಬಸವರಾಜ್, ದಸ್ತಗೀರ್, ಮತ್ತು ವಿವಿಧ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.ಬಡೇಕಾನ್ ಅವರ ಕಾರ್ಯಕ್ರಮ ನಿರ್ವಹಿಸಿದರು, ಬಸವರಾಜ್ ವಂದಿಸಿದರು, ಯತ್ನಳ್ಳಿ ಮಲ್ಲಯ್ಯ ಸ್ವಾಗತಿಸಿದರು.