ಟಿ20 ವಿಶ್ವಕಪ್: ಭಾರತ ದಾಖಲೆ ಮುರಿದ ಆಫ್ರಿಕಾ ವನಿತೆಯರು
ಕ್ಯಾನ್‌ಬೆರಾ, ಫೆ 28 : ಇಲ್ಲಿನ ಮನುಕಾ ಓವಲ್ ಅಂಗಳದಲ್ಲಿ ಲಿಜೆಲ್ಲಿ ಲೀ(101 ರನ್) ಅವರ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 195 ರನ್ ದಾಖಲೆಯ ಮೊತ್ತ ಗಳಿಸಿದೆ. ಚುಟುಕು ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ ಅತಿ ಹೆಚ್ಚು ಮೊತ್ತ ಇದಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 195 ರನ್ ದಾಖಲಿಸಿತು. ಆ ಮೂಲಕ ಭಾರತದ ದಾಖಲೆಯನ್ನು ಆಫ್ರಿಕಾ ವನಿತೆಯರು ಮುರಿದರು. ಭಾರತ 2018ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 20 ಓವರ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು 194 ರನ್ ಗಳಿಸಿತ್ತು.
ಮೊದಲು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಮೂರನೇ ಓವರ್ ನಲ್ಲಿ ಡೇನ್ ವಾನ್ ನೀಕೆರ್ಕ್ (2) ಅವರನ್ನು ಕಳೆದುಕೊಂಡಿತು. ನಂತರ, ಜತೆಯಾದ ಲೀ ಹಾಗೂ ಸುನ್ ಲುಸ್ ಜೋಡಿ 131 ರನ್ ಜತೆಯಾಟವಾಡಿತು. ಲೀ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ಶತಕ ಸಿಡಸಿದರು. ನಂತರ, 15ನೇ ಓವರ್ ನಲ್ಲಿ ಲೀ ಅವರ ವಿಕೆಟ್ ಅನ್ನು ಥಾಯ್ಲೆಂಡ್ ಪಡೆಯಿತು. ಅಂತಿಮವಾಗಿ ಆಫ್ರಿಕಾ ತಂಡ ಥಾಯ್ಲೆಂಡ್ ಗೆ 196 ರ್ ಕಠಿಣ ಗುರಿ ನೀಡಿದೆ. ಲೀ ಬಿಟ್ಟರೆ ಅದ್ಭುತ ಬ್ಯಾಟಿಂಗ್ ಮಾಡಿದ ಲುಸ್ ಅಜೇಯ 61 ರನ್ ಗಳಿಸಿದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 