ನ್ಯಾಯಾಧೀಕರಣದ ತೀರ್ಪಿನ ಕುರಿತು ವಿಚಾರ ಸಂಕಿರಣದ ಕರಪತ್ರ ಬಿಡುಗಡೆ
Symposium pamphlet released on tribunal verdict
ಲೋಕದರ್ಶನ ವರದಿ
ವಿಜಯಪುರ 27 : ನ್ಯಾಽಽ ಬ್ರಿಜೇಶ್‌ಕುಮಾರ ನೇತೃತ್ವದ 2ನೇ ನ್ಯಾಯಾಧಿಕರಣದ ತೀರ್ಿನಂತೆ ಆಲಮಟ್ಟಿ ಲಾಲ್‌ಬಹದ್ಧೂರ ಶಾಸ್ತ್ರೀ ಜಲಾಶಯದ ನೀರಿನಮಟ್ಟವನ್ನು 519.60ರಿಂದ 524.260ಕ್ಕೆ ನೀರು ನಿಲ್ಲಿಸಲು ಗೇಟ್ ಅಳವಡಿಸುವಂತೆ ನ್ಯಾಯಾಧೀಕರಣ ತಿರ್ು ನೀಡಿದ್ದರೂ ಕೂಡಾ ಇಲ್ಲಿಯವರೆಗೂ ಸರ್ಕಾರಗಳು ಗೇಟ್ ಅಳವಡಿಸಲು ಆಗುತ್ತಿಲ್ಲ. 13ನೇ ವರ್ಷಕ್ಕೆ ಪಾದಾರೆ್ನ ಮಾಡಿದ್ದರು.
ಕೇಂದ್ರ ಸರ್ಕಾರ ಇನ್ನು ಅಧಿಸೂಚನೆ ಹೊರಡಿಸಿಲ್ಲ. ವಿಜಯಪುರ ಜಿಲ್ಲೆ ಹೇಳಿಕೊಳ್ಳಲು ಪಂಚನದಿಗಳು ಬೀಡಾಗಿದೆ ಆದರೆ ವಾಸ್ತವವಾಗಿ ಇನ್ನು ಕೆಲವು ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲ. ಕೃಷಿಗೆ ನೀರು ಬಿಡುವುದಂತು ದೂರದ ಮಾತು ಆದ್ದರಿಂದ ನಮ್ಮ ನೀರಿನ ಪಾಲನ್ನು ನಮಗೆ ಕೊಡಲು ಸರ್ಕಾರಕ್ಕೆ ಒತ್ತಾಯಿಸಲು ಹಾಗೂ ನೀರಿನ ಹಂಚಿಕೆಯಲ್ಲಿ ಅವಳಿ ಜಿಲ್ಲೆಯ ರೈತರಿಗೆ ಯಾವ ರೀತಿ ವಂಚನೆ ಮಾಡಿದ್ದಾರೆ ಎಂಬುದನ್ನು ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ದಿನಾಂಕ 08-06-2026 ರಂದು ವಿಜಯಪುರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಬೆಳ್ಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಕರಪತ್ರವನ್ನು ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಅಖಂಡ ಕರ್ನಾಟಕ ರೈತ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಜಂಟಿಯಾಗಿ ಬಿಡುಗಡೆಗೊಳಿಸಲಾಯಿತು. ದಿನಾಂಕ 29 ರಿಂದ ಜಿಲ್ಲೆಯಾದ್ಯಂತ ಹಳ್ಳಿ ಹಳ್ಳಿಗಳಿಗೆ ರೈತರ ಬಳಿ ಹೋಗಿ ರೈತರನ್ನು ಜಾಗೃತಿಗೊಳಿಸಿ ವಿಚಾರ ಸಂಕಿರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಲು ಮನವಿ ಮಾಡಿಕೊಳ್ಳಲಾಗುವುದೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅರವಿಂದ ಕುಲಕರ್ಣಿ, ಮಹಾದೇವಪ್ಪ ತೇಲಿ, ಸಿದ್ಧನಗೌಡ ಪಾಟೀಲ, ಉಮೇಶ ವಾಲೀಕಾರ, ಜಿಲ್ಲಾ ಸಂಘಟನ ಕಾರ್ಯದರ್ಶಿ ಗುರುರಾಜ ಪಡಶೆಟ್ಟಿ ಹೊನಕೇರ್ಪ ತೆಲಗಿ, ಬಬಲೇಶ್ವರ ತಾಲೂಕಾ ಗೌರವ ಅಧ್ಯಕ್ಷ ಸಿದ್ದಪ್ಪ ಕೋಟ್ಯಾಳ, ಬಬಲೇಶ್ವರ ತಾಲೂಕಾ ತಾಲೂಕಾಧ್ಯಕ್ಷ ಗುರಣಗೌಡ ಬಿರಾದಾರ, ಪ್ರಭುಲಿಂಗ ಕಾರಜೋಳ, ಸಂತೋಷ ಚೌರಿ, ಒಗೆಪ್ಪ ಬಿರಾದಾರ, ಸೋಮಯ್ಯ ನಂದಿಕೋಲ, ಅಮೋಗಿ ಉಕ್ಕಲಿ, ಮಲ್ಲಿಕಾರ್ಜುನ ಬಟಗಿ, ಬೋಗೇಶ ಸೊಲಾಪೂರ, ನೀಲಮ್ಮ ಕಟ್ಟಿಮನಿ, ಲಂಕೆಪ್ಪ ತಳವಾರ, ನಬಿರಸೂಲ ಬಿರಾದಾರ, ಗುರ್ಪ ತಳವಾರ, ಅಜೀಜ ಪಾಟೀಲ ಮುಂತಾದ ನೂರಾರು ರೈತರು ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಇದ್ದರು.
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ? 