ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಸಂಸ್ಕೃತಿ ಉಳಿಸಲು ಮುಂದಾಗಿ : ಯು.ಶಿವರಾಜ
Take the initiative to save culture by introducing it to the next generation: U. Shivaraj
ಕಂಪ್ಲಿ 14: ಪಟ್ಟಣದ ಬ್ರೈಟ್‌ವೇ ಶಾಲೆಯಲ್ಲಿ ಸುಗ್ಗಿ(ಸಂಕ್ರಾಂತಿ) ಹಬ್ಬ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಬುಧವಾರ ನಡೆಯಿತು.ನಂತರ ಶಾಲಾ ಸಂಸ್ಥೆಯ ಕಾರ್ಯದರ್ಶಿ ಯುಗಾದಿ ಶಿವರಾಜ ಸಂಕ್ರಾಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಲ್ಯದಿಂದಲೇ ಹಬ್ಬಗಳ ಮಾಹಿತಿ ವಿದ್ಯಾರ್ಥಿಗಳಿಗೆ ಇರಬೇಕು ಎಂಬ ಕಾರಣಕ್ಕೆ ದೇಶದ ವಿವಿಧ ಹಬ್ಬಗಳು ಹಾಗೂ ವೇಷಭೂಷಣಗಳ ಬಗ್ಗೆ ಅರಿವು ಮೂಡಿಸಲು ‘ಸುಗ್ಗಿ ಹಬ್ಬ’ವನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ಧೂರಿಯಾಗಿ ಆಚರಿಸಲಾಯಿತು. ನಮ್ಮ ನೆಲದ ಸಂಸ್ಕೃತಿ, ಹಬ್ಬಗಳು, ಸಂಪ್ರದಾಯಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಿದಾಗ ಮಾತ್ರ ಅವರು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಾಧ್ಯ. ಕೇವಲ ಪಠ್ಯ ಬೋಧನೆಗೆ ಸೀಮಿತವಾಗದೆ ಇಂತಹ ಹಬ್ಬ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಸಂಸ್ಕೃತಿಯ ಉಳಿವಿಗೆ ಮುಂದಾಗಬೇಕು ಎಂದರು.ಭತ್ತ, ರಾಗಿ, ಧಾನ್ಯಗಳ ರಾಶಿ ಪೂಜೆಯೊಡನೆ ಆರಂಭಗೊಂಡು ಶೃಂಗಾರಗೊಂಡ ಎತ್ತಿನ ಬಂಡಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಯುಗಾದಿ ಶಿವರಾಜ ನೇತೃತ್ವದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಬರುವ ಪರಿ ನೋಡುಗರ ಗಮನ ಸೆಳೆಯಿತು.
ಶಾಲೆಯ ವಿದ್ಯಾರ್ಥಿಗಳು ಗ್ರಾಮೀಣ ಸೊಗಡಿನ ಸಂಕ್ರಾಂತಿ ಹಬ್ಬದ ಸಂಸ್ಕೃತಿ ಬಿಂಬಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ದೇಶಿಯ ಉಡುಗೆ, ತೊಡುಗೆ ತೊಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದರು. ಶಾಲಾ ಆವರಣದಲ್ಲಿ ಬಿಡಿಸಿದ್ದ ವರ್ಣ ರಂಜಿತ, ಚಿತ್ತಾರ ಪೂರಿತ ರಂಗೋಲಿಗಳು ಸ್ಪರ್ಧೆಯ ತೀರ್ುಗಾರರ ಪ್ರಶಂಸೆಗೆ ಒಳಗಾದರು. ಭಾಷಣ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ನಿವೃತ್ತಿ ಮುಖ್ಯಶಿಕ್ಷಕ ನಾಗರಾಜ ದಬಾಡಿ, ವೀರಶೈವ ಸಂಘದ ಸಹ ಕಾರ್ಯದರ್ಶಿ ಪುಟ್ಟಿ ಸಚಿನ್, ಸಹ ಶಿಕ್ಷಕ ವಿದ್ಯಾಶಂಕರ್, ಹಿರಿಯ ವರದಿಗಾದ ಜಿ.ಚಂದ್ರಶೆಖರಗೌಡ, ಮುಖ್ಯಗುರು ಕೆ.ಚಂದ್ರಶೆಖರ, ಆಡಳಿತ ಮಂಡಳಿಯವರು, ಸಹ ಶಿಕ್ಷಕ ವೃಂದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 