ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಲು ಪ್ರತಿಭಾ ಕಾರಂಜಿ ಸಹಕಾರಿ
Talent Fountain helps identify talent in students
ಹನುಮಸಾಗರ 29: ವಿದ್ಯಾರ್ಥಿಗಳಲ್ಲಿನ ಎಲೆಮರೆಯ ಕಾಯಂತೆ ಇರುವ ಪ್ರತಿಭೆಯನ್ನು ಗುರುತಿಸಲು ವೇದಿಕೆ ಕಲ್ಪಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಪಿಡಿಒ ನಿಂಗಪ್ಪ ಮೂಲಿಮನಿ ಹೇಳಿದರು. ಪಟ್ಟಣದ ಸರ್ವೋದಯ ಹಿರಿಯ ಮತ್ತು ಪ್ರೌಢ ಶಾಲೆಯ ಸಹಯೋಗದಲ್ಲಿ ಹನುಮಸಾಗರ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ-ಕಲಲೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗ್ರಾಮೀಣ ಭಾಗದಲ್ಲಿ ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಮಕ್ಕಳಲ್ಲಿ ಹಲವು ಆಯಾಮಗಳಲ್ಲಿ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅನಾವರಣಗೊಳಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಆರ್ ಪಿ ಲೆಂಕಪ್ಪ ವಾಲಿಕಾರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಿಕ್ಷಣ ಇಲಾಖೆ ಮಕ್ಕಳಲ್ಲಿನ ಕಂಟ ಪಾಠ, ಭಾಷಣ, ಪ್ರಭಂದ ಸ್ಪರ್ಧೆ, ಜನಪದ ನೃತ್ಯ ಸೇರಿದಂತೆ ಸೃಜನಾತ್ಮಕ ಕೌಶಲ್ಯಗಳನ್ನು ಬೆಳೆಸುವಲ್ಲಿ ಪ್ರತಿಭಾಕಾರಂಜಿ ಪೂರಕವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿಸರ್ವೋದಯ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀನಿವಾಸ್ ಜಹಗೀರದಾರ, ಪ್ರಹ್ಲಾದ ಆಚಾರ ಪೂಜಾರ, ವಿಜೇಂದ್ರ ಕುಲಕರ್ಣಿ, ಮುದಿಯಪ್ಪ ವಾಲ್ಮೀಕಿ, ವಿಶ್ವನಾಥ ನಾಗೂರ, ಬಾಲಕರ ಮುಖ್ಯಶಿಕ್ಷಕ ಬಸಪ್ಪ ಬಂಡಿವಡ್ಡರ, ಕಬ್ಬರಗಿ ಶಾಲೆಯ ಯಲ್ಲನಗೌಡ ಪಾಟೀಲ, ಕುರುಬಗೇರ ಶಾಲೆಯ ಚಂದಪ್ಪ ಹಕ್ಕಿ, ಸುರೇಶ, ಅಶೋಕ ಕಟ್ಟಿಮನಿ, ಮಾರುತಿ ರಂಗ್ರೇಜ, ಭಾರತಿ ದೇಸಾಯಿ, ಗೌರಮ್ಮ ತಳವಾರ ಸೇರಿದಂತೆ ಹನುಮಸಾಗರ ಕ್ಲಸ್ಟರ ಮಟ್ಟದ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 