ಕದನವಿರಾಮ ಬೆನ್ನಲ್ಲೇ ತಾಲಿಬಾನ್ ಉಗ್ರರಿಂದ 100 ಮಂದಿ ಒತ್ತೆಯಾಳು


ಕಾಬೂಲ್: ಹೆಂಗಸರು, ಮಕ್ಕಳು ಸೇರಿದಂತೆ ಸುಮಾರು ನೂರು ಮಂದಿಯನ್ನು ತಾಲಿಬಾನ್ ಭಯೋತ್ಪಾದಕರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವ ಘಟನೆ ಅಫ್ಘಾನಿಸ್ತಾನದಲ್ಲಿ ಸೋಮವಾರ ನಡೆದಿದೆ. 

ಈದ್ ಅಲ್ ಅಧಾ ರಜೆಯ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ್ ಅಧ್ಯಕ್ಷ ಅಶ್ರಫ್ ಗನಿ ತಾಲಿಬಾನ್ ಉಗ್ರರ ವಿರುದ್ಧ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ತಾಲಿಬಾನ್ ಉಗ್ರರು ಇದೀಗ ನೂರು ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವ ಘಟನೆ ನಡೆದಿದೆ. 

ಕದನ ವಿರಾಮವನ್ನು ಮುಖಂಡರು ಒಪ್ಪಿಕೊಂಡಿರುವುದಾಗಿ ತಾಲಿಬಾನ್ ಮೂಲಗಳು ತಿಳಿಸಿರುವುದಾಗಿ ರಾಯಟಸರ್್ ವರದಿ ಹೇಳಿದ್ದು, ಏತನ್ಮಧ್ಯೆ ಈ ಬಗ್ಗೆ ತಾಲಿಬಾನ್ ಮುಖ್ಯ ನಾಯಕ, ಉಗ್ರ ಶೇಕ್ ಹೈಬತುಲ್ಲಾನ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ವರದಿ ವಿವರಿಸಿದೆ. 

ಷರತ್ತುಸಹಿತ ಕದನ ವಿರಾಮ ಇಂದಿನಿಂದ ಆರಂಭವಾಗಲಿದ್ದು, ಎಲ್ಲಿಯವರೆಗೆ ತಾಲಿಬಾನ್ ಇದನ್ನು ಗೌರವಿಸಿ ರಕ್ಷಿಸಿಕೊಳ್ಳುತ್ತದೆಯೋ ಅಲ್ಲಿಯವರೆಗೆ ಮುಂದುವರಿಯಲಿದೆ ಎಂದು ಗನಿ 

ತಿಳಿಸಿದ್ದರು.