ತಬಲಾ ವಾದ್ಯ ತಯಾರಕ ಸುರೇಶ ಕಾರ್ಯ ಶ್ಲಾಘನೀಯ
Tabla instrument maker Suresh's work is commendable
ಸತ್ತ ಪ್ರಾಣಿಯ ಚರ್ಮವನ್ನು ಹದಗೊಳಿಸಿ ಹಗಲಿರುಳು ಶ್ರಮಿಸಿ ತಬಲಾ ಕಲಾವಿದರಿಗೆ ಅವಶ್ಯಕತೆಗೆ ತಕ್ಕಂತೆ ವಾದ್ಯ ತಯಾರಿಸುವಲ್ಲಿ ಸುರೇಶ ಬಗರಿಕಾರ ಅವರ ಶ್ರಮ ಕಾರ್ಯ ಅವರ್ಣನೀಯ ಮತ್ತು ಶ್ಲಾಘನೀಯ ಎಂದು ತಬಲಾ ವಾದಕ ಡಾ. ನಾಗಲಿಂಗ ಮುರಗಿ ಹೇಳಿದರು. ಅವರು ಮುರುಗೇಶ ಅಂಗಡಿಯವರ ನಿವಾಸದಲ್ಲಿ ಆಯೋಜಿಸಲಾಗಿದ್ದ ನಾದ ಹಿಂದೂಸ್ತಾನಿ ಸಂಗೀತ ಕಲಾವಿದರ ವೇದಿಕೆಯ 16ನೇ ಭೈಠಕ ಸಂಗೀತ ಕಾರ್ಯಕ್ರಮದಲ್ಲಿ ಸುರೇಶ ಬಗರಿಕಾರ ಅವರನ್ನು ಸನ್ಮಾನಿಸಿ ಮಾತನಾಡುತ್ತ ತಬಲಾ ತಯಾರಿಕೆಯಲ್ಲಿ ಶ್ರಮವಹಿಸಿದವರನ್ನು ಕೇವಲ ದುಡ್ಡಿನಿಂದ ಅಳೆಯದೇ ಅವರ ಶ್ರಮ ಕಾರ್ಯ ಗುರುತಿಸಿ ಗೌರವಿಸಿ ಸನ್ಮಾನಿಸಿದಾಗ ಅವರ ಮುಖದಲ್ಲಿ ಮೂಡುವ ಮಂದಹಾಸ ಅವರ ಆತ್ಮ ಸಂತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಹೀಗಾಗಿ ಮುಂಬರುವ ದಿನಗಳಲ್ಲಿ ನಾದ ಹಿಂದೂಸ್ತಾನಿ ಸಂಗೀತ ಕಲಾವಿದರ ವೇದಿಕೆಯ ಮೂಲಕ ಸೇವೆಯಲ್ಲಿ ನಿರತರಾದವರನ್ನು ಗುರುತಿಸಿ ಗೌರವಿಸಿ ಅವರ ಮನೋಬಲವನ್ನು ಹೆಚ್ಚಿಸುವ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದರು. ಸಚಿನ ಪೂಜಾರಿ ಮತ್ತು ಮಂಜುನಾಥ ದೊಡ್ಡಮನಿ ಅವರು ಪ್ರಸ್ತುತಪಡಿಸಿದ ಗಾಯನ ನೆರೆದಿದ್ದವರ ಮನದಣಿಸಿತು. ಇವರೊಂದಿಗೆ ಶಿವಕುಮಾರ ಅರ್ಕಸಾಲಿ ಡಾ. ನಾಗಲಿಂಗ ಮುರಗಿ ತಬಲಾ ಸಾಥ್ ಮತ್ತು ಆದರ್ಶ ಬಗಾಡೆ ಹಾರ್ಮೋನಿಯಂ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಶ್ರೀಕಾಂತ ಕೋನಾಪುರ, ವಿಶ್ವೇಶ್ವರಯ್ಯ ಚೌಕಿಮಠ, ಮಲ್ಲಿಕಾರ್ಜುನ ಚೌಕಿಮಠ, ಶ್ರೀಮತಿ ಅನ್ನಪೂರ್ಣ ಛಬ್ಬಿ, ನಿಜಗುಣಿ ಮಾಂಗಿ, ಪದಕಿಯವರು ಉಪಸ್ಥಿತರಿದ್ದರು. ಮುರುಗೇಶ ಅಂಗಡಿಯವರು ಸರ್ವರನ್ನು ಸ್ವಾಗತಿಸಿದರು,
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 