8 ರಂದು ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ
Talent Award Exam on the 8th
ಮುದ್ದೇಬಿಹಾಳ 07: ತಾಲೂಕಿನ ನಾಗರಬೆಟ್ಟ ಆಕ್ಸಪರ್ಡ್ ಪಾಟೀಲ ಪಿಯು ಸೈನ್ಸ್ ಕಾಲೇಜು ವತಿಯಿಂದ ಫೆ,8 ಭಾನುವಾರದಂದು ಮದ್ಯಾಹ್ನ 12 ಗಂಟೆಗೆ ಬಾಗಲಕೋಟೆಯಲ್ಲಿ ಇದೇ ಪ್ರಥಮ ಬಾರಿಗೆ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ ನಡೆಯಲಿದೆ.
ಪ್ರತಿ ವರ್ಷ ಕಾಲೇಜಿನ ಆಡಳಿತ ಮಂಡಳಿಯು ಬಡವಿದ್ಯಾರ್ಥಿಗಳ ಶಿಕ್ಷಣ ಪ್ರೋತ್ಸಾಹಿಸುವ ಉದ್ದೇಶದಿಂದ ವಿವಿಧೆಡೆ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ ನಡೆಸಿಕೊಂಡು ಬರುತ್ತಿದೆ. ಅದರಂತೆ ಈ ಬಾರಿ ಸಂಸ್ಥೆಯು ಬಾಗಲಕೋಟೆಯ ಕಾಳಿದಾಸ ಇಂಟರ್ ನ್ಯಾಷನಲ್ ಪಬ್ಲೀಕ್ ಸ್ಕೂಲ್ ಎಸ್ ಪಾಟೀಲ ಕಾಂಪೋಜಿಟ್ ಪಿಯು ಕಾಲೇಜ ಹಾಗೂ ಹೈಸ್ಕೂಲ್ ಕಾಳಿದಾಸ ಸರ್ಕಲ್ ನವನಗರದಲ್ಲಿ ಪರೀಕ್ಷೆ ಹಮ್ಮಿಕೊಂಡಿದೆ. ಇದು ಸ್ಟೇಟ್ ಬೋರ್ಡ, ಐಸಿಎಸ್‌ಇ, ಸಿ ಬಿ ಎಸ್ ಇ, ವಿದ್ಯಾರ್ಥಿಗಳಿಗಾಗಿ, 10ನೇ ತರಗತಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಪ್ರವೇಶ ಪರೀಕ್ಷೆಯಾಗಿದೆ. ಪ್ರಥಮ ಬಹುಮಾನ 75 ಸಾವಿರ, ದ್ವಿತೀಯ 50 ಸಾವಿರ, ತೃತೀಯ 30ಸಾವಿರ, 4ನೇ 15 ಸಾವಿರ, 5ನೇ 10 ಸಾವಿರ ಹಾಗೂ 6ನೇ 5 ಸಾವಿರ ಬಹುಮಾನ ಇರಲಿದೆ. ಅತಿ ಹೆಚ್ಚು ಅಂಕ ಗಳಿಸಿದ 10 ವಿದ್ಯಾರ್ಥಿಗಳಿಗೆ 1 ಸಾವಿರ ನಗದು ಬಹುಮಾನ ನೀಡಲಾಗುವುದು ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಸಂಸ್ಥೆ ಮುಖ್ಯಸ್ಥ ಅಮಿತಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿಗಾಗಿ 7483147040/8310035858/9019460665/9380095756/8971769144 ಮೋಬೈಲ್ ನಂಬರಿಗೆ ಸಂಪರ್ಕಿಸಲು ಕೋರಿದ್ದಾರೆ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 