ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸೈಯದಾ ಖೈರುನ್ನಿಸಾ ಹುಸೇನಿ ಗೆ ಪ್ರಥಮ ಬಹುಮಾನ

ಪ್ರತಿಭಾ ಕಾರಂಜಿ  ಸ್ಪರ್ಧೆಯಲ್ಲಿ ಸೈಯದಾ ಖೈರುನ್ನಿಸಾ ಹುಸೇನಿ ಗೆ ಪ್ರಥಮ ಬಹುಮಾನ  Syeda Khairunnisa Hussaini wins first prize in Pratibha Karanji competition

ಕೊಪ್ಪಳ 26:   ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕೊಪ್ಪಳ ತಾಲೂಕ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಪ್ರಸಕ್ತ ಸಾಲಿನ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ 2025ರ ಸ್ಪರ್ಧೆಯಲ್ಲಿ ನಗರದ ಟ್ರೀ ನಿಟಿ ಪಬ್ಲಿಕ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನೀ ಕುಮಾರಿ ಸೈಯದಾ ಖೈರುನ್ನಿಸಾ ಹುಸೇನಿ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ವಿಜಯಪುರದ ಐತಿಹಾಸಿಕ ಪ್ರಸಿದ್ಧ ಗೋಲ ಗುಮ್ಮಟ ಸ್ತಬ್ಧ ಚಿತ್ರ ಚಿತ್ರಕಲೆ ನಿರ್ಮಿಸಿ ಪ್ರಥಮ ಬಹುಮಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ,ಕುಮಾರಿ ಸೈಯದಾ ಖೈರುನ್ನಿಸಾ ಹುಸೇನಿ ನಗರದ ಅಲ್ಪಸಂಖ್ಯಾತ ಸಮುದಾಯದ ಯುವ ನಾಯಕ ಸಮಾಜ ಸೇವಕ ಸೈಯದ್ ಆಬೀದ್ ಹುಸೇನಿ ಯವರ ಸುಪುತ್ರಿ ಯಾಗಿದ್ದು ಸದರಿ ವಿದ್ಯಾರ್ಥಿನಿ ಸರಕಾರದ ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಏರಿ​‍್ಡಸಿದ ಪ್ರತಿಭಾ ಕಾರಂಜಿ ಕಲೋತ್ಸವ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗಳಿಸಿರುವುದಕ್ಕೆ ಇಂದಿನ ವಿವಿಧ ಸಂಘಟನೆಗಳು ಹರುಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ, ಪ್ರತಿಭಾ ಕಾರಂಜಿ ಬಹುಮಾನ ವಿತರಣಾ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಅವರು ಸದರಿ ವಿದ್ಯಾರ್ಥಿ ನಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಣೆ ಮಾಡಿ ಶುಭ ಕೋರಿದರು ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಂಯೋಜಕರು ಸಿ ಆರ್ ಪಿ, ಬಿ ಆರ್ ಪಿ ವಿಭಾಗದ ಸಂಪನ್ಮೂಲ ವ್ಯಕ್ತಿಗಳು ,ಶಿಕ್ಷಕರು ಪಾಲ್ಗೊಂಡಿದ್ದರು,