ತಾಲೂಕಾಡಳಿತದಿಂದ ಭಗವಾನ್ ಬುದ್ಧರ ಜಯಂತಿ ಆಚರಣೆ

Taluk administration celebrates Lord Buddha's Jayanti

ತಾಳಿಕೋಟಿ 13: ಪಟ್ಟಣದ ತಹಸಿಲ್ದಾರ್ ಕಾರ್ಯಾಲಯ ಸಭಾಂಗಣದಲ್ಲಿ ಭಗವಾನ್ ಬುದ್ಧರ 2588 ನೇ ಜಯಂತಿಯನ್ನು ಸೋಮವಾರ ಆಚರಿಸಲಾಯಿತು.  

ಜಯಂತಿ ಅಂಗವಾಗಿ ಭಗವಾನ್ ಬುದ್ಧರ ಭಾವಚಿತ್ರಕ್ಕೆ ಬೌದ್ಧ ಧರ್ಮದ ವಿಧಿ ವಿಧಾನಗಳೊಂದಿಗೆ ಪೂಜೆಯನ್ನು ಮುಖಂಡ ಬಸವರಾಜ ಕಟ್ಟಿಮನಿ ನೆರವೇರಿಸಿ ಕೊಟ್ಟರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಜೈ ಭೀಮ ಮುತ್ತಗಿ ಹಾಗೂ ಮಹೇಶ ಚಲವಾದಿ ಅವರು ಭಗವಾನ್ ಬುದ್ಧರ ಜೀವನ ಸಂದೇಶದ ಕುರಿತು ಮಾತನಾಡಿದರು. ತಹಸಿಲ್ದಾರ್ ಡಾ.ವಿನಯಾ ಹೂಗಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಿ.ಆರಿ​‍್ಸ. ರಾಜು ವಿಜಾಪುರ ನಿರೂಪಿಸಿದರು. 

ಈ ಸಮಯದಲ್ಲಿ ಗಣ್ಯರಾದ ಬಿ.ಬಿ. ಕಟ್ಟಿಮನಿ,ಜಿ.ಜಿ.ಮದರಕಲ್ಲ, ದೇವೇಂದ್ರ ಹಾದಿಮನಿ, ನಾಗೇಶ ಎಂ. ಕಟ್ಟಿಮನಿ,ಸಾಮಾಜಿಕ ಕಾರ್ಯಕರ್ತ ಅಬೂಬಕರ ಲಾಹೊರಿ, ಗೋಪಾಲ ಕಟ್ಟಿಮನಿ, ಮಶಾಕ್ ಜಮಾದಾರ, ಅಲ್ತಾಫ್ ಬಿಜಾಪುರ,ತಾಪಂ ನ ಮಹಾಂತಗೌಡ ದೊರೆಗೋಳ, ಸಿರಸ್ತೆದಾರ ಜೆ.ಆರ್‌.ಜೈನಾಪೂರ, ಮುಖ್ಯ ಶಿಕ್ಷಕಿ ಆರಿ​‍್ಬ.ಆಲೂರ, ಪುರಸಭೆ, ಕಂದಾಯ,ಶಿಕ್ಷಣ ಇಲಾಖೆ ಹಾಗೂ ಹೆಸ್ಕಾಂ ಅಧಿಕಾರಿಗಳು ಮತ್ತು ಸಮಾಜದ ಗಣ್ಯರು ಇದ್ದರು.