ತಾಲೂಕು ಮಟ್ಟದ ಸಂವಿಧಾನ ದಿನಾಚರಣೆ ಕಾರ್ಯಕ್ರಮ
Taluk Level Constitution Day Celebration Program
ಹುಬ್ಬಳ್ಳಿ 26: ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ ನಮಗೆ ಅರ್ಿಸಿದ್ದಾರೆ. ಶಿಕ್ಷಣ ಕ್ರಾಂತಿ ಮಾಡಿದ ಮಹಾನ್ ನಾಯಕ ಅಂಬೇಡ್ಕರ್ ಅವರಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಹುಬ್ಬಳ್ಳಿ ಶಹರ ತಹಶೀಲ್ದಾರರಾದ ಮಹೇಶ ಗಸ್ತೆ ಹೇಳಿದರು.
ಇಂದು ತಾಲೂಕು ಆಡಳಿತಸೌಧದ ತಾಲೂಕು ಪಂಚಾಯತ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ, ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವುಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕು ಮಟ್ಟದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸಂವಿಧಾನ ಪ್ರತಿದಿನದ ವಿಷಯವಾಗಿದೆ. ಸಂವಿಧಾನವು ಎಲ್ಲಾ ವರ್ಗಕ್ಕೂ ಸಂಬಂಧಿಸಿದೆ. ಅಂಬೇಡ್ಕರ್ ಅವರು ಎಲ್ಲರಿಗೋಸ್ಕರ ಕನಸು ಕಂಡಿದ್ದರು. ಇಂದು ಇಡೀ ಭಾರತೀಯರಿಗೆ ಹಕ್ಕು ಸಿಕ್ಕ ದಿನವಾಗಿದೆ. ಶಿಕ್ಷಣ, ಜ್ಞಾನದ ಮೂಲಕ ಕ್ರಾಂತಿ ಮಾಡಿದವರು. ಪ್ರತಿ ಮನೆಯಲ್ಲಿ ಶಿಕ್ಷಣ ಕ್ರಾಂತಿಯಾಗಬೇಕು. ಶಿಕ್ಷಣದಿಂದ ಬಹುದೊಡ್ಡ ಕ್ರಾಂತಿ ಮಾಡಿದ್ದಾರೆ. ಎಲ್ಲರೂ ಶಿಕ್ಷಣವಂತರಾಗಬೇಕು. ಎಲ್ಲಾ ಹಕ್ಕುಗಳನ್ನು ಪಡೆದು ಜೀವನದಲ್ಲಿ ಉನ್ನತ ಮಟ್ಟಕ್ಕೆ ಬರಬೇಕು. ಸಂವಿಧಾನ ಅಂಗೀಕಾರವಾದ ದಿನ ಇಂದು. ಸಂವಿಧಾನ ಹೆಚ್ಚು ಶಕ್ತಿಯುತವಾಗಿ ಬೆಳಕಿಗೆ ಬರಲಿ ಎಂದು ಅವರು ಆಶಿಸಿದರು.
ಗೋಕುಲದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಫ್.ಬಿ.ಸೊರಟೂರ್ ಅವರು ಮಾತನಾಡಿ, ದೇಶದ ಪ್ರಜೆಗಳಲ್ಲಿ ಸಮಾನತೆ, ಭಾತೃತ್ವ ಭಾವನೆಯನ್ನು ಹುಟ್ಟು ಹಾಕಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಅವರು ಶಿಕ್ಷಣದ ಮೂಲಕ ನಮ್ಮನ್ನು ತಿದ್ದಿದ್ದಾರೆ. ಭರತ ಆಳಿದ ರಾಷ್ಟ್ರ ಭಾರತವಾಗಿದೆ. ಭಾರತದಲ್ಲಿ ಹುಟ್ಟುವುದೇ ನಮ್ಮ ಪುಣ್ಯವಾಗಿದೆ. ಅಂಬೇಡ್ಕರ್ ಅವರು ಒಂದು ಸಮುದಾಯಕ್ಕೆ ಸೀಮಿತರಲ್ಲ. ವಿಶ್ವದ ಆಸ್ತಿ ಅಂಬೇಡ್ಕರ್ ಅವರಾಗಿದ್ದಾರೆ. ವಿಶ್ವದ 172 ರಾಷ್ಟ್ರಗಳು ಸಂವಿಧಾನವನ್ನು ಹೊಂದಿವೆ. ಅತಿದೊಡ್ಡ ಲಿಖಿತ ಸಂವಿಧಾನ ಹೊಂದಿದ ರಾಷ್ಟ್ರ ನಮ್ಮದಾಗಿದೆ. ಅಂತಹ ಸಂವಿಧಾನ ರಚಿಸಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. 55 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಓದಿದವರು ಅಂಬೇಡ್ಕರ್. 60 ರಾಷ್ಟ್ರಗಳ ಸಂವಿಧಾನ ಅಧ್ಯಯನ ಮಾಡಿದ್ದರು. ಮಹಿಳೆಯರ ಶಿಕ್ಷಣಕ್ಕಾಗಿ ಜ್ಯೋತಿಬಾ ಫುಲೆ ಅವರು ಹೋರಾಡಿದರು. ಜಾತ್ಯಾತೀತ ರಾಷ್ಟ್ರ ಭಾರತವಾಗಿದೆ ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಾರೆ್ಪಣ ಸಲ್ಲಿಸಿದರು. ಬುದ್ಧ, ಬಸವ, ಅಂಬೇಡ್ಕರ್ ಅವರ ವೇಷಭೂಷಣದ ವಿದ್ಯಾರ್ಥಿಗಳು ಗಮನ ಸೆಳೆದರು.
ತಾಲೂಕು ಪಂಚಾಯತ ಸಹಾಯಕ ನಿರ್ದೇಶಕರಾದ ಚಂದ್ರಶೇಖರ ಕುರ್ತಕೋಟಿ, ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಫಡ್ನೇಶಿ, ವಕೀಲರಾದ ಸವಿತಾ ಪಾಟೀಲ, ಸಮಾಜದ ಮುಖಂಡರಾದ ಪ್ರಕಾಶ ಹುಬ್ಬಳ್ಳಿ, ಉಮೇಶ, ಇಂದುಮತಿ ಶಿಗ್ಗಾವಿ, ಶೋಭಾ ಬಳ್ಳಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ನಿಲಯ ಪಾಲಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ ಸ್ವಾಗತಿಸಿದರು. ಚಂದ್ರಶೇಖರ ಯಾದಗೇರಿ ಅವರು ಕ್ರಾಂತೀಗೀತೆ ಹಾಡಿದರು. ನಿಲಯ ಪಾಲಕರಾದ ಪ್ರಹ್ಲಾದ್ ಗೆಜ್ಜಿ ಅವರು ಸಂವಿಧಾನ ಪೀಠಿಕೆ ಬೋಧಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 