ಕೆ ಸಿ ವ್ಯಾಲಿಯ ನೀರಿಗೆ ಕಳ್ಳರ ಕಣ್ಣು : ಕೋಲಾರದಲ್ಲಿ ಕಾವಲು ಕಾಯೋರು ಯಾರು?
ಬೆಂಗಳೂರು/ಕೋಲಾರ, ಮಾ 07, ಸರ್ಕಾರಗಳು ಸದುದ್ದೇಶದಿಂದ ಯಾವುದೇ ಕೆಲಸ ಕೈಗೊಂಡರೂ ಅದಕ್ಕೆ ಕತ್ತರಿ ಹಾಕೋರು, ಹಾಳು ಮಾಡೋರು ಇದ್ದೇ ಇರ್ತಾರೆ. ಇದೀಗ ಕೋಲಾರದಲ್ಲೂ ಇಂತಹುದೇ ಕೃತ್ಯ ನಡೆಯುತ್ತಿದೆ. ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಕೆರೆಗಳಿಗೆ ಹರಿಸಲಾಗುತ್ತಿರುವ ಕೆ ಸಿ ವ್ಯಾಲಿಯ ಸಂಸ್ಕರಿಸಿದ ನೀರಿಗೆ ಕಳ್ಳರ ಕಾಟ ಹೆಚ್ಚಾಗಿದ್ದು, ಅನಧಿಕೃತ ಸಂಪರ್ಕ ಅಳವಡಿಸಿ ನೀರನ್ನು ಕದಿಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸತತ ಬರಗಾಲದಿಂದಾಗಿ ಜಿಲ್ಲೆಯ ಕೆರೆಗಳು ಸಂಪೂರ್ಣವಾಗಿ ಬತ್ತಿಹೋಗಿವೆ 1500 ಅಡಿ ಕೊರೆದರೂ ನೀರು ದೊರೆ ಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಇಂದು ನಿನ್ನೆಯ ಸಂಕಷ್ಟ್ರವಲ್ಲ, ಹತ್ತು, ಹದಿನೈದು ವರ್ಷಗಳಿಂದಲೂ ಇದೇ ಪರಿಸ್ಥಿತಿಯಿರುವ ಕಾರಣ ಅಂತರ್ಜಲ ವೃದ್ಧಿಗೊಳಿಸಲು ಸಂಸ್ಕರಿಸಿದ ನೀರು ಕೆರೆಗಳಿಗೆ ಬಿಡುವ ಯೋಜನೆ ರೂಪಿಸಲಾಗಿದೆ.
ಅದರಂತೆ ಬೆಂಗಳೂರಿನ ಕೆ.ಸಿ.ವ್ಯಾಲಿ ಕಣಿವೆಯಿಂದ ಎರಡು ಹಂತಗಳಲ್ಲಿ ಸಂಸ್ಕರಿಸಿದ ನೀರು ಈಗಾಗಲೇ 60ಕ್ಕೂ ಹೆಚ್ಚಿನ ಕೆರೆ, ಕಾಲುವೆಗಳಿಗೆ ಹರಿದಿದ್ದು, ಕೆ.ಸಿ.ವ್ಯಾಲಿ ನೀರು ಹರಿಯುತ್ತಿರುವ ಭಾಗಗಳಲ್ಲಿ ಅಂತರ್ಜಲ ವೃದ್ಧಿಯಾಗಿರುವುದು ಸಾಬೀತಾಗಿದೆ. ಇವೆಲ್ಲದರ ನಡುವೆ ಕೆ.ಸಿ.ವ್ಯಾಲಿ ನೀರು ಹರಿಯುತ್ತಿರುವ ಕಾಲುವೆಗಳಿಂದ ನೀರು ಕದಿಯುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅನಧಿಕೃತ ಸಂಪರ್ಕಗಳನ್ನು ತಡೆಯುವ ನಿಟ್ಟಿ ನಲ್ಲಿಜಿಲ್ಲಾಡಳಿತ ಮುಂದಾಗಿಲ್ಲ. ಪರಿಣಾಮ ಅನಧಿಕೃತ ಸಂಪರ್ಕದ ಮೂಲಕ ನೀರನ್ನು ಕದಿಯುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾದರೆ ಸರ್ಕಾರದ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡೀತೇ? ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಲು ಸಾಧ್ಯವಾದೀತೆ ಎಂಬ ಪ್ರಶ್ನೆ ಮೂಡಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಣ್ಣುಮುಚ್ಚಿ ಕೂರದೆ, ಕೆ ಸಿ ವ್ಯಾಲಿಯ ನೀರನ್ನು ಕದಿಯುವವರಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 