ತ್ರಿಬಿ ಲೇಖನ ಸ್ಪರ್ಧೆ-2025 ಮಾಹಿತಿ

TRIBI Essay Competition-2025 Information

ತ್ರಿಬಿ ಲೇಖನ ಸ್ಪರ್ಧೆ-2025 ಮಾಹಿತಿ  

ಧಾರವಾಡ  1 :  ಗಣಕರಂಗ  ಸಂಸ್ಥೆಯು  ತುಮಕೂರಿನ ವಚನ  ಮಂದಾರ  ವೇದಿಕೆಯ ಸಹಕಾರದೊಂದಿಗೆ  ಬುದ ್ಧ-ಬಸವ -ಬಾಬಾಸಾಹೇಬ (ತ್ರಿಬಿ) ಜಯಂತಿಗಳ  ಪ್ರಯುಕ್ತ  ತ್ರಿಬಿ  ಲೇಖನ  ಸ್ಪರ್ಧೆಯನ್ನು  ಕನ್ನಡ  ಭಾಷೆಯಲ್ಲಿ  ಆಯೋಜಿಸಿದೆ.  ಬುದ್ಧ  ಪೂರ್ಣಿಮೆಗಾಗಿ  “ಬುದ್ಧ ಮತ್ತು  ವಿಶ್ವಶಾಂತಿ”  ಮತ್ತು  ಬಸವ ಜಯಂತಿಗಾಗಿ “ಬಸವಕಾಲೀನ   ಶರಣರ   ವಚನಗಳಲ್ಲಿ  ಕೃಷಿ  ಸಂಸ್ಕೃತಿ”   ಹಾಗೂ  ಬಾಬಾಸಾಹೇಬ   ಡಾ.ಬಿ.ಆರ್‌.ಅಂಬೇಡ್ಕರ್  ಜಯಂತಿಗಾಗಿ “ಬಾಬಾಸಾಹೇಬರು  ಮತ್ತು  ಆಧುನಿಕ  ಭಾರತ”  ವಿಷಯದ  ಶೀರ್ಷಿಕೆಗಳಲ್ಲಿ  ಮೂರು  ಪ್ರತ್ಯೇಕ ಲೇಖನ  ಕಳಿಸಲು  ಮಾರ್ಚ-2, 2025 (ರವಿವಾರ)  ಕೊನೆಯ  ದಿನಾಂಕವಾಗಿದೆ. ವಯಸ್ಸಿನ ನಿರ್ಭಂಧವಿಲ್ಲ.  ಮೂರು  ಶೀರ್ಷಿಕೆಯ  ಲೇಖನ  ಸ್ಪರ್ಧೆಗೆ  ಪ್ರತ್ಯೇಕವಾದ  ನಗದು ಬಹುಮಾನಗಳಿವೆ.  ಪ್ರಥಮ  ಬಹುಮಾನ  ರೂ.ಐದು  ಸಾವಿರ,  ದ್ವಿತೀಯ ಬಹುಮಾನ ರೂ.ಮೂರು  ಸಾವಿರ  ಮತ್ತು  ತೃತೀಯ  ಬಹುಮಾನ  ರೂ.ಎರಡು  ಸಾವಿರಗಳ  ನಗದು ಬಹುಮಾನದೊಂದಿಗೆ  ಐವರಿಗೆ  ಮೆಚ್ಚುಗೆ  ಬಹುಮಾನವಾಗಿ ಪುಸ್ತಕ ನೀಡಿ ಗೌರವಿಸಲಾಗುವುದು. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ಸ್ಪರ್ಧೆಯ ಸಂಪೂರ್ಣ ಮಾಹಿತಿಗಾಗಿ ಸಿದ್ಧರಾಮ ಹಿಪ್ಪರಗಿ (9845109480), ಡಾ.ವಿಜಯಕುಮಾರ ಕಮ್ಮಾರ (9741357132) ಮತ್ತು ಗಣಪತಿ ಚಲವಾದಿ (9740691429) ಇವರನ್ನು ಸಂಪರ್ಕಿಸಲು ಕೋರಲಾಗಿದೆ.