ತಾಲೂಕು ಆಡಳಿತದಿಂದ ಭಗವಾನ್ ಗೌತಮ ಬುದ್ಧನ ಜಯಂತಿ ಆಚರಣೆ
Taluk administration celebrates Lord Gautama Buddha's birthday
ಲೋಕದರ್ಶನ ವರದಿ
ಕಂಪ್ಲಿ 01 : ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಕರ್ನಾಟಕ ಬೌದ್ಧ ಸಮಾಜದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭಗವಾನ್ ಗೌತಮ ಬುದ್ಧನ ಜಯಂತಿ ಆಚರಣೆ ಶುಕ್ರವಾರದಂದು ಸಡಗರ, ಸಂಭ್ರಮದ ಜೊತೆಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.ನಂತರ ಕರ್ನಾಟಕ ಬೌದ್ಧ ಸಮಾಜದ ಅಧ್ಯಕ್ಷ ಸುಗ್ಗೇನಹಳ್ಳಿ ರಮೇಶ ಮಾತನಾಡಿ, ಭಗವಾನ ಬುದ್ಧರ ಜೀವನ ಚರಿತ್ರೆ ಮಾನವೀಯ ಮೌಲ್ಯಗಳ ಆಧಾರಿತವಾಗಿದ್ದು, ಬುದ್ಧನ ಚರಿತ್ರೆ ವಿಶ್ವಕ್ಕೆಲ್ಲ ಆದರ್ಶವಾಗಿದೆ. ಬುದ್ಧ, ಬಸವ ಹಾಗೂ ಅಂಬೇಡ್ಕರರ ತತ್ವ-ಸಿದ್ಧಾಂತಗಳು ಪ್ರಸ್ತುತ ಅತ್ಯಗತ್ಯವಾಗಿವೆ. ಗೌತಮ ಬುದ್ಧನ ಆದರ್ಶ ವಿಶ್ವಕ್ಕೆ ಮಾದರಿಯಾಗಿದೆ. ಪ್ರೀತಿ, ಕುರುಣೆ ಹಾಗೂ ಸಮಾನತೆ ಬುದ್ಧನ ಆದರ್ಶ. ಗೌತಮ ಬುದ್ಧನ ತತ್ತ್ವ ಅದರ್ಶಗಳು ಹೆಚ್ಚು ಪ್ರಚಲಿತವಾಗುತ್ತಿವೆ. ಸಾವಿರಾರು ವರ್ಷಗಳ ಹಿಂದೆ ಇದ್ದ ಬುದ್ಧ ಇಂದಿಗೂ ಪ್ರಸ್ತುತವಾಗುತ್ತಿದ್ದಾನೆ. ಅವರ ಮಾರ್ಗದಲ್ಲಿ ನಾವೆಲ್ಲರೂ ನಡೆದದ್ದೇ ಆದರೆ ದೇಶ ಅಥವಾ ವಿಶ್ವದಲ್ಲಿ ಅಶಾಂತಿ, ಅಸಮಾನತೆಗೆ ಜಾಗವೇ ಇರಲ್ಲ ಎಂದರು.
ಉಪಾಧ್ಯಕ್ಷ ಪುಟಾಣಿ ಅಂಜಿನಪ್ಪ ಮಾತನಾಡಿ, ಪ್ರಪಂಚಕ್ಕೆ ಶಾಂತಿ, ಅಹಿಂಸೆ ಮಾರ್ಗವನ್ನು ತೋರಿಸಿದ ಬುದ್ಧ, ಅಸೆಯೇ ದುಃಖಕ್ಕೆ ಮೂಲ ಎಂದು ಜಗತ್ತಿಗೆ ಸಾರಿ ಸನ್ಮಾರ್ಗದಲ್ಲಿ ನಡೆಯುವಂತೆ ಸಲಹೆ ನೀಡಿದ ಮಹಾ ಪುರುಷ ಎಂದರು. ಈ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯ ಸಿದ್ದಣ್ಣ ಪರಮೇಶ್ವರ, ಎಪಿಎಂಸಿ ಕಛೇರಿ ಸಿಬ್ಬಂದಿ ಸುಕೃತ್ ಸ್ವಾಮಿ, ಪ್ರಥಮ ದರ್ಜೆ ಸಹಾಯಕ ಮಾಲತೇಶ ದೇಶಪಾಂಡೆ, ವಿಎ ಕಾಂತರಾಜ್, ರಮೇಶ, ಮುಖಂಡರಾದ ಡಿ.ಮುನಿಸ್ಚಾಮಿ, ವಸಂತರಾಜ್ ಕಹಳೆ, ಕೆ.ಚಂದ್ರ್ಪ, ಉಮೇಶ, ಬಸವರಾಜ(ಶಿಕ್ಷಕ), ಚನ್ನಪ್ಪ, ಮಂಜುನಾಥ, ಮಾನ್ವಿ ಮಹೇಶ, ಸಿದ್ದಿ ಹರ್ಷ, ಸಿಬ್ಬಂದಿಗಳಾದ ಡಿ.ಸಂಗೀತಾ, ಚಂದ್ರ್ಪ ತಳವಾರ ಸೇರಿದಂತೆ ಇತರರು ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 