ತಳಕಲ್ ಅನ್ನದಾನೀಶ್ವರ ಜಾತ್ರೆ ಸಂಪನ್ನ

ತಳಕಲ್ ಅನ್ನದಾನೀಶ್ವರ ಜಾತ್ರೆ ಸಂಪನ್ನ  Talakal Annadanishwar fair is a success

            ಕುಕನೂರ 24: ತಳಕಲ್ ಗ್ರಾಮದ ಮುಂಡರಗಿ ಅನ್ನದಾನೇಶ್ವರ ಶಾಖಾಮಠದಲ್ಲಿ  22 ದಿನಗಳ ನಡೆದಂತಹ ಶ್ರೀಮಠದ ಜಾತ್ರಾ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಗೊಂಡಿದೆ ಎಂದು ಗ್ರಾಮದ ಮುಖಂಡರಾದ ಶಿವಣ್ಣ ರಾಯರೆಡ್ಡಿ ಹೇಳಿದರು.   

            ಅವರು ತಾಲೂಕಿನ ತಳಕಲ್  ಗ್ರಾಮದ ಮುಂಡರಗಿ ಅನ್ನದಾನೇಶ್ವರ ಶಾಖಾಮಠದ ಜಾತ್ರಾ ಮಹೋತ್ಸವ ಸಮಾರಂಭದಲ್ಲಿ  ಮಾತನಾಡುತ್ತಾ ನಮ್ಮ ಗ್ರಾಮದ ಸರ್ವ ಸಮಾಜದ ಬಂಧುಗಳು ಈ ಜಾತ್ರೆಗೆ ತನು ಮನ ಧನ ದಿಂದ ಸೇವೆ ಸಲ್ಲಿಸಿದ್ದಾರೆ ಅನ್ನದಾನಿಶ್ವರ ಮಹಾ ಶಿವಯೋಗಿ ಈ ನಾಡಿನ ಆರಾಧ್ಯ ಗುರುಗಳಾಗಿದ್ದಾರೆ, ಮುಂಡರಗಿ ಶ್ರೀಮಠವು ಭವ್ಯ ಪರಂಪರೆಯನ್ನ ಹೊಂದಿದೆ ನಮ್ಮ ಗ್ರಾಮಕ್ಕೂ ಮುಂಡರಗಿ ಪೀಠಕ್ಕೆ ಅವಿನಾಭವ  ಸಂಬಂಧವಿದೆ ಎಂದರು.  ಹನುಮಂತಪ್ಲ ಹೈತಾಪೂತ ಮಾತನಾಡಿ ಕುಕನೂರ ಶ್ರೀಗಳ ಮಾರ್ಗದರ್ಶನದಲ್ಲಿ ಯುವಕರು ಮತ್ತು ಹಿರಿಯರು  ಸರ್ವರನ್ನ ಪ್ರೀತಿಸುವ ಜಾತ್ರೆ ಮಾಡಿದ್ದಾರೆ ಕಲ್ಬುರ್ಗಿ ಶರಣಬಸವೇಶ್ವರ ಪುರಾಣ ಲಘು ರಥೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ಮಹಾದಾಸೋಹ ಸೇರಿದಂತೆ ಹಲವಾರು  ವೈವಿಧ್ಯಮಯ ಕಾರ್ಯಕ್ರಮಗಳಿಗೆ ಈ ಜಾತ್ರೆ ಸಾಕ್ಷಿಯಾಗಿದೆ ಮತ್ತು ದಾನಿಗಳ ಮತ್ತು ದುಡಿಯುವ ವರ್ಗದ ಜನರ ಸಹಕಾರವೇ ಜಾತ್ರೆ ಯಶಸ್ವಿಯಾಗಲು ಸಾಧ್ಯ ಎಂದರು.  ಶ್ರೀಮಠದ ಪೂಜ್ಯ ಮಹಾದೇವ ಸ್ವಾಮೀಜಿ ಮಾತನಾಡಿ ತಳಕಲ್ ಗ್ರಾಮದ ಜನರಂತಹ ಭಕ್ತರು ಸಿಗಲು ಪುಣ್ಯಮಾಡಿರಬೇಕು,ಅವರಲ್ಲಿರನ ಕಾಯಕತತ್ವ ದಾನದ ಗುಣ ಇನ್ನೊಂದು ಗ್ರಾಮಕ್ಕ ಮಾದರಿಯಾಗಿದೆ, ಕೊಡುವ ಭಕ್ತರ ಜೊತೆಗೆ ದುಡಿಯುವ ಭಕ್ತರು ಅವಶ್ಯ, ಅನ್ನದಾನೀಶ್ವರ ಶಿವಯೋಗಿ ಸೇವೆ ಮಾಡುವ ಭಕ್ತರ ಹೃದಯದಲ್ಲಿ ಸದಾಕಾಲವೂ ಇದ್ದಾನೆ ಎಂದರು.      

           ಶ್ರೀ ಮಠದಲ್ಲಿ ಬೇಳಿಗ್ಗೆ ರುದ್ರಾಭಿಕ್ಷೇಕ,  ಶರಣಬಸವೇಶ್ವರ ಭಾವಚಿತ್ರದೊಂದಿಗೆ 101 ಮಹಿಳೆಯರ ಕುಂಬಾ ಮೆರವಣಿಗೆ ನಂತರ ಸಂಜೆ ಅನ್ನದಾನೀಶ್ವರರ ಲಘು ರಥೋತ್ಸವ ಜರುಗಿತು ಸಂಜೆ ಕಲ್ಬುರ್ಗಿ ಶರಣಬಸವೇಶ್ವರ ಪುರಾಣ ಮಂಗಲ ಕಾರ್ಯಕ್ರಮ ಜರುಗಿತು, ಸಂದರ್ಭದಲ್ಲಿ ಹಲವಾರು ಜನರಿಗೆ ಶ್ರೀಮಠದಿಂದ ಸನ್ಮಾನ ಮಾಡಿ ಗೌರವಿಸಲಾಯಿತು.   ಪೂಜ್ಯ ಪ್ರಭು ಸ್ವಾಮೀಜಿ ಕಂಪ್ಲಿ, ಪೂಜ್ಯ ಸಿಂದ್ದಲಿಂಗೇಶ್ವರ ಸ್ವಾಮೀಜಿ ಮಂಗಳೂರು, ನಾಗಭೂಷಣ ದೇಶಿಕರು ಕಂಪಸಾಗರ, ಗ್ರಾ ಪಂ ಸದಸ್ಯ ವಿರೇಶ, ನೀಲನಗೌಡ ಮಾಲಿಪಾಟೀಲ, ಮಂಜಣ್ಣ, ಮಲ್ಲಿಕಸಾಬ್ ತಳಬಾಳ, ಮುದಿಯಪ್ಪ ಯೊಗೆಮ್ಮನವರ, ಮಲ್ಲಪ್ಪ ಬಂಗಾರಿ, ಕುಮಾರಸ್ವಾಮಿ ತೊಳಲಿ, ಬಸವರಾಜ, ವೆಂಕರಡ್ಡಿ ಕವಲೂರು ಸೇರಿದಂತೆ ಹಲವಾರು ಸದ್ಬಕ್ತರು ಇದ್ದರು.ಪೋಟೋ ಪೈಲ್ : ಕುಕನೂರ ತಾಲೂಕಿನ ತಳಕಲ್ ಗ್ರಾಮದ ಅನ್ನದಾನೀಶ್ವರ ಶಾಖಾಮಠದಲ್ಲಿ ಕಲ್ಬುರ್ಗಿ ಶರಣಬಸವೇಶ್ವರ ಪುರಾಣ ಮಂಗಳ ಜರುಗಿತು.