ವಿದ್ಯಾರ್ಥಿಗಳು ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಪ್ರತಿಭಾ ಶೋಧ: ಡಾ. ಅಜಿತ ಪ್ರಸಾದ

ವಿದ್ಯಾರ್ಥಿಗಳು ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಪ್ರತಿಭಾ ಶೋಧ: ಡಾ. ಅಜಿತ ಪ್ರಸಾದ Talent search is a suitable platform for students to showcase their talents: Dr. Ajit Prasad

ಧಾರವಾಡ 16: ಪಠ್ಯದ ಜೊತೆಜೊತೆಗೆ ಪಠ್ಯೇತರ ಚಟುವಟಿಕೆಗಳು ಸಹ ವಿದ್ಯಾರ್ಥಿಗಳ ಸವಾಂರ್ಗೀಣ ವಿಕಾಸಕ್ಕೆ ಪೂರಕ. ಹೀಗಾಗಿ ವಿದ್ಯಾರ್ಥಿಗಳು ಕಲೆ, ಕ್ರೀಡೆ ಸೇರಿದಂತೆ ಇನ್ನಿತರ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಅನಾವರಣಗೊಳಿಸಲು ಸನ್ನದ್ಧರಾಗಬೇಕು ಎಂದು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.  

ಸಂಸ್ಥೆಯ ಕಾರ್ಯಾಧ್ಯಕ್ಷರಾದ ಪದ್ಮವಿಭೂಷಣ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ 78ನೇ ಜನ್ಮ ದಿನದ ಅಂಗವಾಗಿ ಜೆ.ಎಸ್‌.ಎಸ್‌. ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ "ಪ್ರತಿಭಾ ಶೋಧ-2025 ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು. 

ವಿದ್ಯಾರ್ಥಿಗಳಿಗಾಗಿ ಭಾಷಣ, ರಸಪ್ರಶ್ನೆ, ವಿಡಿಯೋಗ್ರಾಫಿ ಮತ್ತು ಫೋಟೊಗ್ರಾಫಿ, ಪ್ರಬಂಧ  ಸ್ಪರ್ಧೆ ಏರಿ​‍್ಡಸಲಾಗಿದ್ದು ಧಾರವಾಡ ಸುತ್ತಮುತ್ತಲಿನ ಊರುಗಳಿಂದ ನೂರಾರು ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿರುವುದು ಸಂತಸ ತಂದಿದೆ. ಸಂಸ್ಥೆಯು ಪ್ರತಿ ವರ್ಷ ಪದವಿ ಪೂರ್ವ ಮತ್ತು ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿರುತ್ತದೆ. ಈ ಉತ್ಸವದಿಂದ ವಿದ್ಯಾರ್ಥಿಗಳ ಕೌಶಲ್ಯ ಹೊರತರುವ ಪ್ರಯತ್ನವಾಗಿದೆ. ಅದರೊಂದಿಗೆ ವಿದ್ಯಾರ್ಥಿಗಳಲ್ಲಿ ಸಂಘಟನಾ, ನಾಯಕತ್ವ, ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಲು ಸೂಕ್ತ ಅವಕಾಶ ಸಿಗುತ್ತದೆ. ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಇರುವ ವಿವಿಧ ಸೌಕರ್ಯಗಳ ಮತ್ತು ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗಾಗಿ ನಿರ್ಮಿಸಲಾದ ಪ್ರತ್ಯೇಕ ಗ್ರಂಥಾಲಯ ಮತ್ತು ಪುಸ್ತಕಗಳ ಕುರಿತು ತಿಳಿಸಿದರು. ಜೊತೆಗೆ   ಉದ್ಯೋಗ ಮೇಳ ಏರಿ​‍್ಡಸುವುದರ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿದೆ. ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿದೆ. ವಿದ್ಯಾರ್ಥಿಗಳ ಸತತ ಪರಿಶ್ರಮ ಮತ್ತು ಅಧ್ಯಾಪಕರ ಬೋಧನೆಯಿಂದ ಕಾಲೇಜಿಗೆ ಸತತವಾಗಿ 14 ವರ್ಷದಲ್ಲಿ 72 ಯುನಿವರ್ಸಿಟಿ ಯಾಂರ್ಕ್ ಬಂದಿದ್ದು ಮತ್ತು ಕ್ರೀಡೆಯಲ್ಲಿ ಐದನೇ ಬಾರಿ ಜನರಲ್ ಚಾಂಪಿಯನ್ ಮೂಲಕ ವಿಶ್ವವಿದ್ಯಾಲಯಕ್ಕೆ ಗೌರವವನ್ನು ತಂದುಕೊಟ್ಟ ಮಹಾವಿದ್ಯಾಲಯವಾಗಿದೆ ಎಂದರು. ಸ್ಪರ್ಧಾರ್ಥಿಗಳು ಕ್ರೀಡಾ ಮನೋಭಾವದಿಂದ ಪ್ರತಿಭಾ ಶೋಧ  ಸ್ಪರ್ಧೆಯಲ್ಲಿ ಭಾಗವಹಿಸಿ ಕೀರ್ತಿವಂತರಾಗಿರಿ ಎಂದು ಶುಭಹಾರೈಸಿದರು. 

ಕಾಲೇಜಿನ ಲಲಿತಕಲಾ ಸಂಘದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕು. ಸ್ಪೂರ್ತಿ ಹೆಗಡೆ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಕು. ಶ್ವೇತಾ ವಂದಿಸಿದರು. ಕು. ಸಂಹಿತಾ ಮತ್ತು ರಂಜಿತಾ ನಿರೂಪಿಸಿದರು. ಆಡಳಿತಾಧಿಕಾರಿಗಳಾದ ಅರಿಹಂತ ಪ್ರಸಾದ, ಡಾ. ಸೂರಜ ಜೈನ, ಮಹಾವೀರ ಉಪಾದ್ಯೆ, ಆರ್‌.ವಿ ಚಿಟಗುಪ್ಪಿ, ವಿವೇಕ ಲಕ್ಷ್ಮೇಶ್ವರ, ಶೃತಿ ಶೆಟ್ಟಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ವಿವಿಧ ಕಾಲೇಜುಗಳಿಂದ ಆಗಮಿಸಿದ ಸ್ಪರ್ಧಾರ್ಥಿಗಳು ಉಪಸ್ಥಿತರಿದ್ದರು.