ಮಡಿಕೇರಿ, ನ. 12 : ಬ್ಯಾಂಕ್ ಮ್ಯಾನೇಜರ್ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಕಡಗದಾಳು ಎಂಬ ಗ್ರಾಮದಲ್ಲಿ ನಡೆದಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮ್ಯಾನೇಜರ್ ಸತೀಶ್ ಎಂಬವರ ಮೇಲೆ ಗಣಪತಿ ಎಂಬುವವರು ಹಲ್ಲೆ ಮಾಡಿದ್ದಾರೆ. ಆರೋಪಿ ಗಣಪತಿ, ಸತೀಶ್ ಬಳಿ 10 ಸಾವಿರ ರೂ ಸಾಲ ಮಾಡಿಕೊಂಡಿದ್ದರು. 10 ಸಾವಿರ ಪೈಕಿ ಗಣಪತಿ 2,500ರೂ ಉಳಿಸಿಕೊಂಡಿದ್ದರು ಎನ್ನಲಾಗಿದೆ. ಮಾರಾಟಕ್ಕಿಟ್ಟಿದ್ದ ಕತ್ತಿಯಿಂದ ಬ್ಯಾಂಕ್ ನಲ್ಲೇ ಗಣಪತಿ, ಸತೀಶ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಲ್ಲೆಗೊಳಗಾದ ಸತೀಶ್ ಅವರ ತಲೆ ಭಾಗದಲ್ಲಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿತೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.