ಜನನ-ಮರಣಗಳ ತಡ ನೋಂದಣಿಯಾಗದಂತೆ ಮುನ್ನೆಚ್ಚರಿಕೆ ವಹಿಸಿ-ಜಿಲ್ಲಾಧಿಕಾರಿ ದಾನಮ್ಮನವರ
Take precautions to prevent late registration of births and deaths - District Magistrate Danammavara
ಲೋಕದರ್ಶನ ವರದಿ
ಹಾವೇರಿ 16 : ಇ-ತಂತ್ರಾಂಶದಲ್ಲಿ ಜನನ-ಮರಣಗಳ ತಡ ನೋಂದಣಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ತಡ ನೋಂದಣಿಗೆ ಸಮಸ್ಯೆಗಳನ್ನು ತಿಳಿದುಕೊಳ್ಳಬೇಕು ಹಾಗೂ ಜನನ-ಮರಣಗಳ ನೋಂದಣಿ ಕಾರ್ಯವನ್ನು ನಿಗದಿತ ಕಾಲಮಿತಿಯೊಳಗೆ ಮಾಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜನನ-ಮರಣ ನೋಂದಣಿ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನನ-ಮರಣ ನೋಂದಣಿ ಪ್ರಕ್ರಿಯೆಯನ್ನು ನಿಯಮಿತವಾಗಿ ಕೈಗೊಳ್ಳಬೇಕು, ನೋಂದಣಾಧಿಕಾರಿಗಳು ಮಾಹಿತಿ ಫಲಕ ಅಳವಡಿಸಬೇಕು ಹಾಗೂ ಜನನ-ಮರಣ ನೋಂದಣಿಯಲ್ಲಿ ಯಾವುದೇ ನ್ಯೂನ್ಯತೆ ಆಗದಂತೆ ಅಗತ್ಯ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಪರೀಶೀಲನೆಮಾಡಿ: ಡಾಟಾ ಎಂಟ್ರಿ ಮಾಡಿದ ನಂತರ ನೋಂದಣಿದಾರರು, ಉಪ ನೊಂದಣಿದಾರರು ಪರೀಶೀಲನೆ ಮಾಡಿ ಅನುಮೋದನೆ ನೀಡಬೇಕು. ಇದರಿಂದ ಜನನ-ಮರಣಗಳ ನೋಂದಣಿಯಲ್ಲಿ ಆಗುವ ತಪ್ಪುಗಳನ್ನು ತಡೆಯಬಹುದು ಎಂದರು. ವಹಿಯನ್ನು ಸರಿಯಾಗಿ ನಿರ್ವಹಿಸಿ: ತಾಲೂಕಾ ಆಸ್ಪತ್ರೆಗಳಲ್ಲಿ ಮತ್ತು ಗ್ರಾಮ ಪಂಷಚಾಯತಿಗಳಲ್ಲಿ ಜನನ-ಮರಣ ಪ್ರಮಾಣಪತ್ರಗಳ ವಿತರಣಾ ವಹಿಯನ್ನು ಸರಿಯಾಗಿ ನಿರ್ವಹಿಸಬೇಕು. ಪ್ರತಿಗಳನ್ನು ವಿತರಿಸಿದ ಶುಲ್ಕವನ್ನು ಖಜಾನೆಗೆ ಭರ್ತಿಮಾಡಬೇಕು ಎಂದು ಸೂಚಿಸಿದರು. ತಾಲೂಕು ಮಟ್ಟದಲ್ಲಿ ಸಮನ್ವಯ ಸಮಿತಿಯನ್ನು ತಾಲೂಕು ತಹಶೀಲ್ದಾರ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ತಪ್ಪದೇ ನಡೆಸಬೇಕು. ಜನನ-ಮರಣ ನೋಂದಣಾಧಿಕಾರಿಗಳು ಹಾಗೂ ಉಪ ನೋಂದಣಾಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ಘಟಿಸುವ ಜನನ-ಮರಣಗಳ ನೋಂದಣಿಗೆ ಕ್ರಮವಹಿಸಬೇಕು ಎಂದು ಸೂಚಿಸಿದರು.
793 ನೋಂದಣಿ ಘಟಕ: ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಆರ್.ಎಂ.ಭುಜಂಗ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಪಂಚಾಯತಿ ಕಾರ್ಯದರ್ಶಿಗಳು ಉಪ ನೋಂದಣಾಧಿಕಾರಿ, ಗ್ರಾಮ ಆಡಳಿತಾಧಿಕಾರಿಗಳು ನೋಂದಣಾಧಿಕಾರಿಗಳು, ನಗರ ಪ್ರದೇಶದಲ್ಲಿ ಆರೋಗ್ಯ ನೀರೀಕ್ಷಕರು ಹಾಗೂ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಉಪ ನೊಂದಣಾಧಿಕಾರಿಗಳಾಗಿದ್ದಾರೆ. ಜಿಲ್ಲೆಯಲ್ಲಿ ಗ್ರಾಮೀಣ ಹಾಗೂ ನಗರ ಸೇರಿ 793 ಜನನ-ಮರಣ ನೋಂದಣಿ ಘಟಕಗಳಿವೆ ಎಂದು ಮಾಹಿತಿ ನೀಡಿದರು. ಜನನ-ಮರಣ ನೋಂದಣಿ:ಇ-ಜನ್ಮ ತಂತ್ರಾಂಶದಲ್ಲಿ ಜಿಲ್ಲೆಯಲ್ಲಿ 2025ನೇ ಸಾಲಿನಲ್ಲಿ 19,691 ಹಾಗೂ 2026ರ ಮಾರ್ಚ್ ಮಾಹೆವರೆಗೆ 5,349 ಜನನ ಮಾಹಿತಿ ನೋಂದಣಿಮಾಡಲಾಗಿದೆ. 2025ನೇ ಸಾಲಿನಲ್ಲಿ 12,935 ಹಾಗೂ 2026ರ ಮಾರ್ಚ್ ಮಾಹೆವರೆಗೆ 3022 ಮರಣದ ಮಾಹಿತಿ ನೋಂದಣಿಯಾಗಿದೆ ಎಂದರು.
ಸೇವಾಸಿಂಧು ತಂತ್ರಾಂಶದಲ್ಲಿ ಅರ್ಜಿ: ಸೇವಾ ಸಿಂಧು ತಂತ್ರಾಂಶದಲ್ಲಿ ಸಾರ್ವಜನಿಕರು ಜನನ-ಮರಣ ನೋಂದಣಿಗೆ ಅರ್ಜಿ ಸಲ್ಲಿಸಲು ದಿ.05-07-2021 ರಿಂದ ಅವಕಾಶ ಕಲ್ಪಿಸಿದ್ದು, ಸಾರ್ವಜನಿಕರು ಆನ್‌ಲೈನ್ ಮೂಲಕ ಅಥವಾ ಸೇವಾ ಸಿಂಧು ಕೇಂದ್ರಕ್ಕೆ ಭೇಟಿ ನೀಡಿ ಜನನ-ಮರಣ ನೋಂದಣಿಗೆ ಅರ್ಜಿ ಸಲ್ಲಿಸಬಹುದಾಗಿದೆ. ನೋಂದಣಾಧಿಕಾರಿಗಳು ಅನುಮೋದನೆ ಮಾಡಿದ ನಂತರ ಪ್ರಮಾಣ ಪತ್ರಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಜನನ-ಮರಣ ಪ್ರಮಾಣಪತ್ರ, ತಡ ನೋಂದಣಿ ಶುಲ್ಕ, ಶೋಧನ ಶುಲ್ಕ ಸೇರಿದಂತೆ 2025ನೇ ಸಾಲಿನಲ್ಲಿ ರೂ.11,97,478 ಹಾಗೂ 2026ರ ಜನೆವರಿಯಿಂದ ಮಾರ್ಚ್‌ವರೆಗೆ ರೂ.5,45,505 ಮೊತ್ತ ಜಮೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆ ಡಿ.ಎಸ್‌ಪಿ ಶಮಿವುಲ್ಲಾ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ಸಹಾಯಕ ನಿರ್ದೇಶಕ ಜೆ.ಆರ್.ಪಾಟೀಲ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 