ಡೋಣಿ ನದಿ ನೀರಿನ ಮಟ್ಟ ಪರೀಶೀಲಿಸಿದ ತಹಶೀಲ್ದಾರ್ ಡಾ. ಹೂಗಾರ
Tahsildar Dr. Hoogara checked the water level of the Doni River
ಡೋಣಿ ನದಿ ನೀರಿನ ಮಟ್ಟ ಪರೀಶೀಲಿಸಿದ ತಹಶೀಲ್ದಾರ್ ಡಾ. ಹೂಗಾರ
ತಾಳಿಕೋಟಿ 09: ಡೋಣಿ ನದಿಗೆ ಕಳೆದ ಎರಡು ದಿನಗಳಿಂದ ಅಪಾರ ಪ್ರಮಾಣದ ನೀರು ಹರಿದು ಪ್ರವಾಹದ ಪರಿಸ್ಥಿತಿ ಉದ್ಭವಿಸಿ ಕೆಳ ಸೇತುವೆ ಜಲಾವೃತಗೊಂಡು ರಸ್ತೆ ಸಂಚಾರ ಸ್ಥಗಿತವಾಗಿದ್ದ ಹಿನ್ನೆಲೆಯಲ್ಲಿ ತಹಸಿಲ್ದಾರ ಡಾ.ವಿನಯಾ ಹೂಗಾರ ಅವರು ಸ್ಥಳಕ್ಕೆ ಭೇಟಿ ನೀಡಿ ನೀರಿನ ಮಟ್ಟ ಪರೀಶೀಲನೆ ನಡೆಸಿದರು.
ಶುಕ್ರವಾರ ಪಟ್ಟಣದ ಹತ್ತಿರದಲ್ಲಿ ಹರಿಯುವ ಡೋಣಿ ನದಿಯ ತಟಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು ನೀರಿನ ಮಟ್ಟವನ್ನು ಪರೀಶೀಲಿಸಿದರು. ಇದೇ ರೀತಿಯಾಗಿ ಅವರು ನೀರಿನಿಂದ ಭಾದಿತ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ವರದಿಯನ್ನು ಅಧಿಕಾರಿ ಗಳಿಂದ ಪಡೆದುಕೊಂಡರು. ಸದರಿ ವರದಿಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಕಳಿಸಿದ್ದು ಅವರ ನಿರ್ದೇಶನದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಸಮಯದಲ್ಲಿ ಗ್ರೇಡ್2 ತಹಸಿಲ್ದಾರ್ ಪ್ರದೀಪ ಕೆ.ಎಸ್. ಜಂಟಿ ನಿರ್ದೇಶಕ ತಾಳಿಕೋಟಿ ವಿಪತ್ತು ನಿರ್ವಹಣಾ ನೋಡಲ್ ಅಧಿಕಾರಿ ಶಿವನಗೌಡ ಪಾಟೀಲ, ಸಹಾಯಕ ಕೃಷಿ ಅಧಿಕಾರಿ ಭಾವಿಕಟ್ಟಿ, ಕೃಷಿ ಅಧಿಕಾರಿ ಮಹೇಶ ಜೋಶಿ, ಕಂದಾಯ ನೀರೀಕ್ಷಕ ವಿ.ಜಿ.ಸಿಂದಗಿ, ಗ್ರಾಮ ಆಡಳಿತಾಧಿಕಾರಿಗಳಾದ ಸದಾಶಿವ ಮಾದರ, ಎಸ್.ಎಸ್.ಅಂಗಡಿ, ಪ್ರಶಾಂತ ಶಾಂತಗೇರಿ, ಗ್ರಾಮದ ರೈತ ಶಬ್ಬೀರ ಮುಲ್ಲಾ ಇದ್ದರು.
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ 