ರೈತರ ಜಮೀನುಗಳ ದಾರಿ ಸಮಸ್ಯೆ ಪರಿಹರಿಸಿದ ತಹಸಿಲ್ದಾರ್ ಸಿಂದಗಿ
Tahsildar Sindagi solved the problem of access to farmers' lands
ದೇವರಹಿಪ್ಪರಗಿ 26: ತಾಲೂಕಿನ ಯಾಳವಾರ-ಬುದಿಹಾಳ ಡೋಣಿ ಗ್ರಾಮಗಳ ರೈತರ ಜಮೀನುಗಳಿಗೆ ಹೋಗಲು ಬಲಾಡ್ಯರು ರಸ್ತೆ ಬಂದ್ ಮಾಡಿದ ಕಾರಣ ದೇವರಹಿಪ್ಪರಗಿ ತಾಳಿಕೋಟಿ ಮುಖ್ಯ ರಸ್ತೆ ಯಾಳವಾರ ಕ್ರಾಸ್ ಹತ್ತಿರ ರಸ್ತೆ ಬಂದ್ ಮಾಡಿ ರೈತರಿಂದ ಪ್ರತಿಭಟನೆ ಮಾಡಲಾಗಿತ್ತು.
ಸ್ಥಳಕ್ಕೆ ತಹಶೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ, ಕಾನೂನಿನ ತಿಳುವಳಿಕೆ ಹೇಳಿದ ಕಾರಣ ರೈತರ ಜಮೀನುಗಳಿಗೆ ಹೋಗುವ ದಾರಿ ಸಮಸ್ಯೆ ಪರಿಹರಿಸಿದ ತಹಸಿಲ್ದಾರ್ ಪ್ರಕಾಶ ಸಿಂದಗಿ ಬುಧುವಾರದಂದು ಯಾಳವಾರ ಬುದಿಹಾಳ ಡೋಣಿ ಗ್ರಾಮದ ರೈತರು ತಮ್ಮ ಜಮೀನುಗಳಿಗೆ ಹೋಗಿ ಕೃಷಿ ಚಟುವಟಿಕೆ ಕೈಗೊಳ್ಳಲು ಕೆಲ ರೈತರಿಂದ ದಾರಿ ಬಂದ್ ಮಾಡಲಾಗಿತ್ತು. ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಮುಂಗಾರು ಕೃಷಿ ಚಟುವಟಿಕೆಗಳು ಪ್ರಾರಂಭವಾಗಿವೆ ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ರಸ್ತೆ ಬಂದು ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬುಧವಾರದಂದು ಸ್ಥಳಕ್ಕೆ ತಹಶೀಲ್ದಾರ್ ಪ್ರಕಾಶ ಸಿಂದಗಿ, ರೈತ ಮುಖಂಡರು ಹಾಗೂ ಬಾಗೇವಾಡಿ ಸಿಪಿಐ ಗುರುಶಾಂತ ದಾಶ್ಯಾಳ ಭೇಟಿ ನೀಡಿ ರೈತರಿಗೆ ಗ್ರಾಮಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ, ಕಾನೂನಿನ ತಿಳುವಳಿಕೆ ಹೇಳಿದ ಕಾರಣ ರೈತರ ಜಮೀನುಗಳಿಗೆ ಹೋಗುವ ದಾರಿ ಸಮಸ್ಯೆಯನ್ನು ಪರಿಹರಿಸಿದ ಕಾರಣ ನಿಟ್ಟುಸಿರು ಬಿಟ್ಟು ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶಂಕರಗೌಡ ಹಿರೇಗೌಡ, ರೈತ ಮುಖಂಡರುಗಳಾದ ವಿಜಯಕುಮಾರ ನಾಡಗೌಡ, ಸಂಗನಗೌಡ ತೆಗ್ಗಿನಮನಿ, ಸಂತೋಷ ಮುಸುಗುರಿ, ರಾಮನಗೌಡ ಉಮ್ಮಣ್ಣವರ, ಮಡಿವಾಳಪ್ಪ ಉಮ್ಮಣ್ಣವರ, ಬಸಯ್ಯ ಚರಂತಿಮಠ, ಬಸಯ್ಯ ಹಿರೇಮಠ, ಸೋಮಯ್ಯ ಹಿರೇಮಠ, ದೇವೇಂದ್ರ ಖಾನಾಪುರ, ಬಸನಗೌಡ ಬಿರಾದಾರ, ನಿಂಗನಗೌಡ ಖಾನಾಪುರ, ಭೀಮಣ್ಣ ಉಪ್ಪಾರ, ಬಸನಗೌಡ ದೊಡ್ಡಮನಿ, ರಮೇಶ್ ಗುರುಮಠ, ಬಸನಗೌಡ ಬಿರಾದಾರ ಸೇರಿದಂತೆ ಯಾಳವಾರ ಬುದಿಹಾಳ ಡೋಣಿ ಗ್ರಾಮದ ರೈತರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 