ತೈಪೆ, ಫೆ 8 : ಚೀನಾದಲ್ಲಿ ವ್ಯಾಪಕವಾಗಿ ಕರೋನಾ ಸೋಂಕು ಹರಡುತ್ತಿದ್ದು ಮರಣ ಮೃದಂಗ ಬಾರಿಸಿದೆ.
ಸೋಂಕು ಈಗ ಅಕ್ಕಪಕ್ಕದ, ದೇಶಗಳಿಗೂ ಹಬ್ಬಿದ್ದು ಚೀನಾದ ನೆರೆಯ ರಾಷ್ಟ್ರವಾಗಿರುವ ಟೈವಾನ್ ಗೂ ಹಬ್ಬಿದೆ . ಅಲ್ಲಿ ಈಗಾಗಲೇ 17 ಸೋಂಕಿನ ಖಚಿತ ಪ್ರಕರಣಗಳು ವರದಿಯಾಗಿದೆ ಎಂದು ದ್ವೀಪದ ಸಾಂಕ್ರಾಮಿಕ ಮೇಲ್ವಿಚಾರಣಾ ಸಂಸ್ಥೆ ಶನಿವಾರ ತಿಳಿಸಿದೆ.
ರೋಗಿಯು ತನ್ನ ಹೆತ್ತವರೊಂದಿಗೆ ಜ.22 ರಂದು ಹಾಂಗ್ ಕಾಂಗ್ ಮೂಲಕ ತೈವಾನ್‌ಗೆ ಮರಳಿದ್ದ. ಇಟಲಿಯಲ್ಲಿ ರೋಗಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು ಎಂದು ಸಂಸ್ಥೆ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದೆ.
ರೋಗಿಯ ಪೋಷಕರು, ಉತ್ತರ ತೈವಾನ್‌ನಲ್ಲಿ ವಾಸಿಸುತ್ತಿದ್ದು ಅವರಿಗೂ ಗುರುವಾರ ಸೋಂಕು ಆವರಿಸಿರುವುದು ವೈದ್ಯಕೀಯ ವರದಿಗಳಿಂದ ದೃಢಪಟ್ಟಿದೆ.
ಶುಕ್ರವಾರದ ವೇಳೆಗೆ ತೈವಾನ್‌ನಲ್ಲಿ 124 ಶಂಕಿತ ಪ್ರಕರಣಗಳು ವರದಿಯಾಗಿವೆ. ಚೇತರಿಸಿಕೊಂಡ ಹಲವು ರೋಗಿಗಳನ್ನು ಆಸ್ಪತ್ರೆಯಿಂದ ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಸಾಂಕ್ರಾಮಿಕ ಬೀತಿಯ ಹಿನ್ನೆಲೆಯಲ್ಲಿ, ತೈವಾನ್ ಜಲಸಂಧಿಯಾದ್ಯಂತ ನೇರ ಪ್ರಯಾಣಿಕರ ಹಡಗು ಸೇವೆಗಳನ್ನು ಫೆಬ್ರವರಿ 10 ರಿಂದ ಸ್ಥಗಿತಗೊಳಿಸಲಾಗುವುದು ಎಂದು ದ್ವೀಪದ ಮುಖ್ಯ ಭೂ ವ್ಯವಹಾರ ಇಲಾಖೆ ಶನಿವಾರ ಪ್ರಕಟಿಸಿದೆ.