ಬೆಳಗಾವಿ, 12: ನಿವೃತ್ತ ಅಪರ ಜಿಲ್ಲಾಧಿಕಾರಿ ಎಂ.ಬಿ. ಬಡಬಡೆ (ಮೆಹಬೂಬಸಾಹೇಬ ಬಡಬಡೆ) ನಿನ್ನೆ ರಾತ್ರಿ (ರವಿವಾರ) 11 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಚಿಕ್ಕೋಡಿ ಉಪವಿಭಾಗಾಧಿಕಾರಿಗಳಾಗಿ, ಬೆಳಗಾವಿ ಅಪರ ಜಿಲ್ಲಾಧಿಕಾರಿಯಾಗಿ ಅವರು ಸೇವೆ ಸಲ್ಲಿಸಿದ್ದರು. ಮೃತರು ದಕ್ಷ ಅಧಿಕಾರಿಯಾಗಿದ್ದರು. ಇಂದು ಮಧ್ಯಾಹ್ನ 2 ಗಂಟೆಗೆ ಮೃತರ ಅಂತ್ಯಸಂಸ್ಕಾರ ಬೆಳಗಾವಿಯ ಸ್ಮಶಾನಭೂಮಿಯಲ್ಲಿ ನೆರವೇರಿತು. ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು, ಹಿತೈಷಿಗಳು, ಸಂಬಂಧಿಕರು ಪಾಲ್ಗೊಂಡು ಅವರಿಗೆ ಅಂತಿಮ ಶ್ರದ್ದಾಂಜಲಿ ಅರ್ಿಸಿದರು. ದಿ. ಎಂ.ಬಿ. ಬಡಬಡೆ ಅವರು ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳ್ಳು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.